ETV Bharat / state

ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ - mla araga jnanendra

ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರರಿಗೆ ನಿರೀಕ್ಷೆಯಂತೆ ಮಂತ್ರಿ ಸ್ಥಾನ ಒಲಿದಿದೆ. ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಆರಗ ಜ್ಞಾನೇಂದ್ರರು ಇಂದು ಕ್ಯಾಬಿನೆಟ್ ದರ್ಜೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

mla araga jnanendra takes oath as minister in bommai cabinet
ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಆರಗ ಜ್ಞಾನೇಂದ್ರ
author img

By

Published : Aug 4, 2021, 3:16 PM IST

ಶಿವಮೊಗ್ಗ: ನಿರೀಕ್ಷೆಯಂತೆ ತೀರ್ಥಹಳ್ಳಿ ಕ್ಷೇತ್ರದ ಶಾಸಕ ಆರಗ ಜ್ಞಾನೇಂದ್ರ ಅವರಿಗೆ ಸಂಪುಟದಲ್ಲಿ ಸ್ಥಾನ ಲಭಿಸಿದೆ. ಬಹು ವರ್ಷ ತಾಳ್ಮೆಯಿಂದ ಕಾದಿದ್ದ ಜ್ಞಾನೇಂದ್ರ ಅವರಿಗೆ ಸಚಿವರಾಗುವ ಯೋಗ ಬಂದಿದೆ. ಶಿವಮೊಗ್ಗ ಜಿಲ್ಲೆಯ ಉಸ್ತುವಾರಿ ಸಚಿವರಾಗುವ ಸಾಧ್ಯತೆ ಇದೆ.

mla araga jnanendra takes oath as minister in bommai cabinet
ಬೊಮ್ಮಾಯಿ ಸಂಪುಟದಲ್ಲಿ ಸಚಿವರಾದ ಆರಗ ಜ್ಞಾನೇಂದ್ರ

ನೂತನ ಸಚಿವ ಆರಗ ಜ್ಞಾನೇಂದ್ರ ಅವರ ಕುರಿತು ತಿಳಿಯಬೇಕಾದ ಪ್ರಮುಖ ಸಂಗತಿಗಳು ಇಲ್ಲಿವೆ.

ಆರಗ ಜ್ಞಾನೇಂದ್ರ ಅವರ ಕುಟುಂಬ :

ಆರಗ ಜ್ಞಾನೇಂದ್ರ ಅವರು 1951ರ ಮಾರ್ಚ್ 15ರಂದು ಜನಿಸಿದರು. ತೀರ್ಥಹಳ್ಳಿ ತಾಲೂಕು ಅಗ್ರಹಾರ ಹೋಬಳಿ ಆರಗ ಪಂಚಾಯತ್ ಹಿಸಣ ಗ್ರಾಮದ ರಾಮಣ್ಣ ಗೌಡ ಮತ್ತು ಚಿನ್ನಮ್ಮ ದಂಪತಿಯ ಒಂಭತ್ತು ಮಕ್ಕಳಲ್ಲಿ ಮೊದಲನೆಯವರು.

ARAGAmla araga jnanendra takes oath as minister in bommai cabinet
ಆರಗ ಜ್ಞಾನೇಂದ್ರ ಕುಟುಂಬ

ಪ್ರಾಥಮಿಕ ವಿದ್ಯಾಭ್ಯಾಸವನ್ನು ಆರಗ ಗ್ರಾಮದಲ್ಲಿ ಪೂರ್ಣಗೊಳಿಸಿದರು. ಕುಟುಂಬಕ್ಕೆ ಆರ್ಥಿಕ ಸಮಸ್ಯೆ ಇದ್ದಿದ್ದರಿಂದ ವಿದ್ಯಾಭ್ಯಾಸ ಮೊಟಕುಗೊಳಿಸುವ ಯೋಚನೆಯಲ್ಲಿದ್ದರು. ಆಗ RSS ಪ್ರಮುಖರಾದ ತಾರಗೊಳ್ಳಿ ನಾಗರಾಜ್ ರಾವ್ ಅವರ ಸಂಪರ್ಕಕ್ಕೆ ಬಂದರು. ಶಿಕ್ಷಣ ಮುಂದುವರೆಯಿತು. ಬಿ.ಕಾಂ ಪದವಿ ಪಡೆದರು.

ಸಚಿವ ಆರಗ ಜ್ಞಾನೇಂದ್ರ

ಸಂಘಟನೆ, ತುರ್ತು ಪರಿಸ್ಥಿತಿಯಲ್ಲಿ ಹೋರಾಟ:

ವಿದ್ಯಾರ್ಥಿ ದಿಸೆಯಿಂದ RSS ಸಂಪರ್ಕ ಹೊಂದಿದ್ದ ಆರಗ ಜ್ಞಾನೇಂದ್ರ ಪೂರ್ಣ ಶಿಕ್ಷಣ ಪಡೆದರು. RSS ಶಾಖೆಯ ಮುಖ್ಯ ಶಿಕ್ಷಕನಾಗಿ ಜವಾಬ್ದಾರಿ ನಿಭಾಯಿಸಿದ್ದರು. ತುರ್ತು ಪರಿಸ್ಥಿತಿ ಸಂದರ್ಭ ಸರ್ಕಾರದ ನಡೆ ವಿರುದ್ಧ ಹೋರಾಟ ನಡೆಸಿದರು. ಈ ವೇಳೆ ಇವರನ್ನು ಬಂಧಿಸಿ, ಆರು ತಿಂಗಳು ಜೈಲಿನಲ್ಲಿ ಇರಿಸಲಾಯಿತು.

ಸೋಲು, ಗೆಲುವಿನ ರುಚಿ:

ಸಂಘಟನೆ, ಹೋರಾಟದ ಜೊತೆಗೆ ಆರಗ ಜ್ಞಾನೇಂದ್ರ ಅವರು ರಾಜಕೀಯದಲ್ಲಿ ಸಕ್ರಿಯರಾದರು. ತಾಲೂಕು ಬೋರ್ಡ್ ಚುನಾವಣೆಗೆ ಸ್ಪರ್ಧಿಸಿದರು. 1983ರಲ್ಲಿ ಮೊದಲ ಬಾರಿಗೆ ವಿಧಾನಸಭೆ ಚುನಾವಣೆಯ ಅಖಾಡಕ್ಕಿಳಿದರು. ಆದರೆ, ಎರಡು ಸಾವಿರ ಮತಗಳ ಅಂತರದಲ್ಲಿ ಸೋಲು ಕಾಣುವಂತಾಯಿತು. 1985, 1989ರಲ್ಲೂ ಆರಗ ಜ್ಞಾನೇಂದ್ರ ಅವರಿಗೆ ಸತತ ಸೋಲಾಯಿತು.
ಸಾಲು ಸಾಲು ಸೋಲುಗಳಾದರೂ ಆರಗ ಜ್ಞಾನೇಂದ್ರ ಅವರು ಎದಗುಂದಲಿಲ್ಲ. ಪಕ್ಷ ಸಂಘಟನೆ ಮಾಡುತ್ತ ವಿವಿಧ ಜವಾಬ್ದಾರಿಗಳನ್ನು ನಿಭಾಯಿಸಿದರು. ಬಿಜೆಪಿಯ ಜಿಲ್ಲಾ ಅಧ್ಯಕ್ಷರಾದರು.

mla araga jnanendra takes oath as minister in bommai cabinet
ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಆರಗ ಜ್ಞಾನೇಂದ್ರ
ಈ ನಡುವೆ ಜಿಲ್ಲಾ ಪರಿಷತ್ ಚುನಾವಣೆಗೆ ಸ್ಪರ್ಧೆ ಮಾಡಿದರು. ಅಲ್ಲಿ ಗೆಲುವು ಸಾಧಿಸಿದರು. ಇದೇ ವೇಳೆ, ಶಿವಮೊಗ್ಗ ಹಾಲು ಒಕ್ಕೂಟದ ನಿರ್ದೇಶಕರಾದರು. ಶಿಮುಲ್ ಅಧ್ಯಕ್ಷರಾಗಿಯೂ ಜವಾಬ್ದಾರಿ ನಿಭಾಯಿಸಿದರು. 1994ರಲ್ಲಿ ತೀವ್ರ ಜಿದ್ದಾಜಿದ್ದಿಯ ಚುನಾವಣೆಯಲ್ಲಿ ಆರಗ ಜ್ಞಾನೇಂದ್ರ ಗೆಲುವು ಸಾಧಿಸಿದರು. ಎರಡು ಬಾರಿ ತೀರ್ಥಹಳ್ಳಿ ವಿಧಾನಸಭೆ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಡಿ.ಬಿ. ಚಂದ್ರೇಗೌಡ ಅವರನ್ನು ಸೋಲಿಸಿದ್ದರು.

ಪಕ್ಷ ಸಂಘಟನೆಯಲ್ಲಿ ನಿರತರಾಗಿದ್ದ ಜ್ಞಾನೇಂದ್ರ

ಒಮ್ಮೆ ಗೆದ್ದವರು ತೀರ್ಥಹಳ್ಳಿ ಪುನಃ ಗೆಲ್ಲುವುದಿಲ್ಲ ಎಂಬ ನಂಬಿಕೆ ಇತ್ತು. ಇದನ್ನು ಹುಸಿಗೊಳಿಸಿ 1999 ಮತ್ತು 2004ರಲ್ಲಿ ಆರಗ ಜ್ಞಾನೇಂದ್ರ ಅವರು ಗೆಲುವು ಸಾಧಿಸಿದರು. 2008 ಮತ್ತು 2013ರಲ್ಲಿ ಕಿಮ್ಮನೆ ರತ್ನಾಕರ್ ಅವರ ವಿರುದ್ಧ ಸೋಲನುಭವಿಸಿದರು.

2018ರ ಚುನಾವಣೆ ತೀರ್ಥಹಳ್ಳಿ ಕ್ಷೇತ್ರದ ಪಾಲಿಗೆ ಅತ್ಯಂತ ಜಿದ್ದಾಜಿದ್ದಿಯಿಂದ ಕೂಡಿತ್ತು. ಕಾಂಗ್ರೆಸ್​ನಿಂದ ಕಿಮ್ಮನೆ ರತ್ನಾಕರ್, ಜೆಡಿಎಸ್​ನಿಂದ ಆರ್.ಎಂ.ಮಂಜುನಾಥಗೌಡ ಅವರು ಬಿಜೆಪಿಯ ಆರಗ ಜ್ಞಾನೇಂದ್ರ ಅವರಿಗೆ ಎದುರಾಳಿಯಾಗಿದ್ದರು. ತ್ರಿಕೋನ ಸ್ಪರ್ಧೆಯಲ್ಲಿ ಆರಗ ಜ್ಞಾನೇಂದ್ರ ಅವರು ಗೆದ್ದು ಬೀಗಿದರು. 22 ಸಾವಿರ ಮತಗಳ ಅಂತರದಲ್ಲಿ ಗೆಲುವು ದಾಖಲಿಸಿದರು.

ರೈತ ಮೋರ್ಚಾಯಿಂದ ಹೌಸಿಂಗ್ ಬೋರ್ಡ್ ತನಕ:

ಶಾಸಕರಾದ ಬಳಿಕವು ಆರಗ ಜ್ಞಾನೇಂದ್ರ ಅವರು ಪಕ್ಷದ ಜವಾಬ್ದಾರಿಗಳನ್ನು ನಿಭಾಯಿಸಿದ್ದಾರೆ. ಬಿಜೆಪಿ ರೈತ ಮೋರ್ಚಾದ ರಾಜ್ಯಾಧ್ಯಕ್ಷರಾಗಿದ್ದರು. ಅಡಕೆ ಬೆಳೆಗಾರರ ಪರವಾಗಿ ಹೋರಾಟಗಳನ್ನು ನಡೆಸಿದರು. ಕೇಂದ್ರ ಸರ್ಕಾರದವರೆಗೆ ರೈತರ ನಿಯೋಗ ಕರೆದೊಯ್ದರು. ಯಡಿಯೂರಪ್ಪ ಅವರ ನೇತೃತ್ವದ ಸರ್ಕಾರದಲ್ಲಿ ಅಡಿಕೆ ಬೆಳೆಗಾರರ ಕಾರ್ಯಪಡೆ ಅಧ್ಯಕ್ಷರಾದರು. ಹೌಸಿಂಗ್ ಬೋರ್ಡ್ ಜವಾಬ್ದಾರಿಯನ್ನೂ ಇವರಿಗೆ ಹೆಗಲಿಗೆ ವಹಿಸಿತ್ತು ಸರ್ಕಾರ.

ಈಗ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಚಿವ ಸಂಪುಟದಲ್ಲಿ ಆರಗ ಜ್ಞಾನೇಂದ್ರ ಅವರು ಸಚಿವರಾಗಿದ್ದಾರೆ. ಅವರ ಬೆಂಬಲಿಗರು, ಬಿಜೆಪಿ ಕಾರ್ಯಕರ್ತರಿಗೆ ಇದು ಉತ್ಸಾಹವನ್ನು ಹೆಚ್ಚಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.