ETV Bharat / state

ಸಂತೋಷ್​ ಪಾಟೀಲ ಆತ್ಮಹತ್ಯೆ ಪ್ರಕರಣದಲ್ಲಿ ಬಿ ರಿಪೋರ್ಟ್​ ಸಲ್ಲಿಕೆ : ಆರೋಪದಿಂದ ಮುಕ್ತನಾಗಿದ್ದೇನೆ ಎಂದ ಈಶ್ವರಪ್ಪ - ಆರೋಪದಿಂದ ಮುಕ್ತನಾಗಿದ್ದೇನೆ ಎಂದ ಈಶ್ವರಪ್ಪ

ಸಂತೋಷ್​ ಪಾಟೀಲ ಆತ್ಮಹತ್ಯೆ ಪ್ರಕರಣದಲ್ಲಿ ಉಡುಪಿ ಪೊಲೀಸರು ಈಶ್ವರಪ್ಪ ಅವರ ಪುತ್ರ ಕಾಂತೇಶ್ ಹಾಗೂ ರಮೇಶ್ ಎಂಬುವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು.

ಸಂತೋಷ್​ ಪಾಟೀಲ ಆತ್ಮಹತ್ಯೆ ಪ್ರಕರಣಕ್ಕೆ ಬಿ ರಿಪೋರ್ಟ್​: ಆರೋಪದಿಂದ ಮುಕ್ತನಾಗಿದ್ದೇನೆ ಎಂದ ಈಶ್ವರಪ್ಪ

author img

By

Published : Jul 20, 2022, 7:30 PM IST

Updated : Jul 20, 2022, 10:56 PM IST

ಶಿವಮೊಗ್ಗ: ನನ್ನ ಮೇಲೆ ಯಾವುತ್ತು ಸುಳ್ಳು ಕೇಸು ಹಾಕಲಾಗಿತ್ತೋ ಅಂದೇ ನನಗೆ ಆರೋಪದಿಂದ ಮುಕ್ತವಾಗಿ ಬರುತ್ತೇನೆ ಎಂಬ ನಂಬಿಕೆ ಇತ್ತು. ಇಂದು ನಾನು ಆರೋಪದಿಂದ ಮುಕ್ತನಾಗಿದ್ದೇನೆ ಎಂಬ ತೃಪ್ತಿ ಇದೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ತಮ್ಮ ವಿರುದ್ಧದ ಪ್ರಕರಣದಲ್ಲಿ ಬಿ ರಿಪೋರ್ಟ್​​​​ ಕುರಿತು ಪ್ರತಿಕ್ರಿಯಿಸಿದ್ದಾರೆ.

ಸಂತೋಷ್​ ಪಾಟೀಲ ಆತ್ಮಹತ್ಯೆ ಪ್ರಕರಣದಲ್ಲಿ ಉಡುಪಿ ಪೊಲೀಸರು ಈಶ್ವರಪ್ಪ ಅವರ ಪುತ್ರ ಕಾಂತೇಶ್ ಹಾಗೂ ರಮೇಶ್ ಎಂಬುವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು. ಈ ಪ್ರಕರಣದ ತನಿಖೆ ‌ನಡೆಸಿದ ಪೊಲೀಸರು, ಸಂತೋಷ್​ ಪಾಟೀಲ್​​ರವರ ಆತ್ಮಹತ್ಯೆ ಪ್ರಕರಣದಲ್ಲಿ ಈಶ್ವರಪ್ಪ ಸೇರಿದಂತೆ ಇತರ ಆರೋಪಿಗಳ ಬಗ್ಗೆ ಬಿ ರಿಪೋರ್ಟ್​​​ ಹಾಕಿದ್ದಾರೆ.‌

ಸಿಹಿ ತಿನಿಸುತ್ತಿರುವ ಸಂಬಂಧಿಕರು
ಸಿಹಿ ತಿನಿಸುತ್ತಿರುವ ಸಂಬಂಧಿಕರು

ಈ ಕುರಿತು ಮಾತನಾಡಿದ ಅವರು, ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ನನ್ನದು ಒಂದೇ ಒಂದು ಪರ್ಸಟೆಂಜ್ ಪಾತ್ರ ಸಹ ಇಲ್ಲ ಎಂದು ನಾನು ಅಂದೇ ಹೇಳಿದ್ದೆ. ನನ್ನ ಮನೆ ದೇವರು ಚೌಡೇಶ್ವರಿ ದೇವಿಯ ಆರ್ಶಿವಾದದಿಂದ ಆರೋಪದಿಂದ ಮುಕ್ತವಾಗಿ ಬರುತ್ತೆನೆ ಎಂದು ಅಂದೇ ಹೇಳಿದ್ದೆ. ಈಗ ತಾಯಿ ಚೌಡೇಶ್ವರಿ‌ ದೇವಿಯ ಆರ್ಶಿವಾದದಿಂದ ಆರೋಪದಿಂದ ಮುಕ್ತನಾಗಿ ಹೊರ‌ ಬಂದಿದ್ದೆನೆ ಎಂದು ಸಂತಸಗೊಂಡರು.

ನಾನು ಅಂದು ರಾಜೀನಾಮೆ ನೀಡಿದಾಗ ನಮ್ಮ ರಾಷ್ಟ್ರೀಯ ನಾಯಕರುಗಳು, ರಾಜ್ಯ ನಾಯಕರುಗಳು ಅನೇಕ ಸ್ವಾಮೀಜಿಗಳು ನೋವಿನಿಂದ ಫೋನ್ ಮಾಡುತ್ತಿದ್ದರು. ಅನೇಕ ಸ್ವಾಮೀಜಿಗಳು ನನ್ನ ಮನೆಗೆ ಬಂದು ನನಗೆ ಧೈರ್ಯ ಹೇಳಿ‌ ಆಶೀರ್ವಾದ ಮಾಡಿ, ನಾನು ಆರೋಪದಿಂದ ಹೊರ ಬರ್ತನೆ ಅಂತ ಹೇಳಿದ್ದರು. ಈಗ ನಾನು ಆರೋಪದಿಂದ ಹೊರ ಬಂದಿದ್ದಕ್ಕೆ ನನಗ ಸಂತೋಷವಾಗಿದೆ.

ಆರೋಪದಿಂದ ಮುಕ್ತನಾಗಿದ್ದೇನೆ ಎಂದ ಈಶ್ವರಪ್ಪ

ನಾನು ನನ್ನ ಪಕ್ಷ, ಸರ್ಕಾರ ಹಾಗೂ ಕಾರ್ಯಕರ್ತರು ಮುಜುಗರಕ್ಕೆ ಈಡಾಗಬಾರದು ಎಂಬ ಕಾರಣಕ್ಕೆ ರಾಜೀನಾಮೆ ನೀಡಿದ್ದೆ,‌ ಈಗ ಅವರೆಲ್ಲಾ ಮುಜುಗರದಿಂದ ಹೊರ ಬಂದಿರುತ್ತಾರೆ ಎಂದು ಈಶ್ವರಪ್ಪ ಹೇಳಿದರು.

ರಾಜ್ಯಪಾಲರಿಗೆ ಸಂತೋಷ್ ಪಾಟೀಲ ಪತ್ನಿ ದೂರು‌ ನೀಡಿದ ಕುರಿತು ಮಾತನಾಡಿ, ಅವರೇ ದೂರು ನೀಡಿದ್ರಾ? ಅಥವಾ ಯಾರಾದ್ರೂ ಕೊಡಿಸಿದ್ರಾ? ಅನ್ನೂದು ತಿಳಿಯಬೇಕಿದೆ. ಇನ್ನೂ ನಮ್ಮ ನಾಯಕರಾದ ಯಡಿಯೂರಪ್ಪ ಸಹ ನನಗೆ ಫೋನ್ ಮಾಡಿ ಶುಭಾಶಯ ಕೋರಿದ್ದಾರೆ. ನಾನು ಮತ್ತೆ ಮಂತ್ರಿ ಆಗುವುದು ಬಿಡುವುದು ನಮ್ಮ ಪಕ್ಷ, ಸರ್ಕಾರ ಹಾಗೂ ಮುಖಂಡರ ತೀರ್ಮಾನ‌‌ ಎಂದರು.

ಇದನ್ನು ಓದಿ:ಸಚಿವ ಸ್ಥಾನಕ್ಕಾಗಿ 100 ಕೋಟಿ ಬೇಡಿಕೆ.. ಮುಂಬೈ ಪೊಲೀಸರಿಂದ ನಾಲ್ವರು ವಂಚಕರ ಬಂಧನ

Last Updated : Jul 20, 2022, 10:56 PM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.