ಶಿವಮೊಗ್ಗ: ಆಗಸ್ಟ್ 15 ರಂದು ನಡೆದ ಘಟನೆಯಿಂದ ಪ್ರಾರಂಭವಾದ 144 ಸೆಕ್ಷನ್ ಮತ್ತೆ ಮೂರು ದಿನ ವಿಸ್ತರಣೆ ಮಾಡಲಾಗಿದೆ. ನಾಳೆಗೆ ಅಂದ್ರೆ ಆಗಸ್ಟ್ 23 ರ ಬೆಳಗ್ಗೆ 6 ಗಂಟೆ ತನಕ ಇದ್ದ ಸೆಕ್ಷನ್ ಅನ್ನು ಮತ್ತೆ ಮೂರು ದಿನ ಆಗಸ್ಟ್ 26ರ ಬೆಳಗ್ಗೆ 6 ಗಂಟೆ ತನಕ ಮುಂದುವರೆಸಲಾಗಿದೆ.
ಅಪರ ಜಿಲ್ಲಾಧಿಕಾರಿ ಡಾ.ನಾಗೇಂದ್ರ ಎಫ್ ಹೊನ್ನಳಿ ಅವರು ಸೋಮವಾರ ಸೆಕ್ಷನ್ ವಿಸ್ತರಣೆ ಮಾಡಿದ ಆದೇಶ ಮಾಡಿದ್ದಾರೆ. ಶಿವಮೊಗ್ಗದ ಕೋಟೆ, ದೊಡ್ಡಪೇಟೆ ಹಾಗೂ ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಾತ್ರ ಸೆಕ್ಷನ್ ಮುಂದುವರೆಸಲಾಗಿದೆ.
ಉಳಿದಂತೆ ಕಳೆದ ಮೂರು ದಿನಗಳ ಹಿಂದೆ ಜಿಲ್ಲಾಧಿಕಾರಿಗಳು ಶಿವಮೊಗ್ಗ ತಾಲೂಕಿಗೆ ಸೆಕ್ಷನ್ ಜಾರಿ ಮಾಡಿದ್ದರು. ಈಗ ಕೇವಲ ಮೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದೆ. ಸೆಕ್ಷನ್ ಜಾರಿಯಿಂದಾಗಿ ಪೊಲೀಸರು ಅಂಗಡಿ ಮುಂಗಟ್ಟುಗಳನ್ನು ಬೇಗನೆ ಮುಚ್ಚಿಸುತ್ತಿರುವುದು ಕಂಡುಬಂದಿದೆ.
ಶಿವಮೊಗ್ಗದ ಅಮೀರ್ ಅಹಮದ್ ವೃತ್ತದಲ್ಲಿ ಆ.15 ರಂದು ಇರಿಸಲಾಗಿದ್ದ ವೀರ ಸಾವರ್ಕರ್ ಫ್ಲೆಕ್ಸ್ ತೆರವು ಮಾಡಿದ ಬೆನ್ನಲ್ಲೇ ಗಲಾಟೆ ನಡೆದಿತ್ತು. ಮುನ್ನೆಚ್ಚರಿಕೆ ಕ್ರಮವಾಗಿ ನಗರದಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿತ್ತು. ಹೀಗಿದ್ದರೂ ಕೆಲ ಗಂಟೆಗಳಲ್ಲೇ ರಾಜಸ್ಥಾನ ಮೂಲದ ಯುವಕನಿಗೆ ದುಷ್ಕರ್ಮಿಗಳು ಚಾಕು ಇರಿದಿದ್ದರು.
ಇದನ್ನೂ ಓದಿ: ಬಾಲಕಿ ಜೊತೆ ಅಸಭ್ಯ ವರ್ತನೆ: ಪೋಷಕರಿಗೆ ತಿಳಿಸಿದ್ದಕ್ಕೆ ಚಾಕುವಿನಿಂದ ಇರಿದು ಕೊಲೆ, ಆರೋಪಿ ಆತ್ಮಹತ್ಯೆ