ETV Bharat / state

ಆಯುರ್ವೇದ​ ವಿಶ್ವವಿದ್ಯಾಲಯಕ್ಕೆ ಬಜೆಟ್​ನಲ್ಲಿ​ ಹಣ ಮಂಜೂರು ಮಾಡುವಂತೆ ಸಿಎಂಗೆ ಮನವಿ - ಶಿವಮೊಗ್ಗ ಆಯುರ್ವೇದ​ ವಿಶ್ವವಿದ್ಯಾಲಯ

ನೆನೆಗುದಿಗೆ ಬಿದ್ದಿರುವ ಶಿವಮೊಗ್ಗ ಆಯುರ್ವೇದ​ ವಿಶ್ವವಿದ್ಯಾಲಯ ಸ್ಥಾಪನೆಗೆ ಈ ಬಾರಿಯ ಬಜೆಟ್​ನಲ್ಲಿ 110 ಕೋಟಿ ರೂಗಳ ಮಂಜೂರಾತಿಯನ್ನು ನೀಡಬೇಕೆಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗಿದೆ.

Shimoga Ayurveda University
ಶಿವಮೊಗ್ಗ ಆಯುರ್ವೇದ​ ವಿಶ್ವವಿದ್ಯಾಲಯಕ್ಕೆ ಬಜೆಟ್​ನಲ್ಲಿ​ ಹಣ ಮಂಜೂರು ಮಾಡುವಂತೆ ಸಿಎಂಗೆ ಮನವಿ
author img

By

Published : Feb 12, 2020, 4:13 AM IST

ಶಿವಮೊಗ್ಗ: ನೆನೆಗುದಿಗೆ ಬಿದ್ದಿರುವ ಶಿವಮೊಗ್ಗ ಆಯುರ್ವೇದ​ ವಿಶ್ವವಿದ್ಯಾಲಯ ಸ್ಥಾಪನೆಗೆ ಈ ಬಾರಿಯ ಬಜೆಟ್​ನಲ್ಲಿ 110 ಕೋಟಿ ರೂ.ಗಳ ಮಂಜೂರಾತಿಯನ್ನು ನೀಡಬೇಕೆಂದು ಮುಖ್ಯಮಂತ್ರಿಗಳಿಗೆ ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರದ ವ್ಯವಸ್ಥಾಪಕ ಟ್ರಸ್ಟಿ ಕಲ್ಲೂರು ಮೇಘರಾಜ್ ಒತ್ತಾಯಿಸಿದ್ದಾರೆ.

ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 2011ರಲ್ಲಿ ಶಿವಮೊಗ್ಗದಲ್ಲಿ ಇದ್ದ ಸರ್ಕಾರಿ ಆಯುರ್ವೇದ​​ ವೈದ್ಯಕೀಯ ಮತ್ತು ಬೋಧನಾ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಿ 100 ಹಾಸಿಗೆಗಳ ಸೌಲಭ್ಯ ಒದಗಿಸಲಾಗಿತ್ತು. ನಂತರ ವಿವಿ ಸ್ಥಾಪನೆಗೆ ಅಗತ್ಯವಿದ್ದ ಉಪನ್ಯಾಸಕರ ಹುದ್ದೆ ಪ್ರಾಚಾರ್ಯರ ಹುದ್ದೆ ಬೋಧಕೇತರ ಹುದ್ದೆಗಳ ಸೃಷ್ಟಿಸಲು ಅನುಮತಿ ನೀಡಲಾಗಿತ್ತು ಎಂದು ತಿಳಿಸಿದರು.

ಶಿವಮೊಗ್ಗ ಆಯುರ್ವೇದ​ ವಿಶ್ವವಿದ್ಯಾಲಯಕ್ಕೆ ಬಜೆಟ್​ನಲ್ಲಿ​ ಹಣ ಮಂಜೂರು ಮಾಡುವಂತೆ ಸಿಎಂಗೆ ಮನವಿ

ವಿವಿ ಸ್ಥಾಪನೆಗೆ ಸೋಗಾನೆ ಗ್ರಾಮದ 120 ಸರ್ವೆ ನಂಬರ್​ನಲ್ಲಿ ನೂರು ಎಕರೆ ಜಮೀನು ಮಂಜೂರು ಮಾಡಲಾಗಿದೆ. 400 ಮೀಟರ್ ಕಾಂಪೌಂಡ್ ನಿರ್ಮಿಸಲಾಗಿದ್ದು, ರೈತರಿಗೂ ಸಹ ಪರಿಹಾರ ನೀಡಲಾಗಿದೆ. ಕೆಲ ರೈತರಿಗೆ ಪರಿಹಾರ ನೀಡಬೇಕಾಗಿರುವ ಹಣ ಸಹ ಉಪ ವಿಭಾಗಾಧಿಕಾರಿ ಕಚೇರಿಯಲ್ಲಿ ಡೆಪಾಸಿಟ್ ಮಾಡಲಾಗಿದೆ. ಆದರೂ ಸಹ ಇಚ್ಛಾಶಕ್ತಿ ಕೊರತೆಯಿಂದ ಆಯುರ್ವೇದ ವಿವಿ ಸ್ಥಾಪನೆ ನೆನೆಗುದಿಗೆ ಬಿದ್ದಿದೆ ಎಂದು ಆರೋಪಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.