ಶಿವಮೊಗ್ಗ : ಕಳ್ಳಭಟ್ಟಿ ತಯಾರು ಮಾಡುತ್ತಿದ್ದ ಮನೆಯ ಮೇಲೆ ಪೊಲೀಸರು ದಾಳಿ ನಡೆಸಿ 225 ಲೀಟರ್ ಬೆಲ್ಲದ ಕೊಳೆ ಹಾಗೂ 40 ಕೆಜಿ ಕೊಳೆತ ಬೆಲ್ಲವನ್ನು ಶಿಕಾರಿಪುರ ತಾಲೂಕಿನ ಚಿಕ್ಕಮಾಗಡಿ ಗುಡ್ಡದ ತಾಂಡಾದಲ್ಲಿ ನಡೆದಿದೆ.
ಕಳ್ಳಭಟ್ಟಿ ತಯಾರಿಸುತ್ತಿರುವ ಖಚಿತ ಮಾಹಿತೆ ಮೇರೆಗೆ ಶಿಕಾರಿಪುರ ಅಬಕಾರಿ ಉಪ ನಿರೀಕ್ಷಕರು ದಾಳಿ ನಡೆಸಿದ್ದಾರೆ. ಅಬಕಾರಿ ಪೊಲೀಸರ ದಾಳಿ ವೇಳೆ ಮನೆಯ ಮಾಲೀಕ ರಮೇಶ್ ನಾಯ್ಕ ಹಾಗೂ ಲಲಿತಾಬಾಯಿ ಅನ್ನೋರು ಪರಾರಿಯಾಗಿದ್ದಾರೆ.
ಈ ಕುರಿತು ಶಿಕಾರಿಪುರ ಅಬಕಾರಿ ಪೊಲೀಸರು ರಮೇಶ್ ನಾಯ್ಕ ಹಾಗೂ ಲಲಿತಾಬಾಯಿ ಅನ್ನೋರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಅಲ್ಲದೆ ಕಳ್ಳಭಟ್ಟಿ ತಯಾರಿಕೆಯ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.