ಶಿವಮೊಗ್ಗ : ವಿಶೇಷಚೇತನ ಮಗನ ಚಿಕಿತ್ಸೆಗೆ ಸರ್ಕಾರದಿಂದ ನೆರವು ನೀಡಬೇಕೆಂದು ಆಗ್ರಹಿಸಿ ಮುಖ್ಯಮಂತ್ರಿಗಳ ವಿರುದ್ಧ ಧಿಕ್ಕಾರ ಕೂಗಿ ಶಿಕಾರಿಪುರ ಆಶ್ರಯ ಬಡಾವಣೆಯ ನಿವಾಸಿ ಹಜರತ್ ಅಲಿ ಎಂಬುವರು ಜಿಲ್ಲಾಧಿಕಾರಿ ಕಚೇರಿ ಎದುರು ಮಗನೊಂದಿಗೆ ಪ್ರತಿಭಟಿಸಿದರು.
ಕಳೆದ 12 ವರ್ಷಗಳಿಂದ ಅಧಿಕಾರಿಗಳಿಗೆ, ರಾಜಕಾರಣಿಗಳಿಗೆ ಮನವಿ ಮಾಡಿ ಸಾಕಾಗಿದೆ. ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರ ಬಳಿ ಸಮಸ್ಯೆ ಹೇಳೋಣ ಎಂದು ಸಿಎಂ ಮನೆಗೆ ಹೋದರೂ ಸಿಎಂ, ಸಂಸದರು ಸಹ ಸ್ಪಂದಿಸಿಲ್ಲ.
ಪೊಲೀಸರು ಸಹ ಅವರ ಹತ್ತಿರ ಹೋಗಲು ಬಿಡುವುದಿಲ್ಲ. ವಿಶೇಷ ಚೇತನ ಮಗುವಿಗೆ ಸ್ಪಂದಿಸಲು ಮಾನವೀಯತೆ ಇಲ್ಲದ ಸಿಎಂ ಎಂದು ಆಕ್ರೋಶ ವ್ಯಕ್ತಪಡಿಸಿ ಧಿಕ್ಕಾರ ಕೂಗಿ ಪ್ರತಿಭಟಿಸಿದರು.
ಓದಿ: ಶ್ರೀಮಂತರು ಬಿಪಿಎಲ್ ಕಾರ್ಡ್ ಹೊಂದಿದ್ದರೆ, ತಕ್ಷಣ ವಾಪಸ್ ಮಾಡಿ: ಸಿಎಂ ಬಿಎಸ್ವೈ
ಸರ್ಕಾರ ಮಾನವೀಯ ದೃಷ್ಟಿಯಿಂದ ನಮಗೊಂದು ಸೂರು ಕಲ್ಪಿಸಿಕೊಡಲಿ ಹಾಗೂ ವಿಶೇಷ ಚೇತನ ಮನಗ ಚಿಕಿತ್ಸೆಯನ್ನು ಸರ್ಕಾರ ಭರಿಸಲಿ. ಜೊತೆಗೆ ಒಂದು ಉಚಿತ ಜಂಟಿ ಪಾಸ್ ವಿತರಿಸಬೇಕು ಎಂದು ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟಿಸಿದರು.