ETV Bharat / state

ಸಿದ್ದರಾಮಯ್ಯ 8 ಸಾವಿರ ಕೋಟಿ ರೂ. ಭ್ರಷ್ಟಾಚಾರ ಮಾಡಿರುವ ಬಗ್ಗೆ ವರದಿ ಇದೆ: ಕೆ ಎಸ್ ಈಶ್ವರಪ್ಪ

ಸಿದ್ದರಾಮಯ್ಯನವರು ಬೆಂಗಳೂರಿನ ಅರ್ಕಾವತಿ ಬಡಾವಣೆಯಲ್ಲಿ ಡಿನೋಟಿಫಿಕೇಷನ್ ನಲ್ಲಿ‌ 8 ಸಾವಿರ ಕೋಟಿ ರೂ ಭ್ರಷ್ಟಾಚಾರ ನಡೆಸಿದ್ದಾರೆ. ಡಿ ಕೆ ಶಿವಕುಮಾರ್ ಮಗಳ ಹೆಸರಿನಲ್ಲಿನ 150 ಕೋಟಿ ರೂಪಾಯಿ ಎಲ್ಲಿಂದು ಬಂತು ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಪ್ರಶ್ನಿಸಿದ್ದಾರೆ.

KS Eshwarappa spoke at the press conference
ಕೆ ಎಸ್ ಈಶ್ವರಪ್ಪ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
author img

By

Published : Mar 8, 2023, 3:52 PM IST

Updated : Mar 8, 2023, 5:18 PM IST

ಕೆ ಎಸ್ ಈಶ್ವರಪ್ಪ

ಶಿವಮೊಗ್ಗ: ಕಾಂಗ್ರೆಸ್​​ನವರು ಕರ್ನಾಟಕ ಬಂದ್​ಗೆ ಕರೆ ನೀಡಿದ್ದರು. ಬಳಿಕ ವಾಪಸ್​ ಪಡೆದಿದ್ದಾರೆ. ಹೀಗೆ ಭ್ರ​ಷ್ಟಾ​​​​​​​​​​ಚಾರಿಗಳೇ ಬಂದ್​​​ಗೆ ಕರೆ ನೀಡಿರುವುದು ಎಷ್ಟು ಸರಿ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಪ್ರಶ್ನೆ ಮಾಡಿದ್ದಾರೆ.

ಶಿವಮೊಗ್ಗ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಬಿಜೆಪಿಯ ಭ್ರಷ್ಟಾಚಾರದ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಾ. 9ರಂದು ರಾಜ್ಯ ಬಂದ್​​ಗೆ ಕರೆ ನೀಡಿದ್ದರು. ಬಂದ್​ಗೆ ಕರೆ ನೀಡಿದವರು ಭ್ರಷ್ಟಾಚಾರಿಗಳಾಗಿದ್ದು, ನಿಮಗೆ ಬಂದ್ ಕರೆ ನೀಡಲು ಯಾವುದೇ ನೈತಿಕತೆ ಇಲ್ಲ. ಸಿದ್ದರಾಮಯ್ಯ ಅವರು ಬೆಂಗಳೂರಿನ ಅರ್ಕಾವತಿ ಬಡಾವಣೆಯಲ್ಲಿ ಡಿನೋಟಿಫಿಕೇಷನ್ ನಲ್ಲಿ‌ 8 ಸಾವಿರ ಕೋಟಿ ರೂಪಾಯಿ ಭ್ರಷ್ಟಾಚಾರ ನಡೆಸಿದ್ದಾರೆ. ಇದನ್ನು ನಾವು ಹೇಳುತ್ತಿಲ್ಲ. ನಿವೃತ್ತ ನ್ಯಾಯಮೂರ್ತಿ ಕೆಂಪಣ್ಣ ಅವರು ನೀಡಿದ ವರದಿಯಲ್ಲಿದೆ ಎಂದು ಆರೋಪಿಸಿದರು.

ಕಾಂಗ್ರೆಸ್​ನವರು ದೊಡ್ಡ ಭ್ರಷ್ಟಾಚಾರ ನಡೆಸಿದ್ದಾರೆ. ಸುಮ್ಮನೆ ಕೇಳುತ್ತೇನೆ. ಡಿ.ಕೆ. ಶಿವಕುಮಾರ್ ಮಗಳ ಹೆಸರಿನಲ್ಲಿನ 150 ಕೋಟಿ ರೂ. ಹೇಗೆ ಬಂತು ಎಂದು ಪ್ರಶ್ನಿಸಿದರು. ಭ್ರಷ್ಟಾಚಾರ ಎಂದು ಕಾಂಗ್ರೆಸ್ ಸುಳ್ಳು ಆರೋಪ ಮಾಡಿದ್ದರಿಂದ ಮುನಿರತ್ನ ಅವರು ಕೋರ್ಟ್ ನಲ್ಲಿ ಕೇಸು ದಾಖಲಿಸಿದ್ದಾರೆ. ಕಾಂಗ್ರೆಸ್ ನವರು ಸುಳ್ಳು ಆರೋಪ ಮಾಡುತ್ತಿರುವುದರಿಂದ ಅವರು ಈ ಬಾರಿ ವಿರೋಧ ಪಕ್ಷದ ಸ್ಥಾನವನ್ನು ಕಳೆದುಕೊಳ್ಳುತ್ತಾರೆ ಎಂದು ಈಶ್ವರಪ್ಪ ಭವಿಷ್ಯ ನುಡಿದರು.

ಸಿದ್ದರಾಮಯ್ಯ ಪಕ್ಷಾಂತರಿ - ಈಶ್ವರಪ್ಪ: ಕಾಂಗ್ರೆಸ್ ಗೆ ಬಿಜೆಪಿಯ ಯಾವ ಶಾಸಕ, ಮಂತ್ರಿ ಸೇರಿದ್ದಾರೆ ಎಂದು ಮಾಧ್ಯಮದವರಿಗೆ ಮಾಜಿ ಸಚಿವ ಈಶ್ವರಪ್ಪ ಪ್ರಶ್ನೆ ಮಾಡಿದರು. ಬಿಜೆಪಿಯವರು ಕಾಂಗ್ರೆಸ್ ಸೇರುತ್ತಿರುವ ಕುರಿತು ಕಾಂಗ್ರೆಸ್ ಸುಳ್ಳು ಹೇಳುತ್ತಿದೆ. ಸಿದ್ದರಾಮಯ್ಯ ಪಕ್ಷಾಂತರ ಪ್ರವೀಣ ಎಂದು ಕುಟುಕಿದರು. ಮೊದಲು ಜೆಡಿಎಸ್ ನಲ್ಲಿದ್ದರು. ಈಗ ಕಾಂಗ್ರೆಸ್ ನಲ್ಲಿದ್ದಾರೆ.‌ ಕಾಂಗ್ರೆಸ್ ಪಕ್ಷದಲ್ಲಿಯೇ ಕೆಲಸ ಮಾಡಿ, ಅಧಿಕಾರದಿಂದ ದೂರವಿರಿ ಎಂದು ಕಾಂಗ್ರೆಸ್ ನ ಹೈಕಮಾಂಡ್ ತಿಳಿಸಿದರೆ, ಸಿದ್ದರಾಮಯ್ಯ ಒಂದು ಕ್ಷಣನೂ ಕಾಂಗ್ರೆಸ್ ನಲ್ಲಿ ಇರೋದಿಲ್ಲ. ಸಿದ್ದರಾಮಯ್ಯನವರಿಗೆ ಸಿಎಂ ಅಗುವುದೇ ಧ್ಯೇಯವಾಗಿದೆ ಎಂದರು.

ಮಾಡಾಳ್ ಪ್ರಕರಣ ಇನ್ನೂ ಪ್ರಾಥಮಿಕ ಹಂತದಲ್ಲಿದೆ: ಚನ್ನಗಿರಿ ಕ್ಷೇತ್ರದ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ಪ್ರಕರಣ ಇನ್ನೂ ಪ್ರಾಥ‌ಮಿಕ ಹಂತದಲ್ಲಿದೆ. ಹಣದ ತಮ್ಮದೇ ಅಂತಾ ಅವರು ಹೇಳಿದ್ದಾರೆ. ನೋಡೋಣ ಮುಂದೆ ಏನಾಗುತ್ತದೆ. ಆದರೆ ಯಾರು ಉಪ್ಪು ತಿಂದಿದ್ದಾರೂ ಅವರು ನೀರು ಕುಡಿಯುತ್ತಾರೆ ಎಂದು ಈಶ್ವರಪ್ಪ ತಿಳಿಸಿದರು.

ನೇತೃತ್ವ, ಸಂಘಟನೆ, ಅಭಿವೃದ್ದಿ ಭಾರತೀಯ ಸಂಸ್ಕೃತಿ: ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ನೇತೃತ್ವದಲ್ಲಿ ಲೋಕಸಭಾ ಚುನಾವಣೆ ನಡೆಯುತ್ತದೆ. ರಾಜ್ಯದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ನಡೆಯುತ್ತದೆ. ಸಂಘಟನೆ, ಅಭಿವೃದ್ಧಿ ಹಾಗೂ ಭಾರತೀಯ ಸಂಸ್ಕೃತಿ ರಕ್ಷಣೆಯ ಆಧಾರದ ಮೇಲೆ ಚುನಾವಣೆ ನಡೆಯುತ್ತದೆ ಎಂದು ಅವರು ಹೇಳಿದರು.

ಯಡಿಯೂರಪ್ಪ‌ ಇಂತಹವರಿಗೆ ಟಿಕೆಟ್ ಇಲ್ಲ ಅಂತ ಹೇಳಿಲ್ಲ: ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪನವರು ಇಂತಹವರಿಗೆ ಟಿಕೆಟ್ ಇಲ್ಲ ಎಂದು ಹೇಳಿಲ್ಲ. ಅವರು ಕೇಂದ್ರದ ತಂಡದಲ್ಲಿದ್ದಾರೆ. ಇದರಿಂದ ಅವರಿಗೆ ಎಲ್ಲಾ ತಿಳಿದಿರಬಹುದು. ನಮ್ಮಲ್ಲಿ ಈ ಬಾರಿ ಸರ್ವೆ, ಕಾರ್ಯಕರ್ತರ, ಮುಖಂಡರ ಹಾಗೂ ಜನಾಭಿಪ್ರಾಯ ಕೇಳಿ ಅಭ್ಯರ್ಥಿ ಆಯ್ಕೆ ನಡೆಯುತ್ತದೆ. ತಮ್ಮ ಸ್ಪರ್ಧೆಯ ಕುರಿತು ಪಕ್ಷದ ತೀರ್ಮಾನ ಏನೂ ಹೇಳುತ್ತದೆಯೋ ಅದಕ್ಕೆ ನಾನು ಬದ್ಧ ಎಂದು ಈಶ್ವರಪ್ಪ ತಿಳಿಸಿದರು.

ನಮ್ಮಲ್ಲಿ ನಾಯಕರ ದಂಡೇ ಇದೆ.. ಕಾಂಗ್ರೆಸ್ ನಲ್ಲಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಬಿಟ್ಟರೆ ಬೇರೆ ಯಾರೂ ಇಲ್ಲ. ಅವರನ್ನು ಕರೆದುಕೊಂಡು ಬಂದ್ರೆ ವೋಟ್ ಬರಲ್ಲ ಅನ್ನೋದು ಕಾಂಗ್ರೆಸ್​ ನಾಯಕರಿಗೆ ಗೊತ್ತು ಎಂದು ಟೀಕಿಸಿದರು.

ಇದನ್ನೂಓದಿ:ಬಿಜೆಪಿಯಿಂದ ಹೋಗುವವರನ್ನು ಗೌರವಯುತವಾಗಿ ಕಳುಹಿಸಿಕೊಡ್ತೇವೆ: ಯಡಿಯೂರಪ್ಪ

Last Updated : Mar 8, 2023, 5:18 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.