ಶಿವಮೊಗ್ಗ: ದಸರಾ ಉತ್ಸವ ಹಿನ್ನೆಲೆಯಲ್ಲಿ ಅಂಬಾರಿ ಹೊರಲು ಸಕ್ರೆಬೈಲ್ ಆನೆ ಬಿಡಾರದಿಂದ ಎರಡು ಆನೆಗಳು ನಗರಕ್ಕೆ ಆಗಮಿಸಿವೆ. ಶಿವಮೊಗ್ಗ ದಸರಾದಲ್ಲಿ ಆಕರ್ಷಣೆಯ ಕೇಂದ್ರಬಿಂದುವಾಗಿರುವ ಅಂಬಾರಿ ಉತ್ಸವಕ್ಕಾಗಿ ಸಾಗರ್ ಮತ್ತು ಭಾನುಮತಿ ಆನೆಗಳನ್ನು ನಿನ್ನೆಯೇ ನಗರಕ್ಕೆ ಬರಮಾಡಿಕೊಳ್ಳಲಾಗಿದೆ.
ಸಕ್ರೆಬೈಲ್ನಲ್ಲಿ ಆನೆಗಳು ಲಾರಿ ಏರಲು ಹಿಂದೇಟು ಹಾಕಿದ್ದು, ಬಳಿಕ ನಡೆದುಕೊಂಡೇ ಶಿವಮೊಗ್ಗ ತಲುಪಿವೆ. ನಗರ ತಲುಪಿದ ಆನೆಗಳಿಗೆ ಮಹಾನಗರ ಪಾಲಿಕೆ ವತಿಯಿಂದ ಪೂಜೆ ಸಲ್ಲಿಸಿ, ಸ್ವಾಗತ ಕೋರಲಾಯಿತು.
ವಾಸವಿ ಶಾಲೆಯ ಬಳಿ ವಾಸ್ತವ್ಯ ಹೂಡಿರುವ ಆನೆಗಳು ಇಂದಿನಿಂದ ಎರಡು ದಿನ ನಡೆಯಲಿರುವ ದಸರಾದಲ್ಲಿ ಭಾಗಿಯಾಗಲಿವೆ. ಈ ವೇಳೆ ಮಹಾನಗರ ಪಾಲಿಕೆ ಮೇಯರ್ ಸುನೀತಾ ಅಣ್ಣಪ್ಪ, ಆಯುಕ್ತ ಚಿದಾನಂದ ವಾಟರೆ ಸೇರಿ ಸಿಬ್ಬಂದಿ ಹಾಜರಿದ್ದರು.
ಇದನ್ನೂ ಓದಿ: ಸಾರಿಗೆ ಸಿಬ್ಬಂದಿಗೆ ಆಗಸ್ಟ್ ತಿಂಗಳ ಅರ್ಧ ಸಂಬಳ ಬಿಡುಗಡೆ ಮಾಡಿದ ಸರ್ಕಾರ