ETV Bharat / state

ಅಬಕಾರಿ ಪೊಲೀಸರ ದಾಳಿ: 80 ಸಾವಿರ ಮೌಲ್ಯದ 71 ಲೀ. ಅಕ್ರಮ ಗೋವಾ ಮದ್ಯ ವಶ - ಶಿವಮೊಗ್ಗದಲ್ಲಿ ಅಕ್ರಮ ಗೋವಾ ಮದ್ಯ ಸಾಗಾಟ ಸುದ್ದಿ

ಗ್ರಾಮ ಪಂಚಾಯತ್ ಚುನಾವಣೆಗೆ ಹಂಚಲು ಅಕ್ರಮವಾಗಿ ಗೋವಾ ಮದ್ಯವನ್ನು ಸಾಗಿಸ್ತಿದ್ದ ಆರೋಪಿಯನ್ನು ಪೊಲೀಸರು ಮದ್ಯ​ ಸಮೇತ ಬಂಧಿಸಿದ್ದಾರೆ. ಬಂಧಿತ ಆಟೋ ಡ್ರೈವರ್​​ನಿಂದ ಸುಮಾರು 80 ಸಾವಿರ ರೂ. ಮೌಲ್ಯದ 71 ಲೀ. ಗೋವಾ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ.

excise police raid illicit liqour sale in shimogha
71 ಲೀ. ಗೋವಾ ಮದ್ಯ ವಶ
author img

By

Published : Dec 15, 2020, 7:43 AM IST

ಶಿವಮೊಗ್ಗ: ಗ್ರಾಮ ಪಂಚಾಯತ್ ಚುನಾವಣೆಗೆ ಹಂಚಲು ಅಕ್ರಮವಾಗಿ ಆಟೋದಲ್ಲಿ ಸಾಗಿಸುತ್ತಿದ್ದ 71 ಲೀಟರ್​ ಗೋವಾ ಮದ್ಯವನ್ನು ಅಬಕಾರಿ ಪೊಲೀಸರು ಹೊಸನಗರದ ಚಿಕ್ಕಪೇಟೆಯಲ್ಲಿ ವಶಕ್ಕೆ ಪಡೆದುಕೊಂಡಿದ್ದಾರೆ.

71 ಲೀ. ಗೋವಾ ಮದ್ಯ ವಶ
ಗ್ರಾಮ ಪಂಚಾಯತ್ ಚುನಾವಣೆ ನೀತಿ ಸಂಹಿತೆ ಜಾರಿಯಾಗಿದ್ದು, ಈ ವೇಳೆ ಗೋವಾದ ಮದ್ಯವನ್ನು ತೆರಿಗೆ ಪಾವತಿಸದೆ ಗ್ರಾಮ ಪಂಚಾಯತ್​ ಚುನಾವಣೆಗೆ ಬಳಸುವ ಉದ್ದೇಶದಿಂದ ಆಟೋದಲ್ಲಿ ಸಾಗಿಸಲಾಗುತ್ತಿತ್ತು. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಜಿಲ್ಲಾ ಅಬಕಾರಿ ಉಪ ಆಯುಕ್ತ ಕ್ಯಾಪ್ಟನ್ ಅಜಿತ್​ ಅವರ ನೇತೃತ್ವದಲ್ಲಿ ಅಬಕಾರಿ‌ ನಿರೀಕ್ಷಕರು ದಾಳಿ‌ ನಡೆಸಿ, ಗೋವಾದಲ್ಲಿ ತಯಾರಾದ ಎಂಸಿ ವಿಸ್ಕಿ, ಐಬಿ ವಿಸ್ಕಿ ಹಾಗೂ ಗೋವಾ ಫೆನ್ನಿ ಸೇರಿದಂತೆ ಒಟ್ಟು 71 ಲೀ. ಗೋವಾ ಮದ್ಯವನ್ನು ವಶಕ್ಕೆ ಪಡೆಯಲಾಗಿದೆ.

ಈ ಮದ್ಯವನ್ನು ಚಿಕ್ಕಪೇಟೆಯ ಸಿರಾಜ್ ಎಂಬಾತ ತನ್ನ ಆಟೋದಲ್ಲಿ ಸಾಗಣೆ ಮಾಡುತ್ತಿದ್ದ ಹಾಗೂ ಮನೆಯಲ್ಲಿ ಕೂಡ ದಾಸ್ತಾನು ಮಾಡಿದ್ದನು. ಸದ್ಯ ಈತನನ್ನು ಬಂಧಿಸಿ, ‌ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಸುಮಾರು 80 ಸಾವಿರ ಮೌಲ್ಯದ ಗೋವಾ ಮದ್ಯವನ್ನು ಹಾಗೂ ಆಟೋವನ್ನು ವಶಕ್ಕೆ ಪಡೆಯಲಾಗಿದೆ.

ಇದನ್ನೂ ಓದಿ:ಬೊಕೊ ಹರಾಮ್ ಉಗ್ರರ ದಾಳಿಗೆ ನೈಜರ್‌ನಲ್ಲಿ 28 ಮಂದಿ ಬಲಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.