ಶಿವಮೊಗ್ಗ: ಕೊರೊನಾ ಕಾರಣದಿಂದಾಗಿ ಪುಸ್ತಕ ವ್ಯಾಪಾರಿಗಳು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ವ್ಯಾಪಾರ- ವಹಿವಾಟು ಇಲ್ಲದೆ ಮಳಿಗೆ ಬಾಡಿಗೆ ಕಟ್ಟಲೂ ಅವರೆಲ್ಲ ಹೆಣಗಾಡುತ್ತಿದ್ದಾರೆ. ಎಷ್ಟೋ ಮಂದಿ ಮಳಿಗೆ ಖಾಲಿ ಮಾಡಿದ್ದಾರೆ.
ಇದನ್ನೂ ಓದಿ: 'ನಮ್ಮೂರಿಗೆ ಅಕೇಶಿಯ ಬೇಡ' : ಶಿವಮೊಗ್ಗದಲ್ಲಿ ಪ್ರತಿಭಟನೆ.. ಪೊಲೀಸರೊಂದಿಗೆ ವಾಗ್ವಾದ
ಅನ್ಲಾಕ್ ನಂತರವಾದರೂ ಉದ್ಯಮ ಚೇತರಿಸಿಕೊಳ್ಳಲಿದೆ ಎಂಬ ನಿರೀಕ್ಷೆಗೆ ಆನ್ಲೈನ್ ವ್ಯವಸ್ಥೆ ಮತ್ತಷ್ಟು ಪೆಟ್ಟು ಕೊಟ್ಟಿದೆ. ಕೋವಿಡ್ದಿಂದಾಗಿ ಹೊರ ಹೋಗಲು ಹಿಂಜರಿಯುತ್ತಿದ್ದ ಕಾರಣ ಪುಸ್ತಕ ಪ್ರೇಮಿಗಳು ಆನ್ಲೈನ್ ಮೂಲಕ ಪುಸ್ತಕ ಖರೀದಿಸುತ್ತಿದ್ದರು. ಇದು ಸಣ್ಣ ಮತ್ತು ಮಧ್ಯಮ ವ್ಯಾಪಾರಿಗಳಿಗೆ ತಲೆನೋವು ತರಿಸಿದೆ.
ಇನ್ನು ಹೊಸದಾಗಿ ಉದ್ಯಮ ಆರಂಭಿಸಲು ಯಾರೂ ಸಿದ್ಧರಿಲ್ಲ. ಕೆಲವರು ಹಾಕಿದ ಬಂಡವಾಳ ಬಾರದೆ ಕಷ್ಟಪಡುತ್ತಿದ್ದಾರೆ. ಶಾಲಾ-ಕಾಲೇಜು ನಡೆಯುತ್ತಿದ್ದರೆ ಮಾತ್ರ ವ್ಯಾಪಾರ ನಡೆಯತ್ತದೆ. ಸದ್ಯ ಶಾಲಾ-ಕಾಲೇಜುಗಳು ಆರಂಭವಾದರೂ ವ್ಯಾಪಾರ ಅಷ್ಟಕಷ್ಟೆ. ಕಾರ್ಮಿಕರಿಗೆ ವೇತನ ಪಾವತಿಸಲು ಮಾಲೀಕರಿಗೆ ಸಾಧ್ಯವಾಗದಾಗಿದೆ.