ETV Bharat / state

ಶಿವಮೊಗ್ಗದಲ್ಲಿ ಒಂದು ವರ್ಷದ ಮಗು-ತಂದೆಗೆ ಕೊರೊನಾ: 53ಕ್ಕೆ ಏರಿದ ಸೋಂಕಿತರ ಸಂಖ್ಯೆ

author img

By

Published : Jun 3, 2020, 9:04 PM IST

ಶಿವಮೊಗ್ಗದಲ್ಲಿ ಇಂದು ಒಂದು ವರ್ಷದ ಮಗು ಸೇರಿದಂತೆ ಇಬ್ಬರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಆ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 53ಕ್ಕೆ ಏರಿಕೆಯಾಗಿದೆ.

Shimoga
ಶಿವಮೊಗ್ಗದಲ್ಲಿ ಒಂದು ವರ್ಷದ ಮಗು ಹಾಗೂ ತಂದೆಗೆ ಕೊರೊನಾ

ಶಿವಮೊಗ್ಗ: ಜಿಲ್ಲೆಯಲ್ಲಿ ಇಂದು ಒಂದು ವರ್ಷದ ಮಗು ಹಾಗೂ ಮಗುವಿನ ತಂದೆಯಲ್ಲಿ ಕೊರೊನಾ ಪತ್ತೆಯಾಗಿದೆ.

ಶಿವಮೊಗ್ಗದ ಹಸೂಡಿಯ ಹಕ್ಕಿಪಿಕ್ಕಿ ಕ್ಯಾಂಪ್​ಗೆ ಮುಂಬೈನಿಂದ ತಂದೆ, ತಾಯಿ ಹಾಗೂ ಮಗು ಆಗಮಿಸಿದ್ದರು. P-3910-ಒಂದು ವರ್ಷದ ಮಗು ಹಾಗೂ P-3911 ಮಗುವಿನ ತಂದೆಯಲ್ಲಿ ಕೊರೊನಾ ಪತ್ತೆಯಾಗಿದ್ದು, ತಾಯಿಯಲ್ಲಿ ಪತ್ತೆಯಾಗಿಲ್ಲ. ಮಗು ಹಾಗೂ ತಂದೆಯನ್ನು ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮಗುವನ್ನು ನೋಡಿಕೊಳ್ಳಲು ತಾಯಿಯನ್ನು ಸಹ ಕರೆ ತರಲಾಗಿದೆ.

ಈಗಾಗಲೇ ಜಿಲ್ಲೆಯಲ್ಲಿ ಹಕ್ಕಿಪಿಕ್ಕಿ ಕ್ಯಾಂಪ್​ನ ನಾಲ್ವರು ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದಿನ ಎರಡು ಪ್ರಕರಣ ಸೇರಿ ಜಿಲ್ಲೆಯಲ್ಲಿ ಒಟ್ಟು 53 ಪ್ರಕರಣಗಳು‌ ದಾಖಲಾಗಿವೆ. ಆ ಪೈಕಿ 30 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಇನ್ನೂ 23 ಜನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಜಿಲ್ಲೆಯಲ್ಲಿ ಕೋವಿಡ್ ಸ್ಥಿತಿಗತಿ:

  • ಇಂದು ಜಿಲ್ಲೆಯಲ್ಲಿ ಸಂಗ್ರಹಿಸಿದ ರಕ್ತದ ಮಾದರಿ-206.
  • ಇದುವರೆಗೂ ಸಂಗ್ರಹಿಸಿದ ರಕ್ತದ ಮಾದರಿ-9,506.
  • ಇದುವರೆಗೂ ನೆಗೆಟಿವ್ ಬಂದಿದ್ದು-9182.
  • ಇದುವರೆಗೂ ಪಾಸಿಟಿವ್ ಪ್ರಕರಣ-53.
  • ಫಲಿತಾಂಶ ಬರಬೇಕಿರುವುದು-271.
  • ಇದುವರೆಗೂ ಬಿಡುಗಡೆಯಾದವರು-30.
  • ವಿದೇಶದಿಂದ ವಾಪಸ್​ ಆದವರು-38.
  • ಬೇರೆ ರಾಜ್ಯದಿಂದ ಬಂದವರು-375.
  • ಜಿಲ್ಲೆಯ ಕಂಟೈನ್ಮೆಂಟ್ ಝೋನ್-07.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.