ETV Bharat / state

12 ನಾಟಿ‌ ಕೋಳಿ ತಿಂದು ಹಾಕಿದ ಬೀದಿ ನಾಯಿಗಳು: ಗ್ರಾಮ ಪಂಚಾಯತ್​ಗೆ ದೂರು - ಬೀದಿ ನಾಯಿ ದಾಳಿ

ಶಿವಮೊಗ್ಗದ ಮತ್ತೋಡು ಗ್ರಾಮದಲ್ಲಿ 12 ನಾಟಿ‌ ಕೋಳಿಗಳನ್ನು ಬೀದಿ ನಾಯಿಗಳು ಸಂಪೂರ್ಣ ತಿಂದು ಹಾಕಿದ್ದು, ಗ್ರಾಮ ಪಂಚಾಯತ್​ಗೆ ದೂರು ನೀಡಲಾಗಿದೆ.

chickens
ನಾಟಿ‌ ಕೋಳಿ
author img

By ETV Bharat Karnataka Team

Published : Sep 9, 2023, 6:57 AM IST

ಶಿವಮೊಗ್ಗ : ಮನೆಯಲ್ಲಿ ಸಾಕಿದ್ದ 30 ನಾಟಿ ಕೋಳಿಗಳ ಪೈಕಿ 12 ಅನ್ನು ಬೀದಿನಾಯಿಗಳು ತಿಂದು ಹಾಕಿರುವ ಘಟನೆ ತಾಲೂಕಿನ ಮತ್ತೋಡು ಗ್ರಾಮದಲ್ಲಿ ನಡೆದಿದೆ. ಗ್ರಾಮದ ನಿಂಗಮ್ಮ ಎಂಬುವರು 30 ನಾಟಿ ಕೋಳಿಗಳನ್ನು ಸಾಕಿದ್ದು, ಮನೆಯ ಹಿಂಭಾಗದಲ್ಲಿ ಮೇಯಲು ಬಿಟ್ಟಿದ್ದರು. ಈ ವೇಳೆ ಏಕಾಏಕಿ ಐದಾರು ಬೀದಿ ನಾಯಿಗಳು ಮನೆಯ ಹಿಂಭಾಗದ ತಡೆಗೋಡೆಯನ್ನು ಹಾರಿ ಬಂದು 12 ಕೋಳಿಗಳನ್ನು ಸಂಪೂರ್ಣ ತಿಂದು ಹಾಕಿದ್ದು, ನಾಲ್ಕು ಕೋಳಿಗಳನ್ನು ಅರ್ಧಂಬರ್ಧ ತಿಂದು ಹಾಕಿವೆ. ಇದರಿಂದ ನಿಂಗಮ್ಮ ಅವರಿಗೆ ಸಾವಿರಾರು ರೂಪಾಯಿ ನಷ್ಟ ಉಂಟಾಗಿದೆ.

ಹೀಗೆ ತಡೆಗೋಡೆ ಹಾರಿ ಕೋಳಿಗಳನ್ನು ತಿಂದ ನಾಯಿಗಳು ಮುಂದೆ ಬೀದಿಯಲ್ಲಿ ಹೋಗುವ ಮಕ್ಕಳನ್ನು ಬಿಡುತ್ತವೆಯೇ? ಎಂಬ ಅನುಮಾನ ವ್ಯಕ್ತವಾಗಿದೆ. ಪರಿಣಾಮ ಅಬ್ಬಲಗೆರೆ ಗ್ರಾಮ ಪಂಚಾಯತಿ ಅವರು ಅದಷ್ಟು ಬೇಗ ನಾಯಿಗಳನ್ನು ಹಿಡಿದು ಬೇರೆ ಕಡೆ ಕಳುಹಿಸಬೇಕೆಂದು ಪಿಡಿಒ ಅವರಿಗೆ ಪತ್ರ ಬರೆದು ಮನವಿ ಮಾಡಲಾಗಿದೆ.

ಬಾಲಕಿ ಮೇಲೆ ಹುಚ್ಚು ನಾಯಿ ದಾಳಿ : ಕಳೆದ ವಾರ ತಾಲೂಕಿನ ಹೊಳೆ ಬೆಳಗಲು ಗ್ರಾಮದಲ್ಲಿ ಶಾಲಾ ಬಸ್ ಇಳಿದು ಬಾಲಕಿ ಮನೆಗೆ ಹೋಗುವಾಗ ಹುಚ್ಚುನಾಯಿ ದಾಳಿ ಮಾಡಿತ್ತು. ಈ ವೇಳೆ ಗ್ರಾಮಸ್ಥರು ನಾಯಿಯನ್ನು ಓಡಿಸಿದ್ದರು. ಗಾಯಗೊಂಡ ಬಾಲಕಿಯನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲದೆ, ಇದೇ ಬೀದಿನಾಯಿ ಅದೇ ಗ್ರಾಮದ ನಾಲ್ಕೈದು ಜನರ ಮೇಲೂ ದಾಳಿ ನಡೆಸಿತ್ತು.

ಇದನ್ನೂ ಓದಿ : ಮನೆ ಮುಂದೆ ಆಟ ಆಡುತ್ತಿದ್ದ ಮಗು ಮೇಲೆ ಬೀದಿನಾಯಿ ದಾಳಿ : ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಆರೋಗ್ಯಾಧಿಕಾರಿ ಮೇಲೆ ನಾಯಿ ದಾಳಿ : ಕಳೆದ ಆಗಸ್ಟ್ ತಿಂಗಳಿನಲ್ಲಿ ಬಾಣಂತಿ ಆರೋಗ್ಯ ವಿಚಾರಿಸಲು ಹೋದ ಆರೋಗ್ಯ ಇಲಾಖೆ ಸಿಬ್ಬಂದಿ ಮೇಲೆ ನಾಯಿಯೊಂದು ದಾಳಿ ಮಾಡಿ ಗಂಭೀರವಾಗಿ ಗಾಯಗೊಳಿಸಿರುವ ಘಟನೆ ಕೊಡಗು ಜಿಲ್ಲೆಯಲ್ಲಿ ನಡೆದಿತ್ತು. ವಿರಾಜಪೇಟೆ ತಾಲೂಕಿನ ಪಾರಾಣೆ ಗ್ರಾಮದಲ್ಲಿ ಸಮುದಾಯ ಆರೋಗ್ಯ ಅಧಿಕಾರಿ ಕೆ‌ ಕೆ ಭವ್ಯಾ ಮೇಲೆ ಸಾಕು ನಾಯಿಯೊಂದು ದಾಳಿ ಮಾಡಿತ್ತು. ಗಂಭೀರವಾಗಿ ಗಾಯಗೊಂಡ ಅವರನ್ನು ಮಡಿಕೇರಿ ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು.

ಇದನ್ನೂ ಓದಿ : ಬಾಣಂತಿ ಆರೋಗ್ಯ ವಿಚಾರಿಸಲು ಹೋದ ಸಮುದಾಯ ಆರೋಗ್ಯಾಧಿಕಾರಿ ಮೇಲೆ ನಾಯಿ ದಾಳಿ: ಗಂಭೀರ ಗಾಯ

ಹಾಗೆಯೇ, ಮನೆ ಮುಂದೆ ಆಟವಾಡುತ್ತಿದ್ದ ಮಗು ಮೇಲೆ ಬೀದಿನಾಯಿಯೊಂದು ದಾಳಿ ನಡೆಸಿರುವ ಘಟನೆ ತುಮಕೂರು ಜಿಲ್ಲೆಯ ಕುಣಿಗಲ್​ ಪಟ್ಟಣದಲ್ಲಿ ಆಗಸ್ಟ್​ 12 ರಂದು ನಡೆದಿತ್ತು. ಇಲ್ಲಿನ 17ನೇ ವಾರ್ಡ್​ನಲ್ಲಿನ ಮನೆ ಮುಂದೆ ಐದಾರು ಮಕ್ಕಳು ಆಟವಾಡುತ್ತಿದ್ದಾಗ 4 ವರ್ಷದ ಮಗುವಿನ ಮೇಲೆ ಬೀದಿ ನಾಯಿ ದಾಳಿ ನಡೆಸಿತ್ತು. ಪರಿಣಾಮ, ಸುಪ್ರಿಯಾ ಎಂಬ ಮಗು ಗಂಭೀರವಾಗಿ ಗಾಯಗೊಂಡಿತ್ತು.

ಇದನ್ನೂ ಓದಿ : ಬೀದಿ ನಾಯಿ ರಕ್ಷಿಸಿದ ಕುಟುಂಬದ ಮೇಲೆ ದ್ವೇಷ : ಬಾಲಕನ ಥಳಿಸಿ ಕೊಂದ ನೆರೆಮನೆ ವ್ಯಕ್ತಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.