ETV Bharat / state

ಕಾಶಿ, ಮಥುರಾದಲ್ಲೂ ಭವ್ಯ ಮಂದಿರಗಳು ತಲೆ ಎತ್ತಲಿವೆ: ಸಚಿವ ಈಶ್ವರಪ್ಪ - construction of the Ram Mandir

ಅಯೋಧ್ಯೆಯಂತೆ ಕಾಶಿ, ಮಥುರಾದಲ್ಲೂ ಭವ್ಯ ಮಂದಿರಗಳು ನಿರ್ಮಾಣವಾಗಲಿವೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ವಿಶ್ವಾಸ ವ್ಯಕ್ತಪಡಿಸಿದರು.

minister K.S.Ehwarappa
ಸಚಿವ ಕೆ.ಎಸ್​.ಈಶ್ವರಪ್ಪ
author img

By

Published : Aug 5, 2020, 3:00 PM IST

Updated : Aug 5, 2020, 5:11 PM IST

ಶಿವಮೊಗ್ಗ: ಮುಂದಿನ ದಿನಗಳಲ್ಲಿ ಕಾಶಿ ಹಾಗೂ ಮಥುರಾದಲ್ಲಿಯೂ ಭವ್ಯ ಮಂದಿಗಳು ನಿರ್ಮಾಣ ಆಗುತ್ತವೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಯೋಧ್ಯೆ, ಕಾಶಿ, ಮಥುರಾ ಈ ಮೂರು ಶ್ರದ್ಧಾ ಕೇಂದ್ರಗಳಲ್ಲಿಯೂ ಗುಲಾಮಗಿರಿಯ ಸಂಕೇತಗಳಿವೆ. ಹಾಗಾಗಿ, ಮುಂದಿನ ದಿನಗಳಲ್ಲಿ ಅಲ್ಲಿಯೂ ಭವ್ಯ ಮಂದಿರಗಳು ನಿರ್ಮಾಣವಾಗಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಚಿವ ಕೆ.ಎಸ್​.ಈಶ್ವರಪ್ಪ

ಅಯೋಧ್ಯೆಯ ಹೋರಾಟದಲ್ಲಿ ನಾನು ಭಾಗವಹಿಸಿದ್ದೆ. ಲಾಠಿ ಏಟಿನ ಹೊಡೆತ ತಿಂದರೂ ಮಂದಿರ ಅಲ್ಲೇ ನಿರ್ಮಾಣವನ್ನು ಅಲ್ಲಿಯೇ ಮಾಡುತ್ತೇವೆ ಎನ್ನುವ ಘೋಷವಾಕ್ಯದಂತೆ ಹಾಗೂ ಅನೇಕ ಜನರ ತ್ಯಾಗ ಬಲಿದಾನದ ಫಲವಾಗಿ ಇಂದು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿದೆ ಎಂದರು.

Last Updated : Aug 5, 2020, 5:11 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.