ಶಿವಮೊಗ್ಗ: ತಮ್ಮ ನಾಯಿಯೊಂದಿಗೆ ವಾಕಿಂಗ್‌ಗೆ ತೆರಳಿದ್ದ ವ್ಯಕ್ತಿಯ ಮೇಲೆ ಕಲ್ಲಿನಿಂದ ಹಲ್ಲೆ ಮಾಡಿದ್ದ ಪ್ರಕರಣ ಸಂಬಂಧ ತುಂಗಾನಗರ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ಅಣ್ಣಾ ನಗರದ ಸಲ್ಮಾನ್ (20) ಹಾಗೂ ಸೈಯದ್ ಸುಬಾನ್ (18) ಬಂಧಿತರು. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ವೆಂಕಟೇಶ್ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಗುರುವಾರ ಸಂಜೆ ವೆಂಕಟೇಶ್ ಪಾರ್ಕ್ನಿಂದ ವಾಕಿಂಗ್ ಮುಗಿಸಿ ವಾಪಸ್ ಆಗುವಾಗ ಆರೋಪಿಗಳಾದ ಸಲ್ಮಾನ್, ಸೈಯದ್ ಸುಬಾನ್ ಹಾಗೂ ಅಸ್ಲಂ ಎಂಬ ಮೂವರು ಅದೇ ಬಡಾವಣೆಯ ಕ್ಯಾಮರಾಗಳನ್ನು ಬಾಡಿಗೆ ನೀಡುವ ಚಿನ್ನು ಎಂಬಾತನೊಂದಿಗೆ ಜಗಳವಾಡುತ್ತಿದ್ದರು. ಈ ವೇಳೆ ವೆಂಕಟೇಶ್ ಇವರನ್ನು ನೋಡಿದ್ದಕ್ಕೆ ನಮ್ಮನ್ನೇ ಗುರಾಯಿಸುತ್ತೀಯಾ? ಎಂದು ಬಂದು ಕಲ್ಲಿನಿಂದ ತಲೆಗೆ ಹಲ್ಲೆ ನಡೆಸಿ ಜಾತಿ ನಿಂದನೆ ಮಾಡಿದ್ದರಂತೆ.
ಈ ಪ್ರಕರಣದಲ್ಲಿ ಅಸ್ಲಂ ಎಂಬಾತ ಪರಾರಿಯಾಗಿದ್ದು, ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಶಿವಮೊಗ್ಗದಲ್ಲಿ ವಾಕಿಂಗ್ ಮಾಡುತ್ತಿದ್ದ ವ್ಯಕ್ತಿ ಮೇಲೆ ಯುವಕರಿಂದ ಹಲ್ಲೆ