ETV Bharat / state

ಹೋರಾಟಗಾರ ಅಶೋಕ್​​ರನ್ನು ನಿಂದಿಸಿದ ಪೊಲೀಸರ ವಿರುದ್ದ ಪ್ರತಿಭಟನೆ - ಶಿವಮೊಗ್ಗದಲ್ಲಿ ಪ್ರತಿಭಟನೆ

ಕೆ.ಎಸ್.ಅಶೋಕ್ ಮೇಲೆ ಚಿಕ್ಕಮಗಳೂರು ಜಿಲ್ಲೆ ಕೊಪ್ಪ ಪೊಲೀಸರು ಅಮಾನುಷವಾಗಿ ವರ್ತಿಸಿರುವುದನ್ನು‌ ಖಂಡಿಸಿ, ‌ಶಿವಮೊಗ್ಗ ಜಿಲ್ಲಾ ಪ್ರಗತಿಪರ ಸಂಘಟನೆಗಳ‌ ಒಕ್ಕೂಟ ಪ್ರತಿಭಟನೆ ನಡೆಸಿತು.

Protest in Shimoga
ಹೋರಾಟಗಾರ ಅಶೋಕ್​​ರನ್ನು ನಿಂದಿಸಿದ ಪೊಲೀಸರ ವಿರುದ್ದ ಪ್ರತಿಭಟನೆ
author img

By

Published : Sep 10, 2020, 3:00 PM IST

ಶಿವಮೊಗ್ಗ: ಸಾಮಾಜಿಕ, ಪ್ರಗತಿಪರ ಹೋರಾಟಗಾರ ಕೆ.ಎಸ್.ಅಶೋಕ್ ಮೇಲೆ ಚಿಕ್ಕಮಗಳೂರು ಜಿಲ್ಲೆ ಕೊಪ್ಪ ಪೊಲೀಸರು ಅಮಾನುಷವಾಗಿ ವರ್ತಿಸಿರುವುದನ್ನು‌ ಖಂಡಿಸಿ, ‌ಶಿವಮೊಗ್ಗ ಜಿಲ್ಲಾ ಪ್ರಗತಿಪರ ಸಂಘಟನೆಗಳ‌ ಒಕ್ಕೂಟ ಪ್ರತಿಭಟನೆ ನಡೆಸಿತು.

ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸದಸ್ಯರು ಕೆ.ಎಲ್. ಅಶೋಕ್​​ರವರು ಹೋರಾಟಗಾರರು ಎಂದು ತಿಳಿಯದೆ, ಪೊಲೀಸರು ಕೆಟ್ಟದಾಗಿ ನಡೆದು ಕೊಂಡಿದ್ದಾರೆ. ಪೊಲೀಸ್ ಠಾಣೆಗೆ ಕರೆದು ಕೊಂಡು ಹೋಗಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.

ಕಳೆದ ಸೋಮವಾರ ಕೆ.ಎಲ್.ಅಶೋಕ್ ತಮ್ಮ ಕುಟುಂಬದ ಜೊತೆಗೆ ಹೋದಾಗ ನೋ‌ ಪಾರ್ಕಿಂಕ್​​ನಲ್ಲಿ ಕಾರು ನಿಲ್ಲಿಸಿದ್ದಾರೆ. ಪೊಲೀಸರು ಬಂದು ಇದಕ್ಕೆ ನಿಂದಿಸಿದ್ದಾರೆ. ನೋ‌ ಪಾರ್ಕಿಂಗ್​​ನಲ್ಲಿ ಕಾರು‌ ನಿಲ್ಲಿಸಿದಕ್ಕೆ ದಂಡ ಕಟ್ಟಲು ರೆಡಿ ಇದ್ದರು ಸಹ‌ ಕಾನ್ಸ್​​ಟೇಬಲ್ ರಮೇಶ್​​ರವರು ನಿಂದಿಸಿದ್ದಾರೆ. ಅಲ್ಲದೆ ಪೊಲೀಸ್‌ ಠಾಣೆಗೆ ಕರೆದು‌ಕೊಂಡು ಹೋಗಿ ಅಲ್ಲೂ ಸಹ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.

ಇದಕ್ಕೆ‌ ಅಲ್ಲಿನ ಪಿಎಸ್ಐ ರವಿ ಸಹ ಸಾಥ್ ನೀಡಿ, ಉದ್ದೇಶ ಪೂರ್ವಕವಾಗಿಯೇ ಅವಮಾನ ಮಾಡಿದ್ದಾರೆ. ಇದರಿಂದ ಪೊಲೀಸ್ ಇಲಾಖೆಯು ಇಂತಹ ಕೆಟ್ಟ ಅಧಿಕಾರಿಗಳ ವಿರುದ್ದ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ, ಪ್ರತಿಭಟನೆ ನಡೆಸು, ಅಪರ ಜಿಲ್ಲಾಧಿಕಾರಿ ಅನುರಾಧರವರ ಮೂಲಕ ಸಿಎಂಗೆ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಹೋರಾಟಗಾರರಾದ ಕೆ.ಪಿ.ಶ್ರೀಪಾಲ್, ಅನನ್ಯ ಶಿವು, ಮೂರ್ತಿ ಸೇರಿ ಅನೇಕರು ಭಾಗಿಯಾಗಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.