ETV Bharat / state

ಶಿವಮೊಗ್ಗ ಡಿಸಿಸಿ ಬ್ಯಾಂಕ್ ಅವ್ಯವಹಾರ : ಹಾಲಿ ಎಂಡಿ ವಜಾ, ನೂತನ ಎಂಡಿ ಅಧಿಕಾರ ಸ್ವೀಕಾರ - ರಾಜ್ಯ ಸರ್ಕಾರದ ಆದೇಶ

ರಾಜ್ಯ ಸಹಕಾರ ಇಲಾಖೆಯ ನಿರ್ದೇಶನದ ಮೇರೆಗೆ ಹಳೆಯ‌ ಎಂಡಿ ರಾಜಣ್ಣ ರೆಡ್ಡಿಯನ್ನು ಅಮಾನತು ಮಾಡಿ ಇಂದಿನಿಂದ ನಾಗೇಶ್ ಡೋಂಗರೆ ಎಂಡಿಯಾಗಿ ಅಧಿಕಾರ ಸ್ಚೀಕಾರ ಮಾಡಿದ್ದಾರೆ..

nagesh dongare
nagesh dongare
author img

By

Published : Jul 15, 2020, 4:09 PM IST

ಶಿವಮೊಗ್ಗ : ಶಿವಮೊಗ್ಗ‌ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್​ನ ನೂತನ ಎಂಡಿ ಆಗಿ ಜಿಲ್ಲಾ ಸಹಕಾರ ಉಪ‌ನಿಬಂಧಕರಾದ ನಾಗೇಶ್ ಡೋಂಗರೆ ಅಧಿಕಾರ‌ ಸ್ವೀಕಾರ ಮಾಡಿದ್ದಾರೆ.

ಇಂದು ಬ್ಯಾಂಕ್​ನ ಎಂಡಿ ಕಚೇರಿಯಲ್ಲಿ ನಾಗೇಶ್ ಡೋಂಗರೆ ಅಧಿಕಾರ ಸ್ವೀಕಾರ ಮಾಡಿದರು. ರಾಜ್ಯ ಸಹಕಾರ ಇಲಾಖೆಯ ನಿರ್ದೇಶನದ ಮೇರೆಗೆ ಹಳೆಯ‌ ಎಂ ಡಿ ರಾಜಣ್ಣ ರೆಡ್ಡಿಯನ್ನು ಅಮಾನತು ಮಾಡಿ ಇಂದಿನಿಂದ ನಾಗೇಶ್ ಡೋಂಗರೆ ಅಧಿಕಾರ ಸ್ಚೀಕಾರ ಮಾಡಿದ್ದಾರೆ.

ನೂತನ ಎಂ ಡಿ ಅಧಿಕಾರ ಸ್ವೀಕಾರ

ಹಾಲಿ ಅಧ್ಯಕ್ಷ ಮಂಜುನಾಥ್ ಗೌಡರವರನ್ನು ಸಹಕಾರ‌ ಇಲಾಖೆಯ 29(c) ಅನ್ವಯ ಅವ್ಯವಹಾರ ನಡೆಸಿದ್ದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಇದರಿಂದ ಮಂಜುನಾಥ್ ಗೌಡರನ್ನು ಬ್ಯಾಂಕ್‌ ಸದಸ್ಯತ್ವ ಸ್ಥಾನ‌ದಿಂದಲೇ ಅಮಾನತು ಮಾಡಲಾಗಿದೆ. ಇದರಿಂದ ಹಾಲಿ ಉಪಾಧ್ಯಕ್ಷರೆ ಅಧ್ಯಕ್ಷ ಸ್ಥಾನದಲ್ಲಿ‌ ಮುಂದುವರೆಯುತ್ತಾರೆ. ಹೀಗಾಗಿ ಹಾಲಿ ಉಪಾಧ್ಯಕ್ಷ ಚನ್ನವೀರಪ್ಪ ಅಧ್ಯಕ್ಷರಾಗಿ ಮುಂದುವರೆಯುತ್ತಾರೆ. ಇದರಿಂದ ನಾಗೇಶ್ ಡೋಂಗರೆ ಅಧ್ಯಕ್ಷರ ಬಳಿ ಬಂದು ಅಧಿಕಾರ ಸ್ವೀಕಾರ ಮಾಡಿದರು.

ನೂತನ ಎಂಡಿಯನ್ನೇ ಅರ್ಧ ಗಂಟೆ ಕಾಯಿಸಿದ ಸಿಬ್ಬಂದಿ : ಸರ್ಕಾರದ ಆದೇಶದ ಪ್ರತಿ ಹಿಡಿದು ಬ್ಯಾಂಕ್​ನ ಎಂಡಿಯಾಗಿ ಅಧಿಕಾರ‌ ಸ್ಚೀಕಾರ ಮಾಡಲು ಬಂದ ನಾಗೇಶ್ ಡೋಂಗರೆ ಅವರನ್ನು ಬ್ಯಾಂಕ್​ನ ಸಿಬ್ಬಂದಿ ಎಂಡಿ‌ ಕಚೇರಿಯ ಕೀ ಇಲ್ಲ ಎಂದು ಅರ್ಧ ಗಂಟೆ ಸತಾಯಿಸಿದರು. ನಂತರ ಕೀ ದೊರಕಿದೆ ಎಂದು ಕಚೇರಿಯ ಬೀಗ ತೆಗೆದ್ದಾರೆ. ನಂತರ ನಾಗೇಶ್ ಡೋಂಗರೆ ಅಧಿಕಾರ ಸ್ವೀಕಾರ ಮಾಡಿದರು.

new-md-to-shimogga-dcc-bank
ನೂತನ ಎಂಡಿ ಅಧಿಕಾರ ಸ್ವೀಕಾರ

ಈ ವೇಳೆ ಮಾತನಾಡಿದ ಎಂಡಿ ನಾಗೇಶ್ ಡೋಂಗರೆ, ಸರ್ಕಾರದ ಆದೇಶದಂತೆ ನಾನು ಇಂದು ಅಧಿಕಾರ ಸ್ವೀಕಾರ ಮಾಡಿದ್ದೇನೆ. ಮುಂದೆ ಬ್ಯಾಂಕ್​ನ ವ್ಯವಹಾರಗಳನ್ನು ನೋಡಿಕೊಳ್ಳುತ್ತೇನೆ ಎಂದರು. ಇದೇ ವೇಳೆ ತಮ್ಮನ್ನು ಕಾಯಿಸಿದ ಸಿಬ್ಬಂದಿಯ ಕುರಿತು ವಿಚಾರಿಸುತ್ತೇನೆ ಎಂದರು.

ಇದೇ ವೇಳೆ ಮಾತನಾಡಿದ ಪ್ರಭಾರ ಅಧ್ಯಕ್ಷ ಚನ್ನವೀರಪ್ಪ, ಇದು ಸರ್ಕಾರದ ನಿರ್ಧಾರ. ಸರ್ಕಾರದಿಮದಲೇ ಆರ್ಡರ್ ಆಗಿದೆ. ಅಧ್ಯಕ್ಷರಾಗಿದ್ದ ಮಂಜುನಾಥ್ ಗೌಡರನ್ನು‌ ಸದಸ್ಯತ್ವ ಸ್ಥಾನದಿಂದ ಅನರ್ಹ ಮಾಡಿದ ಕುರಿತು ಆದೇಶ ಪ್ರತಿ‌ ನೋಡಿದ ನಂತರ ಮುಂದಿನ ತೀರ್ಮಾನ ತೆಗೆದುಕೊಳ್ಳಲಾಗುವುದು. ಸಹಕಾರ ಇಲಾಖೆ‌ ಮತ್ತೆ ಚುನಾವಣೆ ನಡೆಸುವ ಕುರಿತು ಆದೇಶ ಬಂದ ನಂತರ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.

ಡಿಸಿಸಿ ಬ್ಯಾಂಕ್​ನಲ್ಲಿ ನಕಲಿ ಚಿನ್ನ ಅಡಮಾನದಲ್ಲಿ ಕೋಟ್ಯಂತರ ರೂ. ಅವ್ಯವಹಾರ ನಡೆದ ಬಗ್ಗೆ ಬಿಜೆಪಿ ಸರ್ಕಾರ ಸಹಕಾರ ಇಲಾಖೆಯ ಆಂತರಿಕ ತನಿಖೆ ನಡೆಸುತ್ತಿದೆ. ಜಿಪಂನಲ್ಲಿ ಡಿಸಿಸಿ ಬ್ಯಾಂಕ್ ಅವ್ಯವಹಾರದ ತನಿಖೆಗೆ ‍ಸಿಬಿಐಗೆವಹಿಸುವ ಕುರಿತು ಸರ್ವಾನುಮತದ ತೀರ್ಮಾನ ಮಾಡಿತ್ತು. ಸದ್ಯ ಸಹಕಾರ ಇಲಾಖೆಯ ಆಂತರಿಕ ತನಿಖೆಯಿಂದ ಮಂಜುನಾಥ್ ಗೌಡರನ್ನು ಸದಸ್ಯತ್ವದಿಂದ ಅಮಾನತು‌ ಮಾಡಿದೆ. ಇದು ಒಳ್ಳೆಯ ಬೆಳವಣಿಗೆ. ಇದಕ್ಕೆ ಸಿಎಂ ಯಡಿಯೂರಪ್ಪನವರಿಗೆ ಅಭಿನಂದನೆ ಸಲ್ಲಿಸಲಾಗುವುದು ಎಂದು ತೀರ್ಥಹಳ್ಳಿ ಶಾಸಕ ‌ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.