ETV Bharat / state

ಶಿವಮೊಗ್ಗ: ಕೇಂದ್ರ ಕಾರಾಗೃಹದಲ್ಲಿ ಅಂತರರಾಷ್ಟ್ರೀಯ ಸಾಕ್ಷಾರತಾ ದಿನಾಚರಣೆ - ಅಂತರರಾಷ್ಟ್ರೀಯ ಸಾಕ್ಷಾರತಾ ದಿನಾಚರಣೆ

ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿ 54ನೇ ಅಂತರರಾಷ್ಟ್ರೀಯ ಸಾಕ್ಷಾರತಾ ದಿನಾಚರಣೆಯನ್ನು ಆಚರಿಸಲಾಯಿತು. ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಗಳ ಕಚೇರಿ, ಜಿಲ್ಲಾ‌ ಸಾಕ್ಷಾರತಾ ಸಮಿತಿ ಹಾಗೂ ಕೇಂದ್ರ ಕಾರಾಗೃಹದ ಸಹಯೋಗದಲ್ಲಿ ನಡೆದ ಕಾರ್ಯಕ್ರಮವನ್ನು ಜಲ್ಲಾ ಪಂಚಾಯತ್ ಸಿಇಒ ಶ್ರೀಮತಿ ವೈಶಾಲಿ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು.

literacy-day
ಸಾಕ್ಷಾರತಾ ದಿನಾಚರಣೆ
author img

By

Published : Sep 15, 2020, 10:34 PM IST

ಶಿವಮೊಗ್ಗ: ನಗರದ ಕೇಂದ್ರ ಕಾರಾಗೃಹದಲ್ಲಿ 54ನೇ ಅಂತರರಾಷ್ಟ್ರೀಯ ಸಾಕ್ಷಾರತಾ ದಿನಾಚರಣೆಯನ್ನು ಆಚರಿಸಲಾಯಿತು. ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಗಳ ಕಚೇರಿ, ಜಿಲ್ಲಾ‌ ಸಾಕ್ಷಾರತಾ ಸಮಿತಿ ಹಾಗೂ ಕೇಂದ್ರ ಕಾರಾಗೃಹದ ಸಹಯೋಗದಲ್ಲಿ ನಡೆದ ಕಾರ್ಯಕ್ರಮವನ್ನು ಜಲ್ಲಾ ಪಂಚಾಯತ್ ಸಿಇಒ ಶ್ರೀಮತಿ ವೈಶಾಲಿ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಜಿಲ್ಲಾ ಕಾರಾಗೃಹದಲ್ಲಿ ಸಾಕ್ಷಾರತಾ ದಿನಾಚರಣೆ ನಡೆಸುತ್ತಿರುವುದು ಸಂತೋಷದ ವಿಚಾರ. ಇಂದು ಸಾಕ್ಷರತೆಗಾಗಿ‌ 112 ಕ್ಕೂ ಹೆಚ್ಚು ಕೈದಿಗಳು ನೊಂದಣಿ ಮಾಡಿಸಿಕೊಂಡಿದ್ದಾರೆ. ಇದನ್ನು ನೋಡಿದರೆ, ನಮ್ಮಲ್ಲಿ ಇನ್ನೂ ಅನಕ್ಷರಸ್ಥರು ಎಷ್ಟು ಜನ ಇದ್ದಾರೆ ಎಂಬುದು ತಿಳಿಯುತ್ತಿದೆ. ಸಾಕ್ಷರತೆಗೆ ಸೇರಿದವರಿಗೆ ಕಲಿಕೋಪಕರಣಗಳನ್ನು ವಿತರಿಸಲಾಗಿದೆ. ಕಳೆದ ಭಾರಿ‌ 160 ಜನ ಸಾಕ್ಷಾರತಾ ಆಂದೋಲನದಲ್ಲಿ ಸಾಕ್ಷರತರಾಗಿದ್ದಾರೆ ಎಂದು ತಿಳಿದು ಸಂತೋಷವಾಯಿತು ಎಂದರು.

ಕೇಂದ್ರ ಕಾರಾಗೃಹದಲ್ಲಿ ಅಂತರರಾಷ್ಟ್ರೀಯ ಸಾಕ್ಷಾರತಾ ದಿನಾಚರಣೆ

ಕಳೆದ ವರ್ಷ ಸಾಕ್ಷರತಾರಾದವರಿಗೆ ಕಲಿಕ ಪತ್ರವನ್ನು ವಿತರಿಸಲಾಯಿತು. ಸಾಕ್ಷರತೆಗೆ ಸೇರಿ‌ಕೊಂಡವರಿಗೆ ಜೈಲ್​ನಲ್ಲಿ ಕಲಿಕೆಗೆ ಬೇಕಾದ ಎಲ್ಲಾ ಸೌಲಭ್ಯವನ್ನು ಒದಗಿಸಲಾಗುತ್ತಿದೆ ಎಂದು ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.