ETV Bharat / state

ಕೋವಿಡ್ ಆಸ್ಪತ್ರೆಯಿಂದ ಯಾರು ಪರಾರಿಯಾಗಿಲ್ಲ: ಶಿವಮೊಗ್ಗ ಡಿಸಿ ಸ್ಪಷ್ಟನೆ

ಶಿವಮೊಗ್ಗದ ಕೋವಿಡ್ ಆಸ್ಪತ್ರೆಯಿಂದ ಯಾವ ರೋಗಿಯೂ ಪರಾರಿಯಾಗಿಲ್ಲ ಎಂದು ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್ ಸ್ಪಷ್ಟನೆ ನೀಡಿದ್ದಾರೆ.

author img

By

Published : May 18, 2020, 7:40 PM IST

shimogha dc shivkumar pressmeet
ಶಿವಮೊಗ್ಗ ಡಿಸಿ ಸ್ಪಷ್ಟನೆ

ಶಿವಮೊಗ್ಗ: ಶಿವಮೊಗ್ಗದ ಕೋವಿಡ್ ಆಸ್ಪತ್ರೆಯಿಂದ ಯಾರೂ ಪರಾರಿಯಾಗಿಲ್ಲ ಎಂದು ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.

ತಮ್ಮ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಸ್ಪಷ್ಟನೆ ನೀಡಿದ ಅವರು, ಪರಾರಿಯಾದ ವ್ಯಕ್ತಿ ಬೇರೆ ಜಿಲ್ಲೆಯಿಂದ ಬಂದವರಾಗಿದ್ದು, ಅವರು ಶೀತ, ಜ್ವರಕ್ಕೆ ಬಂದಿದ್ದರು. ಅವರನ್ನು ಸಹ ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿತ್ತು. ಆದ್ರೆ ಅವರ ವರದಿ ನೆಗೆಟಿವ್ ಬಂದಿದೆ.

ಶಿವಮೊಗ್ಗ ಡಿಸಿ ಸ್ಪಷ್ಟನೆ
ಮೆಗ್ಗಾನ್ ಕೋವಿಡ್ ಆಸ್ಪತ್ರೆಯಲ್ಲಿ ಪ್ಲೋ ಕಾರ್ನರ್, ಕ್ವಾರಂಟೈನ್, ಚಿಕಿತ್ಸಾ ಘಟಕ ಹಾಗೂ ತೀವ್ರ ನಿಗಾ ಘಟಕ ಹೀಗೆ ನಾಲ್ಕು ವಿಭಾಗಗಳಿವೆ. ಕೋವಿಡ್ ಆಸ್ಪತ್ರೆಯ ಉಸ್ತುವಾರಿಯನ್ನು ಸಿಮ್ಸ್ ನಿರ್ದೇಶಕ ಡಾ.ಗುರುಪಾದಪ್ಪ ಮಾಡುತ್ತಿದ್ದಾರೆ. ಇವರ ಮೇಲೆ ಜಿಲ್ಲಾ ‌ಪಂಚಾಯತ್ ಸಿಇಒ ಅವರು ಉಸ್ತುವಾರಿ ಮಾಡುತ್ತಿದ್ದಾರೆ. ಇದರಿಂದ ಇಲ್ಲಿ ಈ ರೀತಿಯ ಘಟನೆ ನಡೆದಿಲ್ಲ. ಆಸ್ಪತ್ರೆಗೆ ಬಂದವರಿಗೆ ದಾಖಲಾಗಲು ಹೇಳಲಾಗಿತ್ತು. ಆದರೆ ಅವರು ಮತ್ತೆ ಊರಿಗೆ ವಾಪಸ್ ಹೋಗಿದ್ದಾರೆ. ಈ ಬಗ್ಗೆ ಯಾರು ಆಂತಕಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ. ಜಿಲ್ಲೆಯಲ್ಲಿ ಎಲ್ಲವೂ ಸರಿಯಾಗಿ ನಡೆದುಕೊಂಡು ಹೋಗುತ್ತಿದೆ ಎಂದು ತಿಳಿಸಿದರು.

ಹಿನ್ನೆಲೆ:

ಶೀತ, ಜ್ವರ ಎಂದು ಶಿವಮೊಗ್ಗದ ಮೆಗ್ಗಾನ್​ ಆಸ್ಪತ್ರೆಗೆ ಚಿಕ್ಕಮಗಳೂರು ಮೂಲದ ವ್ಯಕ್ತಿಯೊಬ್ಬ ದಾಖಲಾಗಿದ್ದು, ಇದ್ದಕ್ಕಿದ್ದಂತೆ ಆಸ್ಪತ್ರೆಯಿಂದ ಕಾಣೆಯಾಗಿದ್ದಾನೆ ಎಂಬ ವಿಚಾರ ಹರಿದಾಡಿತ್ತು. ಆದರೆ ಆತನ ಕೋವಿಡ್​ ಟೆಸ್ಟ್​ ವರದಿ ನೆಗೆಟಿವ್​ ಬಂದಿತ್ತು. ಆದರೂ ಈ ಸುದ್ದಿ ಜನರ ಆತಂಕಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆ ಈ ಕುರಿತು ಜಿಲ್ಲಾಧಿಕಾರಿ ಶಿವಕುಮಾರ್​ ಸ್ಪಷ್ಟನೆ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.