ಶಿವಮೊಗ್ಗ: ರಾಜ್ಯ ಬಿಜೆಪಿಯ ವಿಶೇಷ ಸಭೆಗೆ ಸಿಎಂ ಯಡಿಯೂರಪ್ಪ ತಮ್ಮ ತವರು ಜಿಲ್ಲೆಗೆ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರ ಜೊತೆ ಆಗಮಿಸಿದ್ದಾರೆ.
ಬೆಂಗಳೂರಿನಿಂದ ಸಿಎಂ ಬಿ.ಎಸ್.ಯಡಿಯೂರಪ್ಪ ಅರುಣ್ ಸಿಂಗ್ ಹಾಗೂ ಡಿಸಿಎಂ ಗೋವಿಂದ ಕಾರಜೋಳ ಆಗಮಿಸಿದ್ದಾರೆ. ನಗರದ ಪ್ರವಾಸಿ ಮಂದಿರದ ಹೆಲಿಪ್ಯಾಡ್ಗೆ ಆಗಮಿಸಿದ ಸಿಎಂ ಮೊದಲು ಪೊಲೀಸ್ ಗೌರವ ವಂದನೆ ಸ್ವೀಕರಿಸಿದರು. ನಂತರ ಜಿಲ್ಲಾ ಬಿಜೆಪಿ ವತಿಯಿಂದ ಅದ್ಧೂರಿ ಸ್ವಾಗತ ಕೋರಲಾಯಿತು.
ಓದಿ: ಸಚಿವ ಸಂಪುಟ ವಿಸ್ತರಣೆ ಬಗ್ಗೆ ಅರುಣ್ ಸಿಂಗ್ ಜೊತೆ ಚರ್ಚಿಸುತ್ತೇವೆ: ಸಿಎಂ
ಜಾನಪದ ಕಲಾ ತಂಡಗಳಾದ ಡೊಳ್ಳು ಕುಣಿತ ಹಾಗೂ ಚಂಡೆಮದ್ದಳೆಯ ಮೂಲಕ ಸಿಎಂ ಯಡಿಯೂರಪ್ಪ, ಅರುಣ್ ಸಿಂಗ್, ಗೋವಿಂದ ಕಾರಜೋಳರಿಗೆ ಸ್ವಾಗತ ಕೋರಲಾಯಿತು.
ಪೊಲೀಸರಿಂದ ನೂಕುನುಗ್ಗಲು:
ಜಾನಪದ ಕಲಾ ತಂಡಗಳ ಮೂಲಕ ಸ್ವಾಗತದ ಮೆರವಣಿಗೆಯಲ್ಲಿ ಸಾಗುವಾಗ ಪೊಲೀಸರೇ ನೂಗುನುಗ್ಗಲು ಮಾಡಿದರು. ಅಲ್ಲದೆ ಮಾಧ್ಯಮದವರಿಗೂ ಚಿತ್ರೀಕರಣಕ್ಕೆ ಅಡ್ಡಿ ಪಡಿಸಿದರು ಎನ್ನಲಾಗಿದೆ.
ಸುಸ್ತಾದ ಸಿಎಂ ಸಿಡಿಮಿಡಿ:
ಹೆಲಿಪ್ಯಾಡ್ ಸ್ವಲ್ಪ ಕೆಳಗಿದ್ದು, ಗೇಟ್ ದಾಟಿ ಮೇಲೆ ಬರುವ ವೇಳೆಗಾಗಲೇ ಬಿಸಿಲಿನಲ್ಲಿ ಬಳಲಿದ ಸಿಎಂ ಸಿಡಿಮಿಡಿಗೊಂಡರು. ನಂತರ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡದೆ ಅರುಣ್ ಸಿಂಗ್ ಜೊತೆ ಕಾರಿನಲ್ಲಿ ಮನೆಗೆ ತೆರಳಿದರು.