ETV Bharat / sports

ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಒಂದೇ ಒಂದು ಶತಕ ಬಾರಿಸದೇ ಹೆಚ್ಚು ರನ್​ಗಳಿಸಿದ ಕ್ರಿಕೆಟಿಗರು ಇವರೇ - CRICKETERS WITHOUT CENTURIES

Cricketers Most Runs Without Century: ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಒಂದೂ ಶತಕ ಬಾರಿಸಿದೇ ಈ ಐವರು ಆಟಗಾರರು ಅತಿ ಹೆಚ್ಚು ರನ್​ಗಳಿಸಿದ್ದಾರೆ. ಅವರು ಯಾರೆಂದು ಈ ಸುದ್ಧಿಯಲ್ಲಿ ತಿಳಿಯಿರಿ.

author img

By ETV Bharat Sports Team

Published : 2 hours ago

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ (Getty Images)

ಹೈದರಾಬಾದ್​: ಕ್ರಿಕೆಟ್​ನಲ್ಲಿ ದಾಖಲೆಗಳು ನಿರ್ಮಿಸುವುದು ಮತ್ತು ಮುರಿಯುವುದು ಸಾಮಾನ್ಯ ಸಂಗತಿ ಆಗಿದೆ. ಆದ್ರೆ ಕೆಲವೊಮ್ಮೆ ನಿರ್ಮಾಣಗೊಂಡ ಅಪರೂಪದ ದಾಖಲೆಗಳು ಇಂದಿಗೂ ಅಚ್ಚರಿ ಮೂಡಿಸುತ್ತವೆ. ಇದರಲ್ಲೊಂದು ಈ ಐವರು ಕ್ರಿಕೆಟರ್​ಗಳು ಇದುವರೆಗೆ ಒಂದೇ ಒಂದು ಶತಕ ಸಿಡಿಸದೇ ಕ್ರಿಕೆಟ್​ನಲ್ಲಿ ಹೆಚ್ಚು ರನ್​ಗಳನ್ನು ಕಲೆಹಾಕಿ ದಾಖಲೆ ನಿರ್ಮಿಸಿದ್ದಾರೆ. ಆ ಆಟಗಾರರು ಯಾರೆಂದು ಈ ಸುದ್ದಿಯಲ್ಲಿ ತಿಳಿಯಿರಿ.

ಶೇನ್ ವಾರ್ನ್: ಆಸ್ಟ್ರೇಲಿಯಾದ ದಿಗ್ಗಜ ಸ್ಪಿನ್ನರ್ ಶೇನ್ ವಾರ್ನ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಒಂದು ಬಾರಿಯೂ ಶತಕ ಸಿಡಿಸದೇ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ಬರೆದಿದ್ದಾರೆ. ಅವರು ಒಟ್ಟು 339 ಪಂದ್ಯಗಳಲ್ಲಿ 306 ಇನ್ನಿಂಗ್ಸ್‌ಗಳನ್ನು ಆಡಿ 4172 ರನ್ ಗಳಿಸಿದ್ದಾರೆ. ಇದರಲ್ಲಿ 13 ಅರ್ಧಶತಕಗಳು ಸೇರಿವೆ. ಜತೆಗೆ 145 ಟೆಸ್ಟ್ ಪಂದ್ಯಗಳನ್ನು ಆಡಿ 3154 ರನ್ ಗಳಿಸಿದ್ದಾರೆ. 2001ರಲ್ಲಿ ನ್ಯೂಜಿಲೆಂಡ್ ವಿರುದ್ಧ 99 ರನ್ ಗಳಿಸಿದ್ದು ಗರಿಷ್ಠ ಸ್ಕೋರ್ ಆಗಿದೆ. ಅಲ್ಲದೇ 194 ಏಕದಿನ ಪಂದ್ಯಗಳಲ್ಲಿ 1018 ರನ್ ಗಳಿಸಿದ್ದಾರೆ.

ಶೇನ್​ವಾರ್ನ್​
ಶೇನ್​ವಾರ್ನ್​ (ANI)

ಕಾಲಿನ್ಸ್ ಒಬುಯಾ: ಕೀನ್ಯಾದ ಮಾಜಿ ಆಲ್‌ರೌಂಡರ್ ಕಾಲಿನ್ಸ್ ಒಬುಯಾ 179 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 159 ಇನ್ನಿಂಗ್ಸ್‌ಗಳನ್ನು ಆಡಿ 3786 ರನ್ ಗಳಿಸಿದ್ದಾರೆ. ಎರಡು ದಶಕಗಳಿಗೂ ಹೆಚ್ಚು ಕಾಲ ಕ್ರಿಕೆಟ್​ ಆಡಿದ್ದರೂ ಒಂದೂ ಶತಕ ಸಹ ಸಿಡಿಸಲಾಗಿಲ್ಲ. ಆದರೆ 20 ಅರ್ಧಶತಕಗಳನ್ನು ಸಿಡಿಸಿದ್ದಾರೆ. ಜತೆಗೆ 104 ಏಕದಿನ ಪಂದ್ಯಗಳಲ್ಲಿ 2044 ರನ್ ಗಳಿಸಿದ್ದಾರೆ. ಅವರ ಗರಿಷ್ಠ ಸ್ಕೋರ್ 98* ಆಗಿದೆ. 75 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನೂ ಆಡಿ 1742 ರನ್ ಗಳಿಸಿದ್ದಾರೆ. 96* ಈ ಸ್ವರೂಪದಲ್ಲಿ ದಾಖಲಾಗಿರುವ ಅತ್ಯುತ್ತಮ ಸ್ಕೋರ್​ ಆಗಿದೆ.

ಚಾಮು ಚಿಭಾಭಾ: ಜಿಂಬಾಬ್ವೆಯ ಚಾಮು ಚಿಭಾಭಾ ಅವರು 154 ಇಪಂದ್ಯಗಳಲ್ಲಿ 3316 ರನ್ ಗಳಿಸಿದ್ದಾರೆ. 2015ರಲ್ಲಿ ಪಾಕಿಸ್ತಾನದ ವಿರುದ್ಧ ಅತಿ ಹೆಚ್ಚು 99 ರನ್ ಗಳಿಸಿದ್ದರು. ಅವರ ಹೆಸರಿನಲ್ಲಿ 22 ಅರ್ಧಶತಕಗಳಿವೆ. ಐದು ಟೆಸ್ಟ್ ಪಂದ್ಯಗಳಲ್ಲಿ 175 ರನ್, 109 ಏಕದಿನ ಪಂದ್ಯಗಳಲ್ಲಿ 2474 ರನ್ ಮತ್ತು ಟಿ20ಯಲ್ಲಿ 667 ರನ್ ಗಳಿಸಿದ್ದಾರೆ. ಈ ಅವಧಿಯಲ್ಲಿ ಅವರ ಬ್ಯಾಟ್​ನಿಂದ ಒಂದೇ ಒಂದು ಶತಕ ಕೂಡ ದಾಖಲಾಗಿಲ್ಲ.

ಟಿಮ್​ ಸೌಥಿ
ಟಿಮ್​ ಸೌಥಿ (ANI Photos)

ಟಿಮ್ ಸೌಥಿ: ನ್ಯೂಜಿಲೆಂಡ್‌ನ ಮಾಜಿ ನಾಯಕ ಟಿಮ್ ಸೌಥಿ 387 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 289 ಇನ್ನಿಂಗ್ಸ್‌ಗಳನ್ನು ಆಡಿದ್ದಾರೆ. ಇದರಲ್ಲಿ 3141ರನ್ ಗಳಿಸಿದ್ದಾರೆ. ಒಟ್ಟು ಏಳು ಅರ್ಧಶತಕಗಳು ಸೇರಿವೆ. ಅವರು 100 ಟೆಸ್ಟ್ ಪಂದ್ಯಗಳಲ್ಲಿ ಆರು ಅರ್ಧ ಶತಕಗಳೊಂದಿಗೆ 2098 ರನ್ ಗಳಿಸಿದರು. ಏಕದಿನ ಸ್ವರೂಪದಲ್ಲಿ 161 ಪಂದ್ಯಗಳನ್ನು ಆಡಿ 740 ರನ್ ಗಳಿಸಿದ್ದಾರೆ. ಟಿ20ಯಲ್ಲಿ 303 ರನ್ ಕಲೆಹಾಕಿದ್ದಾರೆ.

ಮಶ್ರಫೆ ಮೊರ್ತಜಾ
ಮಶ್ರಫೆ ಮೊರ್ತಜಾ (ANI Photos)

ಮಶ್ರಫೆ ಮೊರ್ತಜಾ: ಬಾಂಗ್ಲಾದೇಶದ ಮಾಜಿ ನಾಯಕ ಮಶ್ರಫೆ ಮೊರ್ತಜಾ 310 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 264 ಇನ್ನಿಂಗ್ಸ್‌ಗಳನ್ನು ಆಡಿದ್ದು, ಇದರಲ್ಲಿ ನಾಲ್ಕು ಅರ್ಧಶತಕದೊಂದಿಗೆ 2961 ರನ್ ಗಳಿಸಿದ್ದಾರೆ. ಟೆಸ್ಟ್‌ನಲ್ಲಿ 36 ಪಂದ್ಯಗಳಲ್ಲಿ 797 ರನ್ ಗಳಿಸಿದ್ದಾರೆ. ಅವರು 220 ODI ಪಂದ್ಯಗಳಲ್ಲಿ 13.74 ರ ಸರಾಸರಿಯಲ್ಲಿ 1787 ರನ್ ಗಳಿಸಿದ್ದಾರೆ, T20 ಸ್ವರೂಪದಲ್ಲಿ 54 ಪಂದ್ಯಗಳಲ್ಲಿ 377 ರನ್ ಗಳಿಸಿದ್ದಾರೆ.

ಇದನ್ನೂ ಓದಿ: 'ಅದೆಲ್ಲ ಶೋ ಆಫ್': ಮೊಹ್ಮದ್ ​ಶಮಿ ವಿರುದ್ಧ ಮತ್ತೆ ಗುಡುಗಿದ ಮಾಜಿ ಪತ್ನಿ - Shami Ex Wife Hasin Jahan

ETV Bharat Logo

Copyright © 2024 Ushodaya Enterprises Pvt. Ltd., All Rights Reserved.