ETV Bharat / state

ಶಿವಮೊಗ್ಗ ರಸ್ತೆ ಅಪಘಾತ: ಚಾಲಕನ ಮೊಬೈಲ್‌ ಮಾತು ಅವಘಡಕ್ಕೆ ಕಾರಣವಾಯಿತೇ? - ಶಿವಮೊಗ್ಗ ಅಪಘಾತ ಸುದ್ದಿ

ಶಿವಮೊಗ್ಗ ತಾಲೂಕಿನ ಚೋರಡಿಯ ಕುಮದ್ವತಿ ಸೇತುವೆ ಬಳಿ ಗುರುವಾರ ಸಂಜೆ ಖಾಸಗಿ ಬಸ್‌ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿತ್ತು.

road accident near shivamogga
ಶಿವಮೊಗ್ಗದಲ್ಲಿ ಖಾಸಗಿ ಬಸ್​ಗಳ ನಡುವೆ ಭೀಕರ ಅಪಘಾತ
author img

By

Published : May 12, 2023, 8:23 AM IST

ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ಸಂಸದ ಬಿ.ವೈ.ರಾಘವೇಂದ್ರ, ಡಿಸಿ ಸೆಲ್ವಮಣಿ, ಎಸ್​ಪಿ ಮಿಥುನ್ ಕುಮಾರ್ ಹಾಗೂ ಗಾಯಾಳುಗಳು

ಶಿವಮೊಗ್ಗ: ತಾಲೂಕಿನ ಚೋರಡಿ ಕುಮದ್ವತಿ ಸೇತುವೆ ಸಮೀಪ ಸಂಭವಿಸಿದ ಭೀಕರ ಅಪಘಾತದಲ್ಲಿ ಬಸ್ ಚಾಲಕ ಹಾಗೂ ಓರ್ವ ಪ್ರಯಾಣಿಕ ಸಾವನ್ನಪ್ಪಿದ್ದು, 30ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಅಪಘಾತಕ್ಕೆ ಚಾಲಕನ ಅಜಾರೂಕತೆಯೇ ಕಾರಣವೆಂದು ಹೇಳಲಾಗುತ್ತಿದೆ.

"ಗಾಯಾಳುಗಳನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಎಲ್ಲರಿಗೂ ಚಿಕಿತ್ಸೆ ನೀಡಲಾಗುತ್ತಿದೆ. ಇದರಲ್ಲಿ ಇಬ್ಬರಿಗೆ ತೀವ್ರ ಗಾಯವಾಗಿದ್ದು ಅವರನ್ನು ಖಾಸಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ" ಎಂದು ಸಿಮ್ಸ್ ಮೆಡಿಕಲ್ ಆಸ್ಪತ್ರೆಯ ನಿರ್ದೇಶಕ ವಿರೂಪಾಕ್ಷಪ್ಪ 'ಈಟಿವಿ ಭಾರತ'ಕ್ಕೆ ತಿಳಿಸಿದ್ದಾರೆ.

ಚಾಲಕನ ಅಜಾಗರೂಕತೆ?:"ಡ್ರೈವರ್ ಮೊಬೈಲ್ ಫೋನ್​ನಲ್ಲಿ ಮಾತನಾಡುತ್ತಿದ್ದರು. ಶಿವಮೊಗ್ಗಕ್ಕೆ ಬೇಗ ಹೋಗಬೇಕೆಂಬ ಅವಸರದಲ್ಲಿ ಬಸ್ ಚಲಾಯಿಸುತ್ತಿದ್ದರು. ನಾವು ಹೇಳಿದರೂ ಸಹ ಅವರು ಮೊಬೈಲ್​​ನಲ್ಲಿ ಮಾತನಾಡುತ್ತಿದ್ದರು" ಎಂದು ಪ್ರತ್ಯಕ್ಷದರ್ಶಿ ಕೃಷ್ಣ ಹೇಳಿದರು.

ಚಿತ್ರದುರ್ಗ ಜಿಲ್ಲೆ ಹೊರಕೆರೆಪುರದ ಬಳಿ ಎಂ.ಜೆ.ಕಟ್ಟೆ ಗ್ರಾಮದಿಂದ ಶಿಕಾರಿಪುರ ಹುಚ್ಚರಾಯ ದೇವರ ದರ್ಶನಕ್ಕೆ ಮೃತ ತಿಪ್ಪೇಸ್ವಾಮಿ ಹಾಗೂ ಅವರ ಪತ್ನಿ‌ ಜಯಮ್ಮ‌ ಸೇರಿದಂತೆ ಒಂದೇ ಕುಟುಂಬದಿಂದ ಒಟ್ಟು ಆರು ಜನ ಬಂದಿದ್ದರು. ದೇವರ ದರ್ಶನ ಮುಗಿಸಿ ವಾಪಸ್ ಆಗುವಾಗ ಅಪಘಾತವಾಗಿದೆ. ಘಟನೆಯಲ್ಲಿ ತಿಪ್ಪೇಸ್ವಾಮಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. "ನಮ್ಮ ಯಜಮಾನರು ಸಾವನ್ನಪ್ಪಿದ್ದಾರೆ. ಅವರನ್ನು ನಾನು ನೋಡಿಲ್ಲ" ಎಂದು ಪತ್ನಿ ಜಯಮ್ಮ ಕಣ್ಣೀರಿಟ್ಟರು.

ಆಸ್ಪತ್ರೆಗೆ ಸಂಸದ ರಾಘವೇಂದ್ರ, ವಿಜಯೇಂದ್ರ ಭೇಟಿ: ಅಪಘಾತ ವಿಷಯ ತಿಳಿದ ಸಂಸದ ಬಿ.ವೈ.ರಾಘವೇಂದ್ರ ಹಾಗೂ ಶಿಕಾರಿಪುರ ಬಿಜೆಪಿ ಅಭ್ಯರ್ಥಿ ಬಿ.ವೈ.ವಿಜಯೇಂದ್ರ ಮೆಗ್ಗಾನ್ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಸಹೋದರಿಬ್ಬರು ಗಾಯಾಳುಗಳ ಆರೋಗ್ಯ ವಿಚಾರಿಸಿ, ಸಾಂತ್ವನ ಹೇಳಿದರು. ನಂತರ ಅವರ ಕುಟುಂಬದವರಿಗೆ ಧೈರ್ಯವಾಗಿರಿ, ಉತ್ತಮ ಚಿಕಿತ್ಸೆ ನೀಡುವುದಾಗಿ ಭರವಸೆ ನೀಡಿದರು ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದರು.

ಆಸ್ಪತ್ರೆಗೆ ಭೇಟಿ‌ ನೀಡಿದ ಜಿಲ್ಲಾಧಿಕಾರಿ ಸೆಲ್ವಮಣಿ ಹಾಗೂ ಎಸ್​ಪಿ ಮಿಥುನ್ ಕುಮಾರ್ ಗಾಯಗಳ ಬಗ್ಗೆ ಮಾಹಿತಿ ಪಡೆದು‌ಕೊಂಡರು. ಎಸ್​ಪಿ ಮಿಥುನ್ ಕುಮಾರ್ ಮಾತನಾಡಿ, "ಎರಡು ಬಸ್​​ಗಳ‌ ನಡುವೆ ನಡೆದ ಅಪಘಾತದಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಗಾಯಾಳುಗಳಿಗೆ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅಪಘಾತದ ಬಗ್ಗೆ ಸೂಕ್ತ ರೀತಿಯಲ್ಲಿ ತನಿಖೆ ನಡಸಲಾಗುತ್ತದೆ" ಎಂದರು.

ಇದನ್ನೂ ಓದಿ: ಶಿವಮೊಗ್ಗದಲ್ಲಿ ಖಾಸಗಿ ಬಸ್​ಗಳ ನಡುವೆ ಭೀಕರ ಅಪಘಾತ: ಇಬ್ಬರು ಸಾವು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.