ETV Bharat / state

ಶಿವಮೊಗ್ಗದಲ್ಲಿ ಶಿಯಾ ವಾಸೀಂ ವಿರುದ್ಧ ಪ್ರತಿಭಟನೆ: ಪ್ರತಿಕೃತಿ ದಹಿಸಿ ಆಕ್ರೋಶ

ಶಿವಮೊಗ್ಗದ ಈದ್ಗಾ ಮೈದಾನದಲ್ಲಿ ಮುಸ್ಲಿಂ ಧರ್ಮಿಯರು ಶಿಯಾ ವಾಸೀಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಅವರ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಿದರು. ನಂತರ ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.

author img

By

Published : Mar 22, 2021, 3:06 PM IST

Updated : Mar 22, 2021, 3:25 PM IST

Protest against Shia Wasim
ಶಿಯಾ ವಾಸೀಂ ವಿರುದ್ಧ ಪ್ರತಿಭಟನೆ

ಶಿವಮೊಗ್ಗ: ಕುರಾನ್​ನ 26 ಶ್ಲೋಕಗಳನ್ನು ತೆಗೆದು ಹಾಕಬೇಕೆಂದು ಸುಪ್ರೀಂಕೋರ್ಟ್ ನಲ್ಲಿ ದಾವೆ ಹಾಕಿರುವ ಶಿಯಾ ವಾಸೀಂ ಅವರಿಗೆ‌ ಕಾನೂನಿನ ಪ್ರಕಾರ ಶಿಕ್ಷೆ ನೀಡಬೇಕೆಂದು ಆಗ್ರಹಿಸಿ ಜಿಲ್ಲಾ ಸುನ್ನಿ ಜಮಿತ್ ಉಲ್ಮಾ ಕಮಿಟಿಯಿಂದ ಪ್ರತಿಭಟನೆ ನಡೆಸಲಾಯಿತು.

ಶಿವಮೊಗ್ಗದಲ್ಲಿ ಶಿಯಾ ವಾಸೀಂ ವಿರುದ್ಧ ಪ್ರತಿಭಟನೆ

ನಗರದ ಈದ್ಗಾ ಮೈದಾನದಲ್ಲಿ ಮುಸ್ಲಿಂ ಧರ್ಮಿಯರು ಶಿಯಾ ವಾಸೀಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಮುಸ್ಲಿಂರ ಪವಿತ್ರ ಗ್ರಂಥ ಇಡೀ ಪ್ರಪಂಚಕ್ಕೆ ಇರುವುದು ಒಂದೇ. ಕುರಾನ್​ನಲ್ಲಿ ಎಲ್ಲೂ ಹಿಂಸೆಯನ್ನು ಪ್ರಚೋದಿಸುವುದಿಲ್ಲ. ಪ್ರಪಂಚಕ್ಕೆ ಶಾಂತಿ ಸಾರುವ ಕುರಾನ್​ನ 26 ಶ್ಲೋಕವನ್ನು ತೆಗೆದು ಹಾಕಬೇಕೆಂದು ಕೋರಿ ಕೋರ್ಟ್ ಗೆ ಹೋಗಿ ಕುರಾನ್​ಗೆ ಅಪಮಾನ ಮಾಡಿದ್ದಾರೆ. ಇಂತಹ ವಾಸೀಂರನ್ನು ಅವರ ಸಮಾಜವೇ ಹೊರ ಹಾಕಿದೆ. ಅವರ ಪತ್ನಿ ಹಾಗೂ ಮಕ್ಕಳು ಸಹ ಇವರನ್ನು ಬಿಟ್ಟು ಹೋಗಿದ್ದಾರೆ ಎಂದರು.

ಓದಿ:ರೈತರ ಪ್ರತಿಭಟನಾ ಸ್ಥಳದಲ್ಲಿ ಪೊಲೀಸರ ಮೇಲೆ ಜೇನು ದಾಳಿ

ಜಿಲ್ಲಾ ಸುನ್ನಿ ಜಮಿತ್ ಉಲ್ಮಾ ಕಮಿಟಿಯಿಂದ ನಡೆದ ಪ್ರತಿಭಟನೆಯಲ್ಲಿ ಶಿಯಾ ವಾಸೀಂ ಪ್ರತಿಕೃತಿಯನ್ನು ದಹಿಸಿ, ಆಕ್ರೋಶ ವ್ಯಕ್ತಪಡಿಸಲಾಯಿತು. ನಂತರ ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು. ಈ ವೇಳೆ ಮುಸ್ಲಿಂ ಧರ್ಮದ ಗುರುಗಳು, ಮುಖಂಡರುಗಳು ಭಾಗಿಯಾಗಿದ್ದರು.

Last Updated : Mar 22, 2021, 3:25 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.