ಶಿವಮೊಗ್ಗ: ಬಂಜಾರ ವಿದ್ಯಾರ್ಥಿ ಸಂಘದ ವತಿಯಿಂದ ಶಿವಮೊಗ್ಗದ ಕುಂಬಾರ ಬೀದಿಯಲ್ಲಿರುವ ನೆರೆಪೀಡಿತ ಜ್ಞಾನಪ್ರಭಾ ಹಿರಿಯ ಪ್ರಾಥಮಿಕ ಶಾಲೆಯ ಸುಮಾರು130 ಮಕ್ಕಳಿಗೆ ನೋಟ್ ಪುಸ್ತಕ ಹಾಗೂ ಲೇಖನ ಸಾಮಾಗ್ರಿಗಳನ್ನು ವಿತರಿಸಲಾಯಿತು.
ಜಿಲ್ಲೆಯಲ್ಲಿ ಎಡೆಬಿಡದೇ ಸುರಿದ ಭಾರಿ ಮಳೆಯಿಂದಾಗಿ ಅನೇಕ ಮನೆಗಳು ಹಾನಿಗೊಳಗಾಗಿದ್ದವು. ಅಲ್ಲದೇ ಶಾಲಾ ಮಕ್ಕಳ ಪಠ್ಯ ಪುಸ್ತಕಗಳು ಸಹ ಪ್ರವಾಹಕ್ಕೆ ಕೊಚ್ಚಿ ಹೋಗಿದ್ದವು. ಹೀಗಾಗಿ ಮಕ್ಕಳಿಗೆ ನೋಟ್ಬುಕ್ ಹಾಗೂ ಲೇಖನ ವಿತರಿಸಲಾಯಿತು.
ಇನ್ನು ಈ ಕಾರ್ಯಕ್ರಮದಲ್ಲಿ ವಕೀಲರಾದ ಶಿವಮೂರ್ತಿ, ಚಲನಚಿತ್ರ ಕಲಾವಿದರಾದ ರಾಜೇಶ್ ಕಿಮಾವತ್, ಬಂಜಾರ ವಿದ್ಯಾರ್ಥಿ ಸಂಘದ ಸಲಹೆಗಾರರಾದ ಜಗದೀಶ್, ಸೀತಾನಾಯ್ಕ್, ಮುಖ್ಯೋಪಾಧ್ಯಾಯರಾದ ವಾಣಿ, ಶಿಕ್ಷಕರಾದ ಹಾಲೇಶಪ್ಪ ಹಾಗೂ ಸಂಸ್ಥೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.