ETV Bharat / state

ಸುನ್ನಿ ಪಂಗಡದ ಮೇಲೆ ನಿಂದನೆ ಆರೋಪ : ಶಿವಮೊಗ್ಗದಲ್ಲಿ ಪ್ರತಿಭಟನೆ - ಸುನ್ನಿ ಜಮೈತ್ ಉಲ್ಮಾ ಕಮಿಟಿ ವತಿಯಿಂದ ಪ್ರತಿಭಟನೆ

ಕುರಾನಿನ ಬಗ್ಗೆ ಹಾಗೂ ಪ್ರವಾದಿಗಳ ಬಗ್ಗೆ ಏನನ್ನೂ ಅರಿಯದೆ ಅಪವಿತ್ರ ಪುಸ್ತಕವನ್ನು ಮುದ್ರಿಸಿ ಬಿಡುಗಡೆ ಮಾಡಿ ಕೋಮು ಭಾವನೆ ಕೆರಳಿಸುವ ಹೀನ ಕೃತ್ಯ ಮಾಡಿರುವ ವಸೀಂ ರಿಜ್ವಿಯ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿ ಸಾವಿರಕ್ಕೂ ಹೆಚ್ಚು ಜನ ಬೃಹತ್ ಪ್ರತಿಭಟನೆ ನಡೆಸಿದರು..

Jamaat Ulama Committee Protest in Shivamogga
ಶಿವಮೊಗ್ಗದಲ್ಲಿ ಸುನ್ನಿ ಜಮೈತ್ ಉಲ್ಮಾ ಕಮಿಟಿ ಪ್ರತಿಭಟನೆ
author img

By

Published : Nov 15, 2021, 5:06 PM IST

ಶಿವಮೊಗ್ಗ : ತ್ರಿಪುರ ರಾಜ್ಯದಲ್ಲಿ ಮುಸ್ಲಿಂ ಸಮುದಾಯದ ಮೇಲೆ ನಡೆದ ಹಲ್ಲೆ ಹಾಗೂ ಸುನ್ನಿ ಪಂಗಡದ ನಿಂದನೆ ಖಂಡಿಸಿ ನಗರದ ಈದ್ಗಾ ಮೈದಾನದಲ್ಲಿ ಸುನ್ನಿ ಜಮೈತ್ ಉಲ್ಮಾ ಕಮಿಟಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ಶಿವಮೊಗ್ಗದಲ್ಲಿ ಸುನ್ನಿ ಜಮೈತ್ ಉಲ್ಮಾ ಕಮಿಟಿ ಪ್ರತಿಭಟನೆ

ಮುಸ್ಲಿಂ ಸಮುದಾಯದವರ ಮೇಲೆ ನಡೆದ ಹಲ್ಲೆ ಖಂಡನೀಯ. ಎಲ್ಲಾ ಧರ್ಮ ಹೇಳುವುದು ಒಂದೇ. ಧರ್ಮದ ಮೂಲ ಆಶಯ ಮನುಷ್ಯರನ್ನು ಒಳ್ಳೆಯ ಮಾರ್ಗದಲ್ಲಿಯೇ ಬೆಳೆಸುವುದೇ ಆಗಿದೆ.

ಆದರೆ, ಧರ್ಮದ ಹೆಸರಿನಲ್ಲಿ ಹಲ್ಲೆ ನಡೆಸುವುದು ಮಾನವ ಧರ್ಮಕ್ಕೆ ಅವಮಾನ ಮಾಡಿದಂತೆ ಆಗಿದೆ. ಆದರೆ, ನಮ್ಮ ಧರ್ಮ ಶ್ರೇಷ್ಠ ಎಂದು ಇತರೆ ಧರ್ಮಗಳನ್ನು ಕೀಳಾಗಿ ನೋಡುವುದು ಸರಿಯಲ್ಲ. ಈ ರೀತಿ ಹಲ್ಲೆ ನಡೆಸಿದವರ ವಿರುದ್ದ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಲಾಯಿತು.

ಶಿಯಾ ಪಂಗಡಕ್ಕೆ ಸೇರಿದ ವಸೀಂ ರಿಜ್ವಿ ಎನ್ನುವ ವ್ಯಕ್ತಿ ಪ್ರವಾದಿ ಹಜ್ರತ್ ಮೊಹಮ್ಮದ್ ಅವರ ಕುರಿತು ಅವಹೇಳನಕಾರಿ ಹೇಳಿಕೆ ನೀಡುವ ಮೂಲಕ ಸುನ್ನಿ ಪಂಗಡಕ್ಕೆ ಸೇರಿದ ಮುಸ್ಲಿಂ ಸಮುದಾಯಕ್ಕೆ ನಿಂದಿಸಿದ್ದು, ಆತನ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಕುರಾನಿನ ಬಗ್ಗೆ ಹಾಗೂ ಪ್ರವಾದಿಗಳ ಬಗ್ಗೆ ಏನನ್ನೂ ಅರಿಯದೆ ಅಪವಿತ್ರ ಪುಸ್ತಕವನ್ನು ಮುದ್ರಿಸಿ ಬಿಡುಗಡೆ ಮಾಡಿ ಕೋಮು ಭಾವನೆ ಕೆರಳಿಸುವ ಹೀನ ಕೃತ್ಯ ಮಾಡಿರುವ ವಸೀಂ ರಿಜ್ವಿಯ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿ ಸಾವಿರಕ್ಕೂ ಹೆಚ್ಚು ಜನ ಬೃಹತ್ ಪ್ರತಿಭಟನೆ ನಡೆಸಿದರು.

ದೇಶದಲ್ಲಿ ಅಣ್ಣತಮ್ಮರಂತೆ ಬದುಕುತ್ತಿರುವವರ ಮಧ್ಯೆ ರಿಜ್ವಿಯಂತಹ ಕಿಡಿಗೇಡಿ ಕೋಮು ಸಾಮರಸ್ಯವನ್ನು ಹಾಳು ಮಾಡಲು ಪ್ರಯತ್ನಿಸುತ್ತಿದ್ದಾರೆ. ಹಾಗಾಗಿ, ಕೂಡಲೇ ಇಂತಹ ವ್ಯಕ್ತಿಯ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿ ಪ್ರತಿಭಟಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.