ಶಿವಮೊಗ್ಗ: ಬೈಕ್ ಸೌಂಡ್ ಅಲರ್ಜಿ ಅಂತ ಸವಾರನ ಮೇಲೆ ಗುಂಡು ಹಾರಿಸಿ, ತಾನು ಆಸ್ಪತ್ರೆಗೆ ದಾಖಲಾಗಿ ಆಸ್ಪತ್ರೆಯಿಂದ ಎಸ್ಕೇಪ್ ಆಗಿದ್ದ ಕುಣಜೆ ಮಂಜುನಾಥ್ ಗೌಡನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಮೇ 26 ರಂದು ತೀರ್ಥಹಳ್ಳಿ ತಾಲೂಕು ಹಣಗೆರೆ ಸಮೀಪದ ತನ್ನ ಮನೆಯ ಮುಂದೆ ಬುಲೆಟ್ ಬೈಕ್ ನಲ್ಲಿ ಬಂದ ರಾಮಚಂದ್ರಪ್ಪ ಎಂಬಾತನ ಕಾಲಿಗೆ ನಾಡ ಬಂದೂಕಿನಿಂದ ಗುಂಡು ಹಾರಿಸಿ ಪರಾರಿಯಾಗಿದ್ದ. ನಂತರ ತನ್ನ ಮೇಲೆ ರಾಮಚಂದ್ರಪ್ಪ ಹಲ್ಲೆ ನಡೆಸಿದ್ದಾರೆ ಎಂದು ಹೇಳಿ ತೀರ್ಥಹಳ್ಳಿ ಆಸ್ಪತ್ರೆಗೆ ದಾಖಲಾಗಿದ್ದ.
ನಂತರ ಇದ್ದಕ್ಕಿದ್ದಂತೆ ಆಸ್ಪತ್ರೆಯಿಂದ ಎಸ್ಕೇಪ್ ಆಗಿದ್ದ. ಇದನ್ನು ಗಂಭೀರವಾಗಿ ಪರಿಗಣಿಸಿದ ಎಸ್ಪಿ ಶಾಂತರಾಜು ಅವರು ಇನ್ಸ್‌ಪೆಕ್ಟರ್ ಅಭಯ್ ಸೋಮನಾಳ್ ನೇತೃತ್ವದಲ್ಲಿ ತಂಡ ರಚಿಸಿ ಶೋಧಕಾರ್ಯ ನಡೆಸಿ ನಿನ್ನೆ ಕುಣಜೆ ಮಂಜುನಾಥ ಹೆಡಮುರಿ ಕಟ್ಟಿ ಪೊಲೀಸರು ಬಂಧಿಸಿ, ನ್ಯಾಯಾಂಗದ ಮುಂದೆ ಹಾಜರು ಪಡಿಸಿದ್ದಾರೆ.