ಶಿವಮೊಗ್ಗ: ಒಂದು ವರ್ಷದ ಅವಧಿಯಲ್ಲಿ ಜಿಲ್ಲೆಯಲ್ಲಿ ಆಡಳಿತಾತ್ಮಕವಾಗಿ ಅನೇಕ ಬದಲಾವಣೆಗಳನ್ನ ತಂದು ಉತ್ತಮ ಆಡಳಿತ ನಡೆಸಿದ ನಿರ್ಗಮಿತ ಜಿಲ್ಲಾಧಿಕಾರಿ ಕೆ ಎ ದಯಾನಂದ ಅವರಿಗೆ ಶಿವಮೊಗ್ಗ ನಾಗರಿಕರ ಪರವಾಗಿ ಕಾಯಕ ಶ್ರೇಷ್ಠ ಪ್ರಶಸ್ತಿಯನ್ನ ನಗರದ ಅಂಬೇಡ್ಕರ್ ಭವನದಲ್ಲಿ ನೀಡಲಾಯಿತು.
ಜಿಲ್ಲಾಧಿಕಾರಿಯಾಗಿ ಒಂದು ವರ್ಷದ ಅವಧಿಯಲ್ಲಿ ಗ್ರಾಮ ವಾಸ್ತವ್ಯ, ಹತ್ತು ವರ್ಷಗಳ ಬಳಿಕ ಸಹ್ಯಾದ್ರಿ ಉತ್ಸಾಹ, ಜಿಲ್ಲೆಯನ್ನ ಮತದಾನ ಪ್ರಮಾಣದಲ್ಲಿ ಮೊದಲ ಸ್ಥಾನಕ್ಕೆ ತಂದದ್ದು, ಸ್ಕಿಲ್ ಸ್ಕೂಲ್ ಮೂಲಕ ಕೊಳಚೆ ಪ್ರದೇಶದ ಮಕ್ಕಳಿಗೆ ತಾವೇ ಶಿಕ್ಷಕರಾಗಿ ಪಾಠ ಮಾಡಿದ್ದು, ಪರಿಸರ ಸ್ನೇಹಿ ಕುಟುಂಬ ಪ್ರಶಸ್ತಿ ನೀಡುವ ಮೂಲಕ ಪರಿಸರ ಸ್ನೇಹಿ ಆಡಳಿತ ನಡೆಸಿದ್ದು, ಹೀಗೆ ಜನಮೆಚ್ಚುವ ರೀತಿ ತಮ್ಮ ಸೇವೆ ಸಲ್ಲಿಸಿದ್ದಾರೆ ದಯಾನಂದ. ಈಗ ಬೇರೋಂದು ಜಿಲ್ಲೆಗೆ ನಿರ್ಗಮಿಸುತ್ತಿರುವ ಜಿಲ್ಲಾಧಿಕಾರಿಗಳಿಗೆ ಕಾಯಕ ಶ್ರೇಷ್ಠ ಪ್ರಶಸ್ತಿ ನೀಡುವ ಮೂಲಕ ಅವರ ಕಾರ್ಯಕ್ಕೆ ಅಭಿನಂದಿಸಲಾಯಿತು.