ETV Bharat / state

ಎಸ್​.ಬಂಗಾರಪ್ಪನವರ ಜನ್ಮದಿನವನ್ನು ಸರ್ಕಾರಿ ಶಾಲೆಯ ಮಕ್ಕಳೊಂದಿಗೆ ಆಚರಿಸಿದ ಮಧು ಬಂಗಾರಪ್ಪ

ಶಿಕಾರಿಪುರ ತಾಲೂಕಿನ ಅಂಬಾರಗೊಪ್ಪ ಗ್ರಾಮದ ಸರ್ಕಾರಿ ಹಿರಿಯ ಪ್ರಾಥ‌ಮಿಕ‌ ಶಾಲಾ ಮಕ್ಕಳೊಂದಿಗೆ ಎಸ್.ಬಂಗಾರಪ್ಪನವರ 90ನೇ ಜನ್ಮದಿನವನ್ನು ಪುತ್ರ, ಶಿಕ್ಷಣ ಸಚಿವ ಮಧು ಬಂಗಾರಪ್ಪ ಆಚರಿಸಿದರು.

S Bangarappa 90th birthday celebration
ಮಾಜಿ ಸಿಎಂ ಎಸ್ ಬಂಗಾರಪ್ಪನವರ 90 ನೇ ಜನ್ಮದಿನ ಆಚರಣೆ
author img

By ETV Bharat Karnataka Team

Published : Oct 26, 2023, 8:17 PM IST

Updated : Oct 26, 2023, 9:13 PM IST

ಎಸ್​.ಬಂಗಾರಪ್ಪನವರ ಜನ್ಮದಿನ ಆಚರಣೆ

ಶಿವಮೊಗ್ಗ: ರಾಜ್ಯ ಕಂಡ ವರ್ಣರಂಜಿತ ರಾಜಕಾರಣಿ, ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪನವರ 90ನೇ ಜನ್ಮದಿನವನ್ನು ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಕ್ಕಳೊಂದಿಗೆ ಸರಳವಾಗಿ ಆಚರಿಸಿದರು. ತಮ್ಮ ತಂದೆಯ ಜನ್ಮದಿನವನ್ನು ತಾವು ಪ್ರತಿನಿಧಿಸುವ ಕ್ಷೇತ್ರದ ಶಾಲಾ ಮಕ್ಕಳೊಂದಿಗೆ ಆಚರಿಸಬೇಕೆಂದು ಮಧು ಬಂಗಾರಪ್ಪ ನಿರ್ಧರಿಸಿದ್ದರು. ಅದರಂತೆ, ಶಿಕಾರಿಪುರ ತಾಲೂಕಿನ ಅಂಬಾರಗೊಪ್ಪ ಗ್ರಾಮದ ಸರ್ಕಾರಿ ಹಿರಿಯ ಪ್ರಾಥ‌ಮಿಕ‌ ಶಾಲೆಯಲ್ಲಿ ಮಕ್ಕಳೊಂದಿಗೆ ಜನ್ಮದಿನವನ್ನು ಸರಳವಾಗಿ ಆಚರಿಸಿದ್ದಾರೆ. ಮಕ್ಕಳಿಂದ ಕೇಕ್ ಕಟ್​ ಮಾಡಿಸಿ ವಿತರಿಸಿದ ಸಚಿವರು ಸಂತಸಪಟ್ಟರು.

ಶಾಲಾ ಮಕ್ಕಳೊಂದಿಗೆ ಭೋಜನ ಸವಿದ ಸಚಿವ: ತಂದೆ ಬಂಗಾರಪ್ಪನವರ ಜನ್ಮದಿನವನ್ನು ಆಚರಿಸಿದ ನಂತರ ಸಚಿವ ಮಧು ಬಂಗಾರಪ್ಪ, ಶಾಲಾ ಮಕ್ಕಳೊಂದಿಗೆ ಶಾಲಾ ಕಟ್ಟೆಯ ಮೇಲೆ ಕುಳಿತು ಮಧ್ಯಾಹ್ನದ ಭೋಜನ ಸವಿದರು. ಮಕ್ಕಳಿಗೆ ಪ್ರತಿದಿನ ಊಟ ಹೇಗಿರುತ್ತದೆ, ಮೊಟ್ಟೆ ಯಾವಾಗ ನೀಡುತ್ತಾರೆ, ಊಟ ಪ್ರತಿನಿತ್ಯ ಹೀಗೇ ಇರುತ್ತದೆಯೇ, ಮೊಟ್ಟೆ ಇನ್ನೆರಡು ದಿನ ಹೆಚ್ಚಿಸಬೇಕೇ ಎಂದು ಮಕ್ಕಳನ್ನು ಪ್ರಶ್ನಿಸಿದರು. ಸಚಿವರ ಪಕ್ಕದಲ್ಲಿ ಕುಳಿತಿದ್ದ ಮಧುರ ಎಂಬ ಬಾಲಕಿ ಸಚಿವರ ಪ್ರಶ್ನೆಗಳಿಗೆ ಉತ್ತರಿಸುತ್ತಾ, ಭೋಜನ ಮುಗಿಸಿದರು.

ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಮಧು ಬಂಗಾರಪ್ಪ, ಇಂದು ನಮ್ಮ ತಂದೆ ಬಂಗಾರಪ್ಪನವರ ಜನ್ಮದಿನವನ್ನು ಅವರ ಅಭಿಮಾನಿಗಳು ಸೊರಬದ ಬಂಗಾರಧಾಮದಲ್ಲಿ ಆಚರಿಸಿದರು. ನಾನು ಅದರಲ್ಲಿ ಭಾಗಿಯಾದೆ. ರಕ್ತದಾನ ಶಿಬಿರದಲ್ಲಿ ಭಾಗವಹಿಸಿದ್ದೆ ಎಂದು ತಿಳಿಸಿದರು.

ಶಿಕ್ಷಣವೆಂದ ತಕ್ಷಣ ನಮ್ಮ ತಂದೆ ನೆನಪಾಗುತ್ತಾರೆ. ಅವರು ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಒತ್ತು ನೀಡಿದ್ದರು. 32 ವರ್ಷಗಳ ಹಿಂದೆ ಶಾಲೆಗೆ ಬರುವ ಮಕ್ಕಳಿಗೆ 1 ರೂ ನೀಡುವ ಯೋಜನೆ ಜಾರಿ ತಂದಿದ್ದರು. ಮಕ್ಕಳಿಗೆ ಪೋಷಕಾಂಶ ಒದಗಿಸುವ ಸೇರಿದಂತೆ ಹಲವು ಯೋಜನೆಗಳನ್ನು ನಡೆಸಲಾಗುತ್ತಿದೆ. ಮುಂದಿನ 2-3 ವರ್ಷಗಳಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆ ಮಾಡುವ ಯೋಜನೆ ಇದೆ ಎಂದರು.

ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಪರಿಣಾಮಕಾರಿ ಅನುಷ್ಠಾನ: ರಾಜ್ಯದಲ್ಲಿ ವನ್ಯಜೀವಿ ಸಂರಕ್ಷಣಾ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಅರಣ್ಯ ಇಲಾಖೆ ಮುಂದಾಗಿದೆ. ವನ್ಯಜೀವಿ ವಸ್ತುಗಳ ಸಂಗ್ರಹ, ಮಾರಾಟ ಪ್ರಕರಣಗಳ ಕುರಿತು ತಂಡ ರಚಿಸುವುದರ ಬಗ್ಗೆ ಅರಣ್ಯ, ಜೀವಶಾಸ್ತ್ರ ಪರಿಸರ ಸಚಿವ ಈಶ್ವರ್ ಖಂಡ್ರೆಯವರಿಗೆ ಅರಣ್ಯ ಇಲಾಖೆಯ ಪ್ರಧಾನ ಸಂರಕ್ಷಣಾಧಿಕಾರಿ ಬ್ರಿಜೇಶ್ ಕುಮಾರ್ ದೀಕ್ಷಿತ್ ಪತ್ರ ಬರೆದಿದ್ದಾರೆ.

ಇಲಾಖೆಯ ವನ್ಯಜೀವಿ ವಿಭಾಗದ ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಅಧ್ಯಕ್ಷತೆಯಲ್ಲಿ ತಂಡ ರಚಿಸಲು ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಅಪರ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಹಾಗೂ ಬೆಂಗಳೂರು, ಹಾಸನ, ಚಿಕ್ಕಮಗಳೂರು ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು, ಬೆಂಗಳೂರು ನಗರ, ತುಮಕೂರು, ಕೊಪ್ಪ, ಶಿವಮೊಗ್ಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಈ ತಂಡದಲ್ಲಿ ಇರಲಿದ್ದಾರೆ.

ಇದನ್ನೂ ಓದಿ: ಕನ್ನಡ ರಾಜ್ಯೋತ್ಸವ: ಈ ಬಾರಿ 68 ಸಾಧಕರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ.. 2 ದಿನದಲ್ಲಿ ಪಟ್ಟಿ ಪ್ರಕಟ

Last Updated : Oct 26, 2023, 9:13 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.