ETV Bharat / state

ಕ್ವಾರಂಟೈನ್ ವಿರೋಧಿಸುವವರ ಮನವೊಲಿಸಿದ ಶಿವಮೊಗ್ಗ ಜಿಲ್ಲಾಡಳಿತ

ಜಿಲ್ಲೆಗೆ ವಿವಿಧೆಡೆಗಳಿಂದ ಬಂದವರನ್ನು ಆಯಾ ತಾಲೂಕಿನ ವಸತಿ ಶಾಲೆ, ಹಾಸ್ಟೆಲ್‌ಗಳಲ್ಲಿ ಕ್ವಾರಂಟೈನ್ ಮಾಡುವ ವಿಚಾರವನ್ನು ಮೊದಲು ವಿರೋಧಿಸಿದ್ದ ಗ್ರಾಮಸ್ಥರ ಮನವೊಲಿಸಲಾಗಿದೆ ಎಂದು ಶಿವಮೊಗ್ಗ ಜಿಲ್ಲಾಧಿಕಾರಿ ತಿಳಿಸಿದ್ದಾರೆ.

author img

By

Published : May 13, 2020, 10:04 AM IST

Shivamogga people are okay with quarantine center
ಕ್ವಾರಂಟೈನ್ ವಿರೋಧಿಸುವವರ ಮನವೊಲಿಸಿದ ಶಿವಮೊಗ್ಗ ಜಿಲ್ಲಾಡಳಿತ

ಶಿವಮೊಗ್ಗ: ಅನ್ಯ ರಾಜ್ಯ, ಜಿಲ್ಲೆಗಳಿಂದ ಶಿವಮೊಗ್ಗಕ್ಕೆ ಮರಳಿ ಬರುವ ಮೂಲ ನಿವಾಸಿಗಳನ್ನು ನಿಯಮ ಪ್ರಕಾರ ಕ್ವಾರಂಟೈನ್ ಮಾಡಲು ಕ್ವಾರಂಟೈನ್​ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಆದರೆ, ಇದಕ್ಕೆ ಸ್ಥಳೀಯರಿಂದ ವಿರೋಧ ವ್ಯಕ್ತವಾಗಿತ್ತು. ಸದ್ಯ ಅವರ ಮನವೊಲಿಸಿ ಕೇಂದ್ರಗಳನ್ನು ಸ್ಥಾಪಿಸಿದ್ದಲ್ಲಿಯೇ ಕ್ವಾರಂಟೈನ್ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಕೆ. ಬಿ. ಶಿವಕುಮಾರ್ ತಿಳಿಸಿದ್ದಾರೆ.

ವಿವಿಧೆಡೆಗಳಿಂದ ಬಂದವರನ್ನು ಆಯಾ ತಾಲೂಕಿನ ವಸತಿ ಶಾಲೆ, ಹಾಸ್ಟೆಲ್‌ಗಳಲ್ಲಿ ಕ್ವಾರಂಟೈನ್ ಮಾಡಲಾಗುತ್ತಿದೆ. ಇದಕ್ಕೆ ಮೊದಲು ವಿರೋಧ ವ್ಯಕ್ತಪಡಿಸಿದ ಸ್ಥಳೀಯ ಗ್ರಾಮಸ್ಥರು, ನಿನ್ನೆ ರಾತ್ರಿ ಕ್ವಾರಂಟೈನ್‌ಗೆ ಕರೆ ತಂದ ಬಸ್‌ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಅನಂತರ ಈ ಬಗ್ಗೆ ಗ್ರಾಮಸ್ಥರಿಗೆ ತಿಳಿ ಹೇಳಲಾಗಿದೆ. ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ವರ್ತಿಸದಿದ್ದಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು ಎಂಬ ಎಚ್ಚರಿಕೆಯನ್ನು ನೀಡಿದ್ದು, ಸದ್ಯ ಹಲವರು ಸಹಕರಿಸಿದ್ದಾರೆ ಎಂದು ಜಿಲ್ಲಾಧಿಕಾರಿ ಹೇಳಿದರು.

ಜಿಲ್ಲೆಯಲ್ಲಿ ಇದುವರೆಗೂ 2,996 ರಕ್ತದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, 2,796 ರಕ್ತದ ಮಾದರಿಗಳ ವರದಿ ನೆಗೆಟಿವ್​ ಬಂದಿದೆ. ಉಳಿದ 200 ಮಾದರಿಯ ಫಲಿತಾಂಶ ಇನ್ನಷ್ಟೇ ಬರಬೇಕಿದೆ.

ಕಳೆದ ಎರಡು ದಿನಗಳಿಂದ ಸುಮಾರು 800 ಜನ ಜಿಲ್ಲೆಗೆ ಬರಲು ಆನ್‌ಲೈನ್ ಮೂಲಕ ಅನುಮತಿ ಕೋರಿದ್ದಾರೆ. ಇದರಲ್ಲಿ 600 ಜನರಿಗೆ ಬರಲು ಅನುಮತಿ ನೀಡಲಾಗಿದೆ. ಇವರನ್ನೂ ಸಹ ಪರೀಕ್ಷೆಗೊಳಪಡಿಸಿ, ನಂತರ ಕ್ವಾರಂಟೈನ್ ಮಾಡಲಾಗುವುದು ಎಂದರು.

ಸದ್ಯ ಜಿಲ್ಲೆಯಲ್ಲಿ ಎರಡನೇ ಹಂತದ ಮನೆ ಮನೆ ಸರ್ವೆ ನಡೆಸಲಾಗುತ್ತಿದೆ. ಇಲ್ಲೂ ಸಹ ರಕ್ತದ ಮಾದರಿಯನ್ನು ಪಡೆದು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಜಿಲ್ಲೆಯ ಗಡಿ ಭಾಗದ ಹಾಡೋನಹಳ್ಳಿ, ಆಗುಂಬೆ ಹಾಗೂ ಮಾಸ್ತಿಕಟ್ಟೆ ಚೆಕ್‌ಪೋಸ್ಟ್‌ಗಳಲ್ಲಿ ನಿರಂತರ ತಪಾಸಣೆ ನಡೆಯುತ್ತಿದೆ. ಕೆಲವು ಹಳ್ಳಿಗಳನ್ನು ಗುರುತಿಸಲಾಗಿದ್ದು, ಅಲ್ಲಿನ ಗ್ರಾಮಸ್ಥರನ್ನು ರಕ್ತ ಪರೀಕ್ಷೆಗೆ ಒಳಪಡಿಸಲು ಆದೇಶಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.