ETV Bharat / state

ಶೆಟ್ಟಿಹಳ್ಳಿ ಗ್ರಾಮಕ್ಕೆ ಭೂಗತ ಕೇಬಲ್ ಅಳವಡಿಕೆ.. ಶಾಸಕ ಕೆ ಬಿ ಅಶೋಕ ನಾಯ್ಕರಿಂದ ಚಾಲನೆ

ಶಿವಮೊಗ್ಗ ತಾಲೂಕು ಶೆಟ್ಟಿಹಳ್ಳಿ ಹಾಗೂ ಚಿತ್ರಶೆಟ್ಟಿಹಳ್ಳಿ ಗ್ರಾಮಗಳಿಗೆ ಭೂಗತ ಕೇಬಲ್ ಅಳವಡಿಕೆಗೆ ಹೈಕೋರ್ಟ್ ಆದೇಶದ ಮೇರೆಗೆ ರಾಜ್ಯ ಸರ್ಕಾರ ವನ್ಯ ಜೀವಿಗಳಿಗೆ ಹಾನಿಯಾಗದಂತೆ ಮೆಸ್ಕಾಂ ಮೂಲಕ ಭೂಗತ ಕೇಬಲ್ ಅಳವಡಿಕೆಗೆ ಮಂಜೂರಾತಿ ನೀಡಿದೆ.

ಶಾಸಕ ಕೆ ಬಿ ಅಶೋಕ ನಾಯ್ಕ ಅವರಿಂದ ಭೂಗತ ಕೇಬಲ್ ಅಳವಡಿಕೆ

author img

By

Published : Dec 11, 2022, 7:26 PM IST

ಶಿವಮೊಗ್ಗ: ಶರಾವತಿ ಮುಳುಗಡೆ ಸಂತ್ರಸ್ತ ಶೆಟ್ಟಿಹಳ್ಳಿ ಗ್ರಾಮಕ್ಕೆ ಸರ್ಕಾರದಿಂದ ಮಂಜೂರಾದ ಭೂಗತ ಕೇಬಲ್ ಅಳವಡಿಕೆ ಕಾಮಗಾರಿಗೆ ಶಿವಮೊಗ್ಗ ಗ್ರಾಮಾಂತರ ಶಾಸಕ ಕೆ. ಬಿ ಅಶೋಕ ನಾಯ್ಕ್ ಅವರು ಶಂಕುಸ್ಥಾಪನೆ ನೆರವೇರಿಸಿದ್ದಾರೆ.

ಶಿವಮೊಗ್ಗ ತಾಲೂಕು ಶೆಟ್ಟಿಹಳ್ಳಿ ಹಾಗೂ ಚಿತ್ರಶೆಟ್ಟಿಹಳ್ಳಿ ಗ್ರಾಮಗಳಿಗೆ ಭೂಗತ ಕೇಬಲ್ ಅಳವಡಿಕೆಗೆ ಹೈಕೋರ್ಟ್ ಆದೇಶದ ಮೇರೆಗೆ ರಾಜ್ಯ ಸರ್ಕಾರ ವನ್ಯ ಜೀವಿಗಳಿಗೆ ಹಾನಿಯಾಗದಂತೆ ಮೆಸ್ಕಾಂ ಮೂಲಕ ಭೂಗತ ಕೇಬಲ್ ಅಳವಡಿಕೆಗೆ ಮಂಜೂರಾತಿ ನೀಡಿದೆ. ಇದರಿಂದ ಇಂದು ಶೆಟ್ಟಿಹಳ್ಳಿ ಗ್ರಾಮದಲ್ಲಿ ನಡೆದ ಸಮಾರಂಭದಲ್ಲಿ ಶಾಸಕರು ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದರು.

ಜೊತೆಗೆ ವೀರಗಾರನ ಭೈರನಕೊಪ್ಪ ಗ್ರಾಮದಲ್ಲಿನ ಎಸ್. ಸಿ ಕಾಲೋನಿಯಲ್ಲಿ ವಿಶೇಷ ಘಟಕ ಯೋಜನೆಯಡಿಯಲ್ಲಿ ಗ್ರಾಮೀಣ ವಿದ್ಯುದ್ದಿಕರಣ ಕಾಮಗಾರಿಗೆ ಚಾಲನೆ ನೀಡಿದರು. ಆರು ದಶಕಗಳಿಂದ ಆಗದ ಕೆಲಸ ನಮ್ಮ ಸರ್ಕಾರದ ಅವಧಿಯಲ್ಲಿ ನೆರವೇರಿದೆ ಎಂದು ಸನ್ಮಾನ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ನಿಕಟಪೂರ್ವ ಮುಖ್ಯಮಂತ್ರಿ ಬಿ. ಎಸ್ ಯಡಿಯೂರಪ್ಪ ಅವರಿಗೆ ಹಾಗೂ ಲೋಕಸಭಾ ಸಂಸದ ಬಿ ವೈ ರಾಘವೇಂದ್ರ ಅವರಿಗೆ ಇಂಧನ ಸಚಿವರಾದ ಸುನೀಲ್​ ಕುಮಾರ್ ಅವರಿಗೆ ಕೃತಜ್ಞತೆ ಸಲ್ಲಿಸಿದರು.

ಈ ವೇಳೆ ಬಸಪ್ಪ ಮುಖ್ಯ ಇಂಜಿನಿಯರ್, ಶಶಿಧರ್ ಅಧೀಕ್ಷಕ ಇಂಜಿನಿಯರ್, ತಮ್ಮಡಿಹಳ್ಳಿ ನಾಗರಾಜ್, ಪೆರುಮಾಳ್, ಅರುಣ್, ಸಿಂಗನಹಳ್ಳಿ ಸುರೇಶ್, ಸೂಡೂರು ಸುಧಾಕರ್, ಪ್ರೇಮ ಸುಧಾಕರ್, ಗ್ರಾಮ ಪಂಚಾಯತಿ ಚುನಾಯಿತ ಪ್ರತಿನಿಧಿಗಳು, ಮೆಸ್ಕಾಂ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.

ಓದಿ: ಸುಳ್ಯದಲ್ಲಿ ಮೆಸ್ಕಾಂ ಭೂಗತ ಕೇಬಲ್ ಅಳವಡಿಕೆ; ಕಳಪೆ ಕಾಮಗಾರಿ ಆರೋಪ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.