ಶಿವಮೊಗ್ಗ: ಹತ್ಯೆಯಾದ ಭಜರಂಗದಳ ಕಾರ್ಯಕರ್ತ ಹರ್ಷ ಕುಟುಂಬ ಒಬ್ಬಂಟಿ ಅಲ್ಲ. ಅವರ ಹಿಂದೆ ಹಿಂದೂ ಸಮಾಜ ಮತ್ತು ನಮ್ಮ ಸರ್ಕಾರ ಜೊತೆಗಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ. ಎಸ್ ಈಶ್ವರಪ್ಪ ಹೇಳಿದರು.
ಹರ್ಷ ಕುಟುಂಬಕ್ಕೆ ಭೇಟಿ ನೀಡಿ ಸಾಂತ್ವನ ಹೇಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹರ್ಷ ಕಗ್ಗೊಲೆ ಆಗುತ್ತೆ ಅಂತ ನಾವು ಯಾರು ಊಹಿಸಿರಲಿಲ್ಲ. ಕೂಲೆ ಆದ ತಕ್ಷಣ ಕೊಲೆಗಡುಕರನ್ನು ಬಂಧಿಸಲಾಗಿದೆ. ಇಡೀ ರಾಜ್ಯ, ಹಿಂದೂ ಸಮಾಜದ ಸಂಘಟನೆಗಳು ಹರ್ಷ ಹತ್ಯೆ ಖಂಡಿಸುತ್ತಿದೆ. ಹಾಗೂ ಅವರ ಕುಟುಂಬಕ್ಕೆ ಸಹಕಾರ ಮಾಡುತ್ತಿದೆ ಎಂದರು.
ಎಲ್ಲ ವಿಚಾರಗಳನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದೇನೆ. ಸಿಎಂ ಸಹ ಹರ್ಷ ಕುಟುಂಬಕ್ಕೆ ಆದ ಅನ್ಯಾಯವನ್ನು ಯಾವುದೇ ಕಾರಣಕ್ಕೂ ಸುಮ್ಮನೆ ಬಿಡುವುದಿಲ್ಲ. ಕೊಲೆಗಡುಕರ ಹಿಂದೆ ಯಾವ ಸಂಘಟನೆಗಳಿವೆಯೋ ಅದರ ಬಗ್ಗೆ ಬಿಗಿ ಮಾಡುತ್ತೇವೆ ಎಂದಿದ್ದಾರೆ. ರಾಜ್ಯ ಸರ್ಕಾರ ಸಹ ಏನು ಪರಿಹಾರ ಕೊಡಬೇಕು ಅದನ್ನ ಕೊಡುತ್ತದೆ ಎಂದಿದ್ದಾರೆ. ಈ ಪ್ರಕರಣದ ಕುರಿತು ಯಾರು ಆರೋಪಗಳನ್ನು ಮಾಡುತ್ತಿದ್ದಾರೋ ಹಾಗೂ ಏನು ಕ್ರಮಗಳನ್ನು ಸರ್ಕಾರ ತೆಗೆದುಕೊಂಡಿದೆ ಎನ್ನುವುದು ಮುಂದೆ ಗೊತ್ತಾಗಲಿದೆ ಎಂದು ಹೇಳಿದರು.
ಓದಿ: ಹರ್ಷ ಕೊಲೆ ಪ್ರಕರಣ: ತನಿಖೆ ವರದಿ ನೀಡುವಂತೆ ಡಿಜಿಗೆ ಪತ್ರ ಬರೆದ ಆರಗ ಜ್ಞಾನೇಂದ್ರ