ಶಿವಮೊಗ್ಗ: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿಧನದ ಹಿನ್ನೆಲೆ ಇಂದು ಮತ್ತು ನಾಳೆ ಭದ್ರಾವತಿ ಬಂದಿಗೆ ಡಾ.ರಾಜ್ ಕುಮಾರ್ ಅಭಿಮಾನಿ ಸಂಘ ಕರೆ ನೀಡಿದೆ.
ಇಂದು ನೆಚ್ಚಿನ ನಟನ ನಿಧನ ಸುದ್ದಿ ಕೇಳುತ್ತಿದ್ದಂತೆ ಆಘಾತಗೊಂಡಿರುವ ಅಭಿಮಾನಿಗಳು ಭದ್ರಾವತಿ ಮುಖ್ಯರಸ್ತೆಯಲ್ಲಿ ಟೈರ್ಗೆ ಬೆಂಕಿ ಹಚ್ಚಿ ಬೇಸರ ವ್ಯಕ್ತಪಡಿಸಿದರು. ವರ್ತಕರು ಸ್ವಯಂ ಪ್ರೇರಿತವಾಗಿ ಅಂಗಡಿ ಮುಂಗಟ್ಟು ಮುಚ್ಚಿ ಸಂತಾಪ ಸೂಚಿಸಿದರು.
ಇದರ ಜೊತೆ ಇಂದು ಮತ್ತು ನಾಳೆ ಡಾ.ರಾಜ್ ಕುಮಾರ್ ಅಭಿಮಾನಿ ಸಂಘ ಭದ್ರಾವತಿ ಬಂದ್ಗೆ ಕರೆ ನೀಡಿದೆ.