ETV Bharat / state

ತೀರ್ಥಹಳ್ಳಿ: ರಾಮೇಶ್ವರ ಕ್ಷೇತ್ರದ ಎಳ್ಳು ಅಮಾವಾಸ್ಯೆ ಜಾತ್ರೆಗೆ ಅದ್ಧೂರಿ ತೆಪ್ಪೋತ್ಸವ ಮೂಲಕ ತೆರೆ - ಎಳ್ಳು ಅಮಾವಾಸ್ಯೆ

ತೀರ್ಥಹಳ್ಳಿಯ ರಾಮೇಶ್ವರ ಕ್ಷೇತ್ರದ ಎಳ್ಳು ಅಮಾವಾಸ್ಯೆ ಜಾತ್ರೆ ಇಂದು ಅದ್ಧೂರಿಯಾಗಿ ಮುಕ್ತಾಯಗೊಂಡಿತು.

ರಾಮೇಶ್ವರ ತೆಪ್ಪೋತ್ಸವ
ರಾಮೇಶ್ವರ ತೆಪ್ಪೋತ್ಸವ
author img

By ETV Bharat Karnataka Team

Published : Jan 14, 2024, 6:11 PM IST

Updated : Jan 14, 2024, 6:50 PM IST

ರಾಮೇಶ್ವರ ಕ್ಷೇತ್ರದ ಎಳ್ಳು ಅಮಾವಾಸ್ಯೆ ಜಾತ್ರೆಗೆ ಅದ್ಧೂರಿ ತೆಪ್ಪೋತ್ಸವ ಮೂಲಕ ತೆರೆ

ಶಿವಮೊಗ್ಗ: ಮಲೆನಾಡಿನ ಸಾಂಪ್ರದಾಯಿಕ ಜಾತ್ರೆಗಳಲ್ಲಿ ಒಂದಾದ ತೀರ್ಥಹಳ್ಳಿಯ ರಾಮೇಶ್ವರ ಕ್ಷೇತ್ರದ ಎಳ್ಳು ಅಮಾವಾಸ್ಯೆ ಜಾತ್ರೆ ಅದ್ಧೂರಿಯಾಗಿ ಮುಕ್ತಾಯ ಕಂಡಿದೆ. ಅಮಾವಾಸ್ಯೆ ದಿನ ಪ್ರಾರಂಭವಾಗುವ ಮೂರು ದಿನದ ಈ ಜಾತ್ರೆ ತುಂಗಾ ನದಿಯಲ್ಲಿ ನಡೆಯುವ ತೆಪ್ಪೋತ್ಸವದ ಮೂಲಕ ಮುಕ್ತಾಯವಾಗುತ್ತದೆ.

ತೀರ್ಥಹಳ್ಳಿ ಪಟ್ಟಣದ ರಾಮೇಶ್ವರ ದೇವರ ಜಾತ್ರೆ ಪ್ರತಿ ವರ್ಷ ಜನವರಿ ತಿಂಗಳಿನಲ್ಲಿ ಎಳ್ಳಮವಾಸ್ಯೆ ದಿನ ಪ್ರಾರಂಭವಾಗುತ್ತದೆ. ಇದಕ್ಕೆ ಎಳ್ಳು ಅಮವಾಸ್ಯೆ ಜಾತ್ರೆ ಎಂಬ ಪ್ರಸಿದ್ದಿ ಇದೆ. ಜಾತ್ರೆಯ ಪ್ರಾರಂಭದ ದಿನ ತುಂಗಾ ನದಿಯ ರಾಮಕೊಂಡದಲ್ಲಿ ಭಕ್ತರು ಸ್ನಾನ ಮಾಡುತ್ತಾರೆ. ಎರಡನೇ ದಿನ ರಾಮೇಶ್ವರ ದೇವರ ರಥೋತ್ಸವ ಜರುಗುತ್ತದೆ. ಮೂರನೇ ದಿನ ರಾತ್ರಿ ತುಂಗಾ ನದಿಯಲ್ಲಿ ರಾಮೇಶ್ವರ ದೇವರ ತೆಪ್ಪೋತ್ಸವ ಜರುಗುತ್ತದೆ. ಇಲ್ಲಿಗೆ ಮೂರು ದಿನದ ಜಾತ್ರೆ ಮುಕ್ತಾಯ.

ರಾಮೇಶ್ವರ ಕ್ಷೇತ್ರದ ವಿಶೇಷ: ತೀರ್ಥಹಳ್ಳಿಯ ರಾಮೇಶ್ವರ ದೇವಾಲಯವು ಸಾಕಷ್ಟು ವಿಶೇಷತೆ ಹೊಂದಿದೆ. ಪರಶುರಾಮನು ತನ್ನ ತಂದೆಯ ಆಜ್ಞೆಯಂತೆ ತಾಯಿ ರೇಣುಕೆಯ ತಲೆ ಕಡಿದು ಹಾಕುತ್ತಾನೆ. ಆದರೆ ಇದರಲ್ಲಿ ತಾಯಿಯದೇನೂ ತಪ್ಪಿಲ್ಲ ಎಂದು ತಿಳಿದ ಮೇಲೆ ನೊಂದುಕೊಳ್ಳುತ್ತಾನೆ. ತನ್ನ ತಾಯಿಯನ್ನು ಕೊಂದ ಪಾಪ ಹಾಗೂ ಆಕೆಯ ರಕ್ತ ಅಂಟಿದ ತನ್ನ ಕೊಡಲಿಯನ್ನು ತೊಳೆಯಲು ಎಲ್ಲೆಡೆ ಹೋದರೂ ಅದು ಸಾಧ್ಯವಾಗುವುದಿಲ್ಲ.

ತೀರ್ಥಕ್ಷೇತ್ರವಾದ ತೀರ್ಥಹಳ್ಳಿಗೆ ಬಂದು ರಾಮೇಶ್ವರನನ್ನು ಬೇಡಿಕೊಂಡಾಗ, ದೇವಾಲಯದ ಪಕ್ಕದಲ್ಲಿ ಹರಿಯುವ ತುಂಗಾ ನದಿಯಲ್ಲಿ ಪರಶುವನ್ನು (ಕೊಡಲಿ) ತೊಳೆದಾಗ ಆ ಕಲೆ ಹೋಗುತ್ತದೆ. ಆಗ ಪರಶುರಾಮ ರಾಮೇಶ್ವರನಿಗೆ ಪೂಜೆ ಸಲ್ಲಿಸಿ ಮುಂದೆ ತೆರಳುತ್ತಾನೆ. ಇದರಿಂದಾಗಿ ತುಂಗಾ ನದಿಯಲ್ಲಿರುವ ರಾಮಕುಂಡದಲ್ಲಿ ಸ್ನಾನ‌ ಮಾಡಿದರೆ ಎಲ್ಲಾ ಪಾಪಗಳು ತೊಳೆದು ಹೋಗುತ್ತದೆ ಎಂಬ‌ ನಂಬಿಕೆ ಭಕ್ತರಲ್ಲಿದೆ.‌

ತೆಪ್ಪೋತ್ಸವದ ವಿಶೇಷತೆ: ರಾಮೇಶ್ವರನ ತೆಪ್ಪೋತ್ಸವವು ರಥೋತ್ಸವದ ನಂತರ ನಡೆಯುತ್ತದೆ. ರಥೋತ್ಸವವು ರಾಮೇಶ್ವರನ ಮದುವೆ ಸಂದರ್ಭದಲ್ಲಿ ನಡೆಯುತ್ತದೆ. ರಥೋತ್ಸವದ ನಂತರ ನಡೆಯುವ ತೆಪ್ಪೋತ್ಸವ ರಾಮೇಶ್ವರ ದೇವರ ಮಧುಚಂದ್ರವಿದ್ದಂತೆ. ಇದರಿಂದ ತುಂಗಾ ನದಿಯಲ್ಲಿ ಚಂದಿರನನ್ನು ತೋರಿಸುತ್ತಾ, ತೆಪ್ಪೋತ್ಸವ ನಡೆಸಲಾಗುತ್ತದೆ. ದೇವರ ಪವಿತ್ರ ಕಾರ್ಯವನ್ನು ನೋಡಲು ರಾಜ್ಯದ ನಾನಾ ಭಾಗಗಳಿಂದ ಭಕ್ತರು ಸಾವಿರಾರು ಸಂಖ್ಯೆಯಲ್ಲಿ ಆಗಮಿಸುತ್ತಾರೆ. ತೆಪ್ಪೋತ್ಸವದಲ್ಲಿ ಸಿಡಿಮದ್ದು ಸಿಡಿಸುವುದು ಇದರ ಇನ್ನೊಂದು ವಿಶೇಷ. ಸಿಡಿಮದ್ದು ನೆಲದಿಂದ ಆಕಾಶಕ್ಕೆ ಚಿಮ್ಮಿ, ಅಲ್ಲಿ ರಂಗು ರಂಗಿನ ರಂಗೋಲಿಯನ್ನು ಉಂಟು ಮಾಡುವುದನ್ನು ನೋಡುವುದೇ ಕಣ್ಣಿಗೆ ಹಬ್ಬ.

ತೆಪ್ಪೋತ್ಸವದಲ್ಲಿ ಶ್ರೀರಾಮಮಂದಿರ: ಜನವರಿ 22ರಂದು ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಲೋಕಾರ್ಪಣೆಯಾಗುತ್ತದೆ. ಅದಕ್ಕೂ ಮುನ್ನವೇ ತೀರ್ಥಹಳ್ಳಿಯ ತೆಪ್ಪೋತ್ಸವದಲ್ಲಿ ಶ್ರೀರಾಮಮಂದಿರ ಮೂಡಿಬಂದಿತ್ತು. ಶ್ರೀರಾಮಮಂದಿರವನ್ನು ವಿದ್ಯುತ್ ದೀಪಾಲಂಕಾರದಲ್ಲಿ ಅರಳಿಸಲಾಗಿತ್ತು. ಈ ಶ್ರೀರಾಮ ಮಂದಿರವನ್ನು ಮುನ್ನಾ ಎಂಬಾತ ತನ್ನ ಸ್ನೇಹಿತರ ಜೊತೆಗೂಡಿ ಕಳೆದ ನಾಲ್ಕು ದಿನಗಳಿಂದ ರಚನೆ ಮಾಡಿದ್ದರು. ಇದಕ್ಕೆ ಅವರ ಸ್ನೇಹಿತರು ಸಾಥ್ ನೀಡಿದ್ದರು. ಇದು ಎಲ್ಲರನ್ನೂ ಆಕರ್ಷಿಸಿತ್ತು.

ಬೆಂಗಳೂರಿನ ಐಟಿ ಉದ್ಯಮಿ ಇಂಚರ ಮಾತನಾಡಿ, ''ನಮ್ಮೂರಿನ ಜಾತ್ರೆಗೆ ಯಾವಾಗಲೂ ಮಿಸ್ ಮಾಡದೇ ಬರುತ್ತೇನೆ. ತೀರ್ಥಹಳ್ಳಿಯವರು ಪ್ರಪಂಚದ ಯಾವುದೇ ಮೂಲೆಯಲ್ಲಿದ್ದರೂ ಇಂದಿನ ಜಾತ್ರೆಗೆ ತಪ್ಪದೇ ಆಗಮಿಸುತ್ತಾರೆ. ತುಂಗಾ ನದಿಯಲ್ಲಿ ತೆಪ್ಪೋತ್ಸವ ನೋಡುವುದೇ ಕಣ್ಣಿಗೆ ಒಂದು ಹಬ್ಬ. ಅದರಲ್ಲೂ ಈ ಬಾರಿ ರಾಮಮಂದಿರದ‌ ಪ್ರತಿಕೃತಿ ನಿರ್ಮಾಣ ಮಾಡುವುದು ಅತ್ಯಂತ ಖುಷಿ ತಂದಿದೆ'' ಎಂದರು.

ಬೆಂಗಳೂರಿನ ಅಗ್ನಿವರ್ಷ ಮಾತನಾಡಿ, "ಎಳ್ಳು ಅಮಾವಾಸೆಗೆ ತೀರ್ಥಹಳ್ಳಿಯ ಜನ ಬೆಂಗಳೂರು ಸೇರಿದಂತೆ ಪ್ರಪಂಚದ ಯಾವುದೇ ಕಡೆ ನೆಲೆಸಿದ್ದರೂ ಸಹ ಜಾತ್ರೆಯ ದಿನ ಬಂದೇ ಬರುತ್ತಾರೆ. ನಾನೂ ಸಹ ಬೆಂಗಳೂರಿನಿಂದ ಬಂದಿದ್ದೇನೆ.‌ ರಾಮೇಶ್ವರನನ್ನು ನದಿಯಲ್ಲಿ ಮೂರು ಸುತ್ತು ತೆಪ್ಪೋತ್ಸವದಲ್ಲಿ ಸುತ್ತಿ ನಂತರ ವಾಪಸ್ ಕರೆ ತರುತ್ತಾರೆ.‌ ಇದನ್ನು ನೋಡಲು ಎರಡು ಕಣ್ಣು ಸಾಲದು. ಜಾತ್ರೆಗೆ ಎಲ್ಲರೂ ಆಗಮಿಸಿ ಸಂತೋಷ ಪಡುತ್ತಿದ್ದಾರೆ. ಅದೇ ರೀತಿ ಇಲ್ಲಿ ರಾಮಮಂದಿರ ನಿರ್ಮಾಣ ಮಾಡಿರುವುದು ನೋಡಲು ಅತ್ಯಂತ ಸುಂದರವಾಗಿದೆ" ಎಂದು ಹೇಳಿದರು.

ಶ್ರೀರಾಮಮಂದಿರವನ್ನು ವಿದ್ಯುತ್ ಅಲಂಕಾರದಲ್ಲಿ ಮೂಡಿಸಿದ ಮುನ್ನಾ ಮಾತನಾಡಿ, ''ನಾವು ಹಿಂದೆ ಅನೇಕ ದೀಪಾಲಂಕಾರವನ್ನು ಮಾಡಿದ್ದೆವು. ಜಾತ್ರಾ ಸಮಿತಿ ಅವರು ಶ್ರೀರಾಮ ಮಂದಿರ ಮಾಡಬೇಕೆಂದು ಹೇಳಿದಾಗ ಅದನ್ನು ಕೇವಲ ನಾಲ್ಕು ದಿನದಲ್ಲಿ ರಚನೆ ಮಾಡಿದೆವು. ಇದನ್ನು ವೀಕ್ಷಿಸಿದ ಎಲ್ಲರೂ ಚೆನ್ನಾಗಿದೆ ಎಂದು ಹೇಳುತ್ತಿದ್ದಾರೆ. ಇದೇ ನಮಗೆ ಖುಷಿ, ತೃಪ್ತಿ ತಂದಿದೆ'' ಎಂದು ತಿಳಿಸಿದರು.

ಇದನ್ನೂ ಓದಿ: ಮೆಕ್ಕೆಜೋಳದಲ್ಲಿ ಮೂಡಿಬಂದ ರಾಮಮಂದಿರ-ವಿಡಿಯೋ

Last Updated : Jan 14, 2024, 6:50 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.