ETV Bharat / state

ದೌರ್ಜನ್ಯ ತಡೆ ಕಾಯ್ದೆ ಜನಪರವಾಗಿದೆ: ಶಾಸಕ ಪಿ. ರಾಜೀವ್ - ದೌರ್ಜನ್ಯ ತಡೆ ಕಾಯ್ದೆ

ಸುಪ್ರೀಂ ಕೋರ್ಟ್​ನ ದೌರ್ಜನ್ಯ ತಡೆ ಕಾಯ್ದೆ ಕುರಿತು ಪ್ರತಿಕ್ರಿಯಿಸಿದ ಕೊಡಚಿ ಕ್ಷೇತ್ರದ ಶಾಸಕ ಪಿ.ರಾಜೀವ್, ನ್ಯಾಯಾಲಯದ ತೀರ್ಪು ಜನಪರ ತೀರ್ಪಾಗಿದೆ. ಕಾನೂನಿನ ದುರುಪಯೋಗವು ಆಗಬಾರದು ಹಾಗೂ ದೌರ್ಜನ್ಯವು ನಡಿಯಬಾರದು. ಈ ನಿಟ್ಟಿನಲ್ಲಿ ಸರ್ವೋಚ್ಚ ನ್ಯಾಯಾಲಯ ನೀಡಿರುವ ತೀರ್ಪು ಜನಪರವಾಗಿದೆ ಎಂದರು.

MLA P. Rajeev  gave compliments to Violence Prevention Act
ದೌರ್ಜನ್ಯ ತಡೆ ಕಾಯ್ದೆ ಜನಪರವಾಗಿದೆ: ಶಾಸಕ ಪಿ. ರಾಜೀವ್
author img

By

Published : Feb 11, 2020, 3:05 PM IST

ಶಿವಮೊಗ್ಗ: ಸುಪ್ರೀಂಕೋರ್ಟ್​ನ ದೌರ್ಜನ್ಯ ತಡೆ ಕಾಯ್ದೆ ಜನಪರವಾಗಿದೆ ಎಂದು ಕೊಡಚಿ ಕ್ಷೇತ್ರದ ಶಾಸಕ ಪಿ.ರಾಜೀವ್ ಅಭಿಪ್ರಾಯಪಟ್ಟಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಪಿ.ರಾಜೀವ್​, ಸುಪ್ರೀಂಕೋರ್ಟ್​ನ ದೌರ್ಜನ್ಯ ತಡೆ ಕಾಯ್ದೆ ಕುರಿತು ಪ್ರತಿಕ್ರಿಯಿಸಿ, ನ್ಯಾಯಾಲಯದ ತೀರ್ಪು ಜನಪರ ತೀರ್ಪಾಗಿದೆ. ಕಾನೂನಿನ ದುರುಪಯೋಗವು ಆಗಬಾರದು ಹಾಗೂ ದೌರ್ಜನ್ಯವೂ ನಡಿಯಬಾರದು. ಈ ನಿಟ್ಟಿನಲ್ಲಿ ಸರ್ವೋಚ್ಚ ನ್ಯಾಯಾಲಯ ನೀಡಿರುವ ತೀರ್ಪು ಜನಪರವಾಗಿದೆ ಎಂದರು.

ಶಾಸಕ ಪಿ. ರಾಜೀವ್

ಅಮಾಯಕರಿಗೆ ತೊಂದರೆ ಆಗುವುದಿಲ್ಲ, ಅಪರಾಧಿಗಳಿಗೆ ಬಚಾವ್ ಆಗುವ ಲಕ್ಷಣವೂ ಕೂಡಾ ಇಲ್ಲ. ಕಾನೂನಿನ ಮೂಲಕ ಅಪರಾಧಿ ತಪ್ಪಿಸಿಕೊಳ್ಳಬಾರದು, ಅಮಾಯಕರು ತೊಂದರೆಗೆ ಬಳಗಾಗಬಾರದೆಂಬ ಅಂಶವನ್ನು ಸುಪ್ರೀಂ ಕೋರ್ಟ್ ಹೇಳಿದೆ ಎಂದರು.

ಇನ್ನು ಪ್ರತಿಪಕ್ಷಗಳು ಈ ತೀರ್ಪನ್ನು ಮರುಪರಿಶೀಲನೆ ಮಾಡಬೇಕು ಎಂದಿದ್ದಾರೆ ಎನ್ನುವ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಪ್ರತಿಪಕ್ಷಗಳು ಈ ತೀರ್ಪನ್ನು ಸರಿಯಾಗಿ ಓದಿಲ್ಲ ಅನಿಸುತ್ತದೆ ಎಂದು ಟಾಂಗ್ ನೀಡಿದರು. ಇನ್ನು ಸಿಎಎ ಬಗ್ಗೆಯೂ ಕೂಡಾ ಸಂವಿಧಾನದ ಮೂಲ ಅಂಶಗಳನ್ನು ತಿಳಿದುಕೊಳ್ಳದೇ ಕೇವಲ ಕಾಯ್ದೆಯನ್ನು ವಿರೋಧಿಸುವುದೇ ನಮ್ಮ ಜವಬ್ದಾರಿ ಎಂದು ಕಾಂಗ್ರೆಸ್​ ತಿಳಿದುಕೊಂಡಿದೆ ಎಂದು ಆಕ್ರೋಶ ಹೊರ ಹಾಕಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.