ETV Bharat / state

ಸಾಗರ ಪೊಲೀಸ್​ ಇನ್ಸ್​ಪೆಕ್ಟರ್​ ಎಫ್​ಬಿ ಖಾತೆ ಹ್ಯಾಕ್​​: ಹಣಕ್ಕೆ ಬೇಡಿಕೆ ಇಟ್ಟ ಖದೀಮರು

ಆನ್​ಲೈನ್​ ಮೂಲಕ ಸೈಬರ್ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿರುವ ಬೆನ್ನಲ್ಲೇ ಪೊಲೀಸ್​ ಇನ್ಸ್​ಪೆಕ್ಟರ್​ರೊಬ್ಬರ ಫೇಸ್​​​ಬುಕ್ ಖಾತೆ ಹ್ಯಾಕ್​ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಫೇಸ್​​ಬುಕ್ ಖಾತೆಯನ್ನು ಹ್ಯಾಕ್ ಮಾಡಿ ಆ ಮೂಲಕ ಹಣದ ಬೇಡಿಕೆ ಇಟ್ಟಿದ್ದಾನೆ ಖದೀಮ.

ಪೊಲೀಸ್​ ಇನ್ಸ್​ಪೆಕ್ಟರ್​ ಫೇಸ್​​​ಬುಕ್ ಖಾತೆ ಹ್ಯಾಕ್​​: ಹಣದ ಬೇಡಿಕೆ ಇಟ್ಟ ಖದೀಮ
author img

By

Published : Aug 27, 2020, 11:37 AM IST

ಶಿವಮೊಗ್ಗ: ಹ್ಯಾಕರ್ಸ್​​ಗಳು ಪೊಲೀಸ್ ಇನ್ಸ್​ಪೆಕ್ಟರ್ ಫೇಸ್​ಬುಕ್ ಖಾತೆಗೆ ಕನ್ನ ಹಾಕಿರುವ ಪ್ರಕರಣ ಜಿಲ್ಲೆಯ ಸಾಗರದಲ್ಲಿ ನಡೆದಿದೆ.

ಇನ್ಸ್​ಪೆಕ್ಟರ್​ ಅವರ ಖಾತೆಯ ಮೂಲಕ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಇಲ್ಲಿನ ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಸುನೀಲ್ ಕುಮಾರ್​​​ ಅವರ ಫೇಸ್​ಬುಕ್‌ ಖಾತೆಯನ್ನು ಹ್ಯಾಕ್​​ ಮಾಡಿರುವ ಆನ್​ಲೈನ್​ ಖದೀಮರು ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆ.

ಅವರ ಫೇಸ್​​ಬುಕ್​ ವಾಲ್​​ನಲ್ಲಿ ನನಗೆ ಅರ್ಜೆಂಟ್​ ಆಗಿ 20 ಸಾವಿರ ರೂಪಾಯಿಯ ಅಗತ್ಯವಿದೆ ಎಂದು ಬರೆಯಲಾಗಿತ್ತು. ಇದನ್ನು ಗಮನಿಸಿದ ಅವರ ಸ್ನೇಹಿತರು ಸುನೀಲ್​​ಗೆ ಯಾವ ಸಮಸ್ಯೆ ಇದೆ ಎಂದು ವಿಚಾರಿಸಿದಾಗ ಫೇಸ್​​ಬುಕ್ ಖಾತೆ ಹ್ಯಾಕ್​ ಆಗಿರುವುದು ಬಯಲಿಗೆ ಬಂದಿದೆ.

ಈ ಕುರಿತು ಇನ್ಸ್​ಪೆಕ್ಟರ್​ ಸುನೀಲ್ ಕುಮಾರ್ ಶಿವಮೊಗ್ಗದ ಸೈಬರ್ ಕ್ರೈಂ ಪೊಲೀಸ್ ಠಾಣೆ (ಸಿಇಎನ್)​ಗೆ ದೂರು ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.