ETV Bharat / state

ಸಿಎಂ ರಾಜೀನಾಮೆ ಕೇಳುವ ನೈತಿಕತೆ ವಿರೋಧ ಪಕ್ಷದವರಿಗಿಲ್ಲ: ಸಚಿವ ಈಶ್ವರಪ್ಪ - Shimoga

ಸಿಎಂ ಬಿಎಸ್​ವೈ ರಾಜೀನಾಮೆ ಕೇಳುವ ನೈತಿಕತೆ ವಿರೋಧ ಪಕ್ಷದವರಿಗೆ ಇಲ್ಲ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಕಿಡಿಕಾರಿದ್ದಾರೆ.

Shimoga
ಸಿಎಂ ರಾಜೀನಾಮೆ ಕೇಳುವ ನೈತಿಕತೆ ವಿರೋಧ ಪಕ್ಷದವರಿಗಿಲ್ಲ: ಸಚಿವ ಈಶ್ವರಪ್ಪ
author img

By

Published : Dec 24, 2020, 3:42 PM IST

ಶಿವಮೊಗ್ಗ: ಡಿನೋಟಿಫಿಕೇಷನ್ ವಿಚಾರದಲ್ಲಿ ಸಿಎಂ ರಾಜೀನಾಮೆ ಕೇಳಲು ವಿರೋಧ ಪಕ್ಷದವರಿಗೆ ಯಾವುದೇ ನೈತಿಕತೆ ಇಲ್ಲ ಎಂದು ಗ್ರಾಮೀಣಾಭಿವೃದ್ಧಿ ಖಾತೆ ಸಚಿವ ಕೆ.ಎಸ್.ಈಶ್ವರಪ್ಪ ಕಿಡಿಕಾರಿದ್ದಾರೆ.

ವಿರೋಧ ಪಕ್ಷದ ವಿರುದ್ಧ ಸಚಿವ ಕೆ.ಎಸ್​.ಈಶ್ವರಪ್ಪ ವಾಗ್ದಾಳಿ

ಹಿಂದೆ ಕಾಂಗ್ರೆಸ್ ಪಕ್ಷದವರು ಸಿಎಂ ಆಗಿದ್ದಾಗ ಯಾರೂ ಡಿನೋಟಿಫಿಕೇಷನ್ ಮಾಡಿಲ್ವಾ?, ಅವರೆಲ್ಲಾ ರಾಜೀನಾಮೆ ನೀಡಿದ್ದಾರಾ ಎಂದು ಪ್ರಶ್ನಿಸಿದ ಅವರು, ವಿರೋಧ ಪಕ್ಷದಲ್ಲಿ ಇರುವುದಕ್ಕೆ ಅವರೆಲ್ಲ ಅಯೋಗ್ಯರು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಓದಿ: ಸಿಎಂ ಬಿಎಸ್​​ವೈಗೆ ಸಂಕಷ್ಟ: ಅಕ್ರಮ ಡಿನೋಟಿಫಿಕೇಷನ್ ಪ್ರಕರಣ ರದ್ದುಪಡಿಸಲು ನಿರಾಕರಿಸಿದ ಹೈಕೋರ್ಟ್

ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಅವರ ಡಿನೋಟಿಫಿಕೇಷನ್ ಪ್ರಕರಣ ಹಿಂದೆ ನ್ಯಾಯಾಲಯದಲ್ಲಿ ರದ್ದಾಗಿತ್ತು. ಈಗ ಮರು ತನಿಖೆಗೆ ಕೋರ್ಟ್ ಆದೇಶ ನೀಡಿದೆ. ನಮಗೆ ನ್ಯಾಯಾಲಯದಲ್ಲಿ ನಂಬಿಕೆ ಇದೆ. ನಮಗೆ ನ್ಯಾಯ ಸಿಗಲಿದೆ ಎಂಬ ವಿಶ್ವಾಸವಿದೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.