ETV Bharat / state

ರೈತರ ಸಾಲ ವಸೂಲಿ ಮಾಡುವ ನೈತಿಕ ಹಕ್ಕು ನಿಮಗಿಲ್ಲ: ಹೆಚ್.ಆರ್.ಬಸವರಾಜಪ್ಪ

ಕೇಂದ್ರ, ರಾಜ್ಯ ಸರ್ಕಾರಗಳು ಚುನಾವಣೆ ಮುನ್ನ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆ ಈಡೇರಿಸಿಲ್ಲ. ಹೀಗಾಗಿ ಸರ್ಕಾರಕ್ಕೆ ರೈತರ ಸಾಲ ಮರುಪಾವತಿ ಮಾಡುವಂತೆ ಬ್ಯಾಂಕ್​ಗಳ ಮೂಲಕ ಒತ್ತಡ ಹೇರುವ ನೈತಿಕ ಹಕ್ಕಿಲ್ಲ ಎಂದು ರೈತ ಸಂಘದ ಗೌರವಾಧ್ಯಕ್ಷ ಹೆಚ್.ಆರ್.ಬಸವರಾಜಪ್ಪ ಹೇಳಿದ್ದಾರೆ.

farmers protest against state and central govt in shivamogg
ರೈತರ ಸಾಲ ವಸೂಲಿಗೆ ನಿಮಗೆ ಹಕ್ಕಿಲ್ಲ
author img

By

Published : Jan 23, 2020, 2:28 PM IST

ಶಿವಮೊಗ್ಗ: ಕೇಂದ್ರ, ರಾಜ್ಯ ಸರ್ಕಾರಗಳು ಚುನಾವಣೆ ಮುನ್ನ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆ ಈಡೇರಿಸಿಲ್ಲ. ಹೀಗಾಗಿ ಸರ್ಕಾರಕ್ಕೆ ರೈತರ ಸಾಲ ಮರುಪಾವತಿ ಮಾಡುವಂತೆ ಬ್ಯಾಂಕ್​ಗಳ ಮೂಲಕ ಒತ್ತಡ ಹೇರುವ ನೈತಿಕ ಹಕ್ಕಿಲ್ಲ ಎಂದು ರೈತ ಸಂಘದ ಗೌರವಾಧ್ಯಕ್ಷ ಹೆಚ್.ಆರ್.ಬಸವರಾಜಪ್ಪ ಹೇಳಿದ್ದಾರೆ.

ರೈತರ ಸಾಲ ವಸೂಲಿ ಮಾಡುವ ನೈತಿಕ ಹಕ್ಕು ನಿಮಗಿಲ್ಲ: ಬಸವರಾಜಪ್ಪ

ಇಲ್ಲಿನ ಸಹಕಾರಿ ಹಾಗೂ ಗ್ರಾಮೀಣ ಅಭಿವೃದ್ಧಿ ಬ್ಯಾಂಕ್​ ಅಧಿಕಾರಿಗಳು ರೈತರ ಟ್ರ್ಯಾಕ್ಟರ್​ಗಳ ಜಪ್ತಿಗೆ ಮುಂದಾಗಿದ್ದಾರೆ ಎಂದು ಆರೋಪಿಸಿ ರೈತ ಸಂಘ ಹಾಗೂ ಹಸಿರು ಸೇನೆ ಜಂಟಿಯಾಗಿ ಪಿಎಲ್​ಡಿ ಬ್ಯಾಂಕ್​ ಎದುರು ಪ್ರತಿಭಟನೆ ನಡೆಸಿದವು.

ಕೇಂದ್ರ, ರಾಜ್ಯ ಸರ್ಕಾರಗಳು ಬ್ಯಾಂಕ್​ಗಳ ಮೂಲಕ ರೈತರ ಬದುಕಿನ ಜೊತೆ ಆಟವಾಡುತ್ತಿವೆ. ಸ್ವಾಮಿನಾಥನ್​ ವರದಿ ಜಾರಿ, ಕೃಷಿ ಆಯೋಗ ರಚನೆ, ಬೆಂಬಲ ಬೆಲೆ ಸೇರಿದಂತೆ ನಮ್ಮ ಬೇಡಿಕೆಗಳನ್ನು ಈಡೇರಿಸಿ. ಆಮೇಲೆ ಸಾಲ ಕೇಳಿ, ವಾಪಸ್​ ಕೊಡುತ್ತೇವೆ ಎಂದು ಹೇಳಿದರು.

Intro:ರಾಜ್ಯ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ದಿ ಬ್ಯಾಂಕ್ ನಿಂದ ರಾಜ್ಯಾದ್ಯಾಂತ ರೈತರ ಟ್ರಾಕ್ಟರ್ ಮತ್ತು ಪವರ್ ಟಿಲ್ಲರ್ ಗಳನ್ನು ಜಪ್ತಿ ಮಾಡುತ್ತಿರುವುದನ್ನು ಖಂಡಿಸಿ ಶಿವಮೊಗ್ಗ ಜಿಲ್ಲಾ ರೈತ ಸಂಘ ಹಾಗೂ ಹಸಿರು ಸೇನೆ ಪಿಎಲ್ ಡಿ ಬ್ಯಾಂಕ್ ಮುಂದೆ ಪ್ರತಿಭಟನೆ ನಡೆಸಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಬ್ಯಾಂಕ್ ನವರು ರೈತರ ಸಾಲ ವಸೂಲಾತಿಗಾಗಿ ರೈತರ ಟ್ರಾಕ್ಟರ್ ಸೇರಿದಂತೆ ಇತರೆ ಕೃಷಿ ಉಪಕರಣಗಳನ್ನು ಜಪ್ತಿ ಮಾಡಿ ಕೊಂಡು ಬರುತ್ತಿದ್ದಾರೆ. ಇದರಿಂದ ರೈತರು ಕೃಷಿ ಯಂತ್ರಗಳಿಲ್ಲದೆ ಮತ್ತೆ ಸಾಲ ಮಾಡಿ ಕೊಳ್ಳುವ ಹಂತಕ್ಕೆ ಬಂದಿದ್ದಾರೆ.

Body:ರಾಜ್ಯದಲ್ಲಿ ಕಳೆದ ಐದು ವರ್ಷ ಬರ, ಕಳೆದ ವರ್ಷ ನೆರೆಯಿಂದ ರೈತರು ನಲುಗಿ ಹೋಗಿದ್ದಾರೆ. ಇಂತಹ ಸಮಯದಲ್ಲಿ ರಾಜ್ಯ ಸರ್ಕಾರ ಬ್ಯಾಂಕ್ ಗಳ ಮೂಲಕ ಸಾಲ ವಸೂಲಾತಿಗಾಗಿ ಜಪ್ತಿ ನಡೆಸುತ್ತಿರುವುದು ರೈತರ ಕುತ್ತಿಗೆ ಕುಯಿಯುವಂತೆ ಆಗಿದೆ. ನೆರೆ, ಬರ ದಿಂದ ತತ್ತರಿಸಿದ ರೈತರಿಗೆ ಇನ್ನೂ ಪರಿಹಾರ ನೀಡಲು ಆಗದ ಸರ್ಕಾರ ಈಗ ಸಾಲ ವಸೂಲಿಗೆ ಇಳಿದಿರುವುದು ಎಂದು ಸರಿ ಎಂದು ಆಕ್ರೋಶ ವ್ಯಕ್ತಪಡಿಸಲಾಯಿತು. ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದ್ರೆ, ಕೃಷಿ ಆಯೋಗ ರಚನೆ ಮಾಡಿ ಬೆಳೆಗಳಿಗೆ ಬೆಂಬಲ ಬೆಲೆ ನೀಡುವುದಾಗಿ ಹೇಳಿತ್ತು. ಆದ್ರೆ, ಅದನ್ನು ಇನ್ನೂ ಜಾರಿಗೆ ತಂದಿಲ್ಲ.

Conclusion:ಕಾರ್ಪೋರೇಟ್ ಸಂಸ್ಥೆಗಳ ಸಾಲ ಮನ್ನಾ ಮಾಡುವ ಕೇಂದ್ರ ಈಗ ರೈತರ ಸಾಲ ಮನ್ನಾದ ಬಗ್ಗೆ ಚಿಂತನೆಯನ್ನು ನಡೆಸುತ್ತಿಲ್ಲ. ರಾಜ್ಯಾದ್ಯಾಂತ ಸಾಲ ವಸೂಲಿಗೆ ಬ್ಯಾಂಕ್ ಅಧಿಕಾರಿಗಳು ಬಂದ್ರೆ ಅವರ ವಿರುದ್ದ ರೈತ ಸಂಘ ಕಠಿಣ ಕ್ರಮ ತೆಗೆದು ಕೊಳ್ಳಬೇಕಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಕೆಯನ್ನು ನೀಡಿದರು. ಅಲ್ಲದೆ, ರೈತ ಸಂಘದ ಪ್ರತಿಭಟನೆಗೆ ಮಣಿದು ರಾಜ್ಯ ಸರ್ಕಾರ ಸಾಲ ವಸೂಲಿಯ ಆದೇಶ ಹಿಂಪಡದು ಸುತ್ತೂಲೆಯನ್ನು ಹೊರಡಿಸಿರುವುದು ಸ್ವಾಗತರ್ಹ. ನಮಗೆ ಸರಿಯಾದ ಬೆಂಬಲ ಬೆಲೆ ಸಿಕ್ಕರೆ ರೈತರು ಯಾರ ಸಾಲವನ್ನು ಇಟ್ಟು ಕೊಳ್ಳುವುದಿಲ್ಲ ಎಂದು ರೈತ ಸಂಘದ ರಾಜ್ಯ ಗೌರವಾಧ್ಯಕ್ಷ ಹೆಚ್.ಆರ್.ಬಸವರಾಜಪ್ಪ ತಿಳಿಸಿದ್ದಾರೆ.

ಬೈಟ್: ಹೆಚ್.ಆರ್.ಬಸವರಾಜಪ್ಪ. ಗೌರವಾಧ್ಯಕ್ಷರು. ರೈತ ಸಂಘ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.