ETV Bharat / state

ಸಮವಸ್ತ್ರ ವಿಚಾರದಲ್ಲಿ ಶಾಲಾ-ಕಾಲೇಜುಗಳ ಸಮಿತಿಯ ನಿರ್ಣಯವೇ ಅಂತಿಮ : ಆರಗ ಜ್ಞಾನೇಂದ್ರ

ಶಾಲಾ- ಕಾಲೇಜುಗಳಲ್ಲಿ ಶಿಸ್ತು, ರಾಷ್ಟ್ರೀಯತೆಯ ಭಾವನೆಯನ್ನು ಬೆಳೆಸುವ ಕೆಲಸವಾಗಬೇಕು. ಜಾತಿ-ಧರ್ಮವನ್ನು ಮೀರಿ ನಾನು ಭಾರತೀಯ ಮಗ, ಮಗಳು ಎಂಬ ಸಂಸ್ಕಾರವನ್ನು ಕೊಟ್ಟು ಶಾಲಾ-ಕಾಲೇಜುಗಳು ಸಮಾಜಕ್ಕೆ ಕಳುಹಿಸಬೇಕು ಇದು ನಮ್ಮ ಆದ್ಯತೆಯಾಗಬೇಕು‌..

ಗೃಹ ಸಚಿವ ಆರಗ ಜ್ಞಾನೇಂದ್ರ
ಗೃಹ ಸಚಿವ ಆರಗ ಜ್ಞಾನೇಂದ್ರ
author img

By

Published : Feb 5, 2022, 9:57 PM IST

ಶಿವಮೊಗ್ಗ: ಸಮವಸ್ತ್ರದ ಕುರಿತು ಆಯಾ ಶಾಲಾ- ಕಾಲೇಜುಗಳ ಸಮಿತಿಯವರು ತೆಗೆದುಕೊಂಡ ನಿರ್ಣಯವೇ ಅಂತಿಮ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಸ್ಪಷ್ಟಪಡಿಸಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ಹಿಜಾಬ್ ವಿಚಾರವನ್ನು ರಾಜ್ಯವ್ಯಾಪಿ ಹರಡಿಸುವ ದೊಡ್ಡ ಷಡ್ಯಂತ್ರ ನಡೆಯುತ್ತಿದೆ. ಶಾಂತಿ-ಸುವ್ಯವಸ್ಥೆಯನ್ನು ಮತೀಯ ವಿಚಾರದಲ್ಲಿ ಕದಡುವ ಯತ್ನ ನಡೆಸಲಾಗುತ್ತಿದೆ. ಈ ಕೆಲಸವನ್ನು ಯಾರು ಸಹ ಮಾಡಬಾರದು ಎಂದರು.

ಹಿಜಾಬ್‌-ಕೇಸರಿ ಶಾಲು ವಿವಾದದ ಕುರಿತಂತೆ ಗೃಹ ಸಚಿವ ಆರಗ ಜ್ಞಾನೇಂದ್ರ ಮಾತನಾಡಿರುವುದು..

ಶಾಲಾ-ಕಾಲೇಜುಗಳಲ್ಲಿ ಶಿಸ್ತು, ರಾಷ್ಟ್ರೀಯತೆಯ ಭಾವನೆಯನ್ನು ಬೆಳೆಸುವ ಕೆಲಸವಾಗಬೇಕು. ಜಾತಿ-ಧರ್ಮವನ್ನು ಮೀರಿ ನಾನು ಭಾರತೀಯ ಮಗ, ಮಗಳು ಎಂಬ ಸಂಸ್ಕಾರವನ್ನು ಕೊಟ್ಟು ಶಾಲಾ-ಕಾಲೇಜುಗಳು ಸಮಾಜಕ್ಕೆ ಕಳುಹಿಸಬೇಕು. ಇದು ನಮ್ಮ ಆದ್ಯತೆಯಾಗಬೇಕು‌.

ಅದನ್ನು ಬಿಟ್ಟು ನಾನು ಹ್ಯಾಗೋ ಇರ್ತಿವಿ ಅಂದ್ರೆ ಅದು ಆಗೋದಿಲ್ಲ. ಇದಕ್ಕಾಗಿ ಸರ್ಕಾರ ಆದೇಶವನ್ನು ಸಹ ಹೊರಡಿಸಿದೆ. ಕಾಲೇಜು ಸಮಿತಿಗಳು ಏನು ನಿರ್ಧಾರ ತೆಗೆದುಕೊಳ್ಳುತ್ತೆವೆಯೇ ಅದನ್ನು ಎಲ್ಲರೂ ಪಾಲಿಸಬೇಕು ಎಂದರು.

ನಮ್ಮದು‌ ವಿವಿಧ, ಭಾಷೆ, ರಾಜ್ಯವಿರುವ ದೇಶ. ದೇಶವನ್ನು ಕಟ್ಟಲು ತಯಾರು ಮಾಡುವ ಸ್ಥಳವೆಂದ್ರೆ ಅದು ಶಿಕ್ಷಣ ಸಂಸ್ಥೆಗಳು. ಎಲ್ಲಿಯೂ ಶಾಂತಿ ಕದಡಬಾರದು. ಈ ನೆಲದ ಕಾನೂನು ನನಗೆ ಅನ್ವಯಿಸುವುದಿಲ್ಲ. ನನ್ನ ಧಾರ್ಮಿಕ ರೀತಿಯಲ್ಲಿ ಬದುಕುತ್ತೇನೆ ಅಂದ್ರೆ, ಈ ದೇಶದಲ್ಲಿ ಅನೇಕ ಜಾತಿಗಳಿವೆ. ಅವರವರ ದೇಶಗಳಿವೆ.

ಕೆಲವು ಜಾತಿಯಲ್ಲಿ ನಿರ್ವಣಾ ಸಹ ಇದೆ. ಅವರ ಸ್ವಂತ ಧರ್ಮವಿದೆ. ಆದ್ದರಿಂದ ನಾನು ಅದನ್ನೇ ಮಾಡುತ್ತೇನೆ ಅಂದರೆ ಅದು ಸರಿ ಆಗುತ್ತದೆಯೇ ಎಂದು ಪ್ರಶ್ನೆ ಮಾಡಿದರು. ಆದ್ದರಿಂದ ಮತೀಯತೆಯನ್ನು ಬಿಂಬಿಸುವ ಕೆಲಸ ಯಾರು ಮಾಡಬಾರದು.

ಈ ನಿಟ್ಟಿನಲ್ಲಿ ಎಲ್ಲ ಹಿರಿಯರು, ರಾಜಕೀಯ ಪಕ್ಷಗಳು ಆದ್ಯತೆ ನೀಡಬೇಕು. ಈ ನಿಟ್ಟಿನಲ್ಲಿ ಅಪಸ್ವರ ಬರಬಾರದು ಎಂದು ವಿನಂತಿ ಮಾಡಿಕೊಳ್ಳುತ್ತೇನೆ ಎಂದರು.

ಹಿಜಾಬ್ ಕುರಿತು ಸುಪ್ರೀಂಕೋರ್ಟ್​ನಲ್ಲಿ ದಾವೆ ಹಾಕಿದರೆ ಹಾಕಲಿ : ಹಿಜಾಬ್ ಕುರಿತು ಅವರು ಎಲ್ಲಿ ಬೇಕಾದ್ರೂ ಕೇಸು ಹಾಕಲಿ, 1983ರ ಸಮವಸ್ತ್ರ ಕಾನೂನು ಎಲ್ಲರಿಗೂ ಅನ್ವಯವಾಗುತ್ತದೆ. ಸಂವಿಧಾನ ನಮ್ಮ ಸ್ವೇಚ್ಛಾಚಾರಕ್ಕೆ ಇರುವುದಲ್ಲ. ನಮಗೆ ನಮ್ಮ ದೇವಾಲಯ, ಚರ್ಚ್, ಮಸೀದಿಗಳಿವೆ, ಅಲ್ಲಿ ಆಚರಣೆ ಮಾಡಲು ನಮಗೆ ಸ್ವತಂತ್ರವಿದೆ.

ಆದ್ರೆ, ನಾನು ನನ್ನ ಧರ್ಮವನ್ನು ಪಾಲಿಸೋದು ಮಾತ್ರ, ಕಾಯ್ದೆ ಕಾನೂನು ಪಾಲಿಸೂಲ್ಲ ಅಂತಾ ಹೇಳುವುದಕ್ಕೆ ಬರೋದಿಲ್ಲ. ಹಿಜಾಬ್ ವಿವಾದದ ಹಿಂದೆ ಅಲ್ಪ ಸಂಖ್ಯಾಂತ ಹೆಣ್ಣು ಮಕ್ಕಳನ್ನು ಶಿಕ್ಷಣದಿಂದ ದೂರ ಇಡಲು ಕೆಲವು ಆ ಧರ್ಮದ ಮತೀಯ ಕಾರ್ಯಸ್ಥಾನ ಅಂತಾ ನನಗೆ ಅನ್ನಿಸುತ್ತದೆ ಎಂದರು.

ಇಷ್ಟು ವರ್ಷ ಇಲ್ಲದ ಇರೋದನ್ನು ಈಗ ಯಾಕೆ ಎತ್ತಿಕೊಳ್ಳುತ್ತಿದ್ದಾರೆ ಎಂದು ಪ್ರಶ್ನೆ ಮಾಡಿದರು. ಈಗ ಕಡ್ಡಾಯವಾಗಿ ಹಿಜಾಬ್ ಹಾಕಲೇ ಬೇಕು ಅಂತಾ ಯಾಕೆ ಮಾತನಾಡುತ್ತಿದ್ದಾರೆ. ಹಿಜಾಬ್ ಹಾಕಲು ಬಿಟ್ಟರೆ ಒಳಗೆ ಬರ್ತಿನಿ, ಇಲ್ಲವಾದ್ರೆ ಹೊರಗೆ ಇರ್ತಿನಿ ಅಂತಾ ಹೇಳ್ತಾರೆ ಅಂದ್ರೆ, ಇದರ ಹಿಂದೆ ಕೆಲ ಮೂಲಭೂತವಾದಿಗಳು ಇದ್ದಾರೆ ಎಂದರು. ಶಿಕ್ಷಣದಲ್ಲಿ ಮತೀಯತೆಯನ್ನು ತರಲು ಬಿಡೋದಿಲ್ಲ ಎಂದು ಸ್ಪಷ್ಟಪಡಿಸಿದರು.

ಸಿದ್ದರಾಮಯ್ಯನವರು ಹಿಜಾಬ್ ಅನ್ನು ಸಮರ್ಥನೆ ಮಾಡಿಕೊಳ್ಳದೆ ಏನು ಮಾಡುತ್ತಿದ್ದಾರೆ ಹೇಳಿ ಎಂದು ಪ್ರಶ್ನೆ ಮಾಡಿದರು.‌ ಇವರು ಯಾವಾಗ ಜಾತ್ಯತೀತರಾಗುತ್ತಾರೆ ಎಂದು ಗೂತ್ತಾಗುವುದಿಲ್ಲ. ಅವರಿಗೆ ಯಾವುದಕ್ಕೆ ಪ್ರೋತ್ಸಾಹ ನೀಡಬೇಕು ಎಂದು ಗೂತ್ತಾಗುವುದಿಲ್ಲ. ಸಿದ್ದರಾಮಯ್ಯನವರು ಹಿರಿಯರು ಅವರು ಏನ್ ಮಾತನಾಡಿದ್ರೆ ಏನ್ ಆಗುತ್ತದೆ ಎಂದು ತಿಳಿದು ಮಾತನಾಡಬೇಕು ಎಂದರು.

‌ನಮ್ಮ ಸಂವಿಧಾನದಲ್ಲಿ ಧರ್ಮ ಆಚರಣೆ, ಪ್ರಸಾರಕ್ಕೆ ಅವಕಾಶವಿದೆ. ದೇಶಕ್ಕೆ ತೊಂದರೆ ಆದ್ರೆ ಅದನ್ನು ತಡೆಯೂದಕ್ಕೂ ಅವಕಾಶವಿದೆ. ಹಿರಿಯರಾದ ಸಿದ್ದರಾಮಯ್ಯನವರು ಹೀಗೆ ಹೇಳಿದರೆ ಏನು ಹೇಳುವುದಕ್ಕೂ ಆಗುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.‌ ಎಲ್ಲಾವನ್ನು ವೋಟ್ ಬ್ಯಾಂಕ್‌ನಿಂದಲೇ ನೋಡಬಾರದು. ಶಾಲೆಗೆ ಅರಿಷಿಣ-ಕುಂಕುಮ ಸಮವಸ್ತ್ರ ಸಂಹಿತೆಗೆ ಅಡ್ಡಿ ಆಗೋದಿಲ್ಲ. ‌ನಾವು ಮಕ್ಕಳಲ್ಲಿ ಅರಿವು ಮೂಡಿಸಬೇಕಿದೆ. ಮಕ್ಕಳಿಗೆ ಅರ್ಥವಾಗುತ್ತದೆ. ಆದ್ರೆ, ಅವರ ಹಿಂದೆ ಇರುವ ಮೂಲಭೂತವಾದಿಗಳು‌ ಹಿಜಾಬ್ ಬಿಡಬೇಡ ಎಂದು ಹೇಳುತ್ತಿದ್ದಾರೆ ಎಂದರು.

ಶಿವಮೊಗ್ಗ ಬಹಳ ಹೆಸರಾಂತ ರೌಡಿಗಳ ಜನ್ಮಸ್ಥಳವಾಗಿದೆ. ಇಂತಹವರನ್ನು ಮಟ್ಟ ಹಾಕಲು ಪೊಲೀಸ್ ಇಲಾಖೆಯು ಪ್ರಯತ್ನ ಮಾಡುತ್ತಿದೆ. ಸಮಾಜದಲ್ಲಿ ವಿದ್ವಂಸಕ ಕೃತ್ಯಗಳಲ್ಲಿ ಭಾಗಿಯಾದವರನ್ನು ಮಟ್ಟ ಹಾಕಲು ಪ್ರಯತ್ನ ನಡೆಸುತ್ತಿದ್ದಾರೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.