ಶಿವಮೊಗ್ಗ: ರೈಲು ಹತ್ತುವಾಗ ಪ್ರಯಾಣಿಕರೊಬ್ಬರು ರೈಲಿನಿಂದ ಪ್ಲಾಟ್ ಫಾರಂಗೆ ಬಿದ್ದ ಘಟನೆ ಶಿವಮೊಗ್ಗದ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ. ಈ ವೇಳೆ ಅಲ್ಲೇ ಇದ್ದ ರೈಲ್ವೆ ಪೊಲೀಸ್ ಸಿಬ್ಬಂದಿ ಮಂಜುನಾಥ್ ಹಾಗೂ ಅಣ್ಣಪ್ಪ ಅವರು ಕೆಳಗೆ ಬಿದ್ದ ಪ್ರಯಾಣಿಕನನ್ನು ರಕ್ಷಿಸಿದ್ದಾರೆ. ಈ ಘಟನೆಯ ವಿಡಿಯೋವನ್ನು ಆರ್ಪಿಎಫ್ ಮೈಸೂರು ವಿಭಾಗದವರು ತಮ್ಮ ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದಾರೆ.
ಘಟನೆ ವಿವರ: ಶನಿವಾರ ಬೆಳಗ್ಗೆ ಶಿವಮೊಗ್ಗದಿಂದ ತೆರಳುವ ತಾಳಗುಪ್ಪ - ಮೈಸೂರು ರೈಲಿನಲ್ಲಿ ಶಿವಮೊಗ್ಗದ ನಿವಾಸಿ ದಿಲೀಪ್ ಕುಮಾರ್ ಎಂಬುವರು ತಮ್ಮ ಕುಟುಂಬದ ಜೊತೆ ಮೈಸೂರಿಗೆ ತೆರಳುವಾಗ ಕುಟುಂಬದವರು ರೈಲಿನಲ್ಲಿದ್ದರು. ಇವರು ಪ್ಲಾಟ್ ಫಾರಂನಲ್ಲಿದ್ದ ಅಂಗಡಿಗೆ ಹೋಗಿ ವಾಪಸ್ ಆಗುವಾಗ ರೈಲು ಹೊರಟಿದೆ. ರೈಲು ಹೊರಟಿದೆ ಎಂದು ಗಾಬರಿಯಾಗಿ ರೈಲು ಹತ್ತುವಾಗ ಕಾಲು ಜಾರಿ ಬಿದ್ದಿದ್ದಾರೆ.
ಇದನ್ನೂ ಓದಿ: ಮುಂಬೈನಲ್ಲಿ ಸಂಚರಿಸುತ್ತಿದ್ದ ರೈಲಿನಿಂದ ಕೆಳಗೆ ಬಿದ್ದ ವ್ಯಕ್ತಿ : ವಿಡಿಯೋ ನೋಡಿ
ತಕ್ಷಣ ಅಲ್ಲಿಯೇ ಇದ್ದ ರೈಲ್ವೆ ಪೊಲೀಸ್ ಸಿಬ್ಬಂದಿಗಳಾದ ಮಂಜುನಾಥ್ ಹಾಗೂ ಅಣ್ಣಪ್ಪನವರು ದಿಲೀಪ್ ಕುಮಾರನ್ನು ಎತ್ತಿ ರಕ್ಷಿಸಿದ್ದಾರೆ. ಸ್ವಲ್ಪ ಉಪಚರಿಸಿದ ಮೇಲೆ ದಿಲೀಪ್ ರನ್ನು ಅದೇ ರೈಲ್ನಲ್ಲಿ ಮೈಸೂರಿಗೆ ಕಳುಹಿಸಿ ಕೊಟ್ಟಿದ್ದಾರೆ.