ETV Bharat / state

ಸಚಿವ ಸ್ಥಾನ ಆಕಾಂಕ್ಷಿ ಅಸಮಾಧಾನ ... ತೀವ್ರ ನೋವುಂಟಾಗಿದೆ ಎಂದ ಶಾಸಕ

ಪಕ್ಷದಲ್ಲಿ ಹಿರಿತನ ಪರಿಗಣಿಸಿ ಮಂತ್ರಿ ಸ್ಥಾನ ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದೆ. ಆದ್ದರಿಂದ ತುಂಬಾ ನೋವಾಗಿದೆ. ಮುಂದಿನ ದಿನಗಳಲ್ಲಿ ನೀಡುವುದಾಗಿ ರಾಜ್ಯ ನಾಯಕರು ತಿಳಿಸಿದ್ದಾರೆ. ಆದರೆ ನಾನು ಯಾವುದೇ ರೀತಿಯಿಂದಲೂ ಪಕ್ಷಕ್ಕೆ ಹಾನಿ ಮಾಡುವುದಿಲ್ಲ ಎಂದು ಸಚಿವ ಸ್ಥಾನ ಆಕಾಂಕ್ಷಿ ಶಾಸಕ ಆರಗ ಜ್ಞಾನೇಂದ್ರ ಬೇಸರ ವ್ಯಕ್ತಪಡಸಿದ್ದಾರೆ.

ಶಾಸಕ ಆರಗ ಜ್ಞಾನೇಂದ್ರ
author img

By

Published : Aug 22, 2019, 10:00 PM IST

ಶಿವಮೊಗ್ಗ: ಮಂತ್ರಿ ಮಂಡಲದಲ್ಲಿ ನನಗೆ ಸ್ಥಾನ ಸಿಗದೆ ಇರುವುದು ತುಂಬಾ ನೋವುಂಟಾಗಿದೆ. ಆದರೆ ಪಕ್ಷಕ್ಕೆ ಯಾವುದೇ ಹಾನಿ ಮಾಡಲಾರೆ. ಇದು ನಾನು ಬೆಳೆಸಿದ ಪಕ್ಷ ಎಂದು ಸಚಿವ ಸ್ಥಾನ ಆಕಾಂಕ್ಷಿ ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

ಶಾಸಕ ಆರಗ ಜ್ಞಾನೇಂದ್ರ

1983ರಿಂದ ಒಟ್ಟು 9 ಭಾರಿ ಚುನಾವಣೆ ಸ್ಪರ್ಧಿಸಿದ್ದೇನೆ. ನಾಲ್ಕು ಭಾರಿ ಗೆದ್ದಿದ್ದೇನೆ. ನನ್ನ ಹಿರಿತನ ಪರಿಗಣಿಸಿ ಮಂತ್ರಿ ಸ್ಥಾನ ನೀಡಬಹುದು ಎಂಬ ನಿರೀಕ್ಷೆಯಲ್ಲಿದ್ದೆ. ಇದರಿಂದ ಕ್ಷೇತ್ರದ ಮತದಾರರಿಗೂ ಬೇಸರವಾಗಿದೆ ಎಂದು ಹೇಳಿದರು.

ಪಕ್ಷ- ತತ್ವ ಸಿದ್ದಾಂತಗಳ ಮೇಲೆ ರಾಜಕೀಯ ನಡೆಸಿಕೊಂಡು ಬಂದವನು. ನಮ್ಮ ಜಿಲ್ಲೆಯಲ್ಲಿ ಯಡಿಯೂರಪ್ಪ ,ಈಶ್ಚರಪ್ಪನವರ ಜೊತೆ ರಾಜಕೀಯದಲ್ಲಿ ಬೆಳೆದು ಬಂದವನು. ಈ ಹಿರಿತನವೇ ತನಗೆ ಹಿನ್ನಡೆಯಂಟು ಮಾಡಿದೆ ಎಂಬ ಬೇಸರವಿದೆ. ಪಕ್ಷದ ನಾಯಕರು ಅವಕಾಶವಿದೆ ತಾಳ್ಮೆಯಿಂದ ಕಾಯುವಂತೆ ಹೇಳಿದ್ದಾರೆ ಎಂದರು.

Intro:ಮಂತ್ರಿ ಮಂಡಲದಲ್ಲಿ ತನಗೆ ಸ್ಥಾನ ಸಿಗದೆ ಇರುವುದಕ್ಕೆ ತೀರ್ಥಹಳ್ಳಿ ಬಿಜೆಪಿ ಹಿರಿಯ ಶಾಸಕ ಆರಗ ಜ್ಞಾನೇಂದ್ರ ಅಸಮಾಧಾನ ಹೊರ ಹಾಕಿದ್ದಾರೆ. ಸಚಿವ ಸ್ಥಾನ ಸಿಗದೆ ಇರುವುದಕ್ಕೆ ನನಗೆ ಖಂಡಿತವಾಗಿ ನೋವಾಗಿದೆ. ನಾನು 1983 ರಿಂದ ಒಟ್ಟು‌ 9 ಭಾರಿ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದು, ಐದು ಭಾರಿ ಸೋತು, ನಾಲ್ಕು ಭಾರಿ‌ ಶಾಸಕನಾಗಿ ಆಯ್ಕೆಯಾಗಿದ್ದೆನೆ. ನಾನು ಜಿಲ್ಲೆಯ‌ ಹಿರಿಯ ಶಾಸಕನಾಗಿದ್ದೆನೆ. ನನ್ನ ಹಿರಿತನವನ್ನು ಪರಿಗಣಿಸಿ ನನಗೆ ಮಂತ್ರಿ ಸ್ಥಾನ ಸಿಗಬಹುದೆಂಬ ನಿರೀಕ್ಷೆಯಲ್ಲಿದ್ದೆ. ಆದ್ರೆ, ಅದು ಆಗಲಿಲ್ಲ. ನನಗಿಂತ ನನ್ನ ಕ್ಷೇತ್ರದ ಜನತೆಗೆ ಸಾಕಷ್ಟು ನಿರೀಕ್ಷೆಯಲ್ಲಿದ್ದರು ಅವರಿಗೆ ಕ್ಷಮೆ ಕೇಳುತ್ತೆನೆ. ಜನ ಹತಾಷರಾಗಿದ್ದಾರೆ ಎಂದರು.

Body:ನಾನು ಪಕ್ಷ- ತತ್ವ ಸಿದ್ದಾಂತಗಳ ಮೇಲೆ ರಾಜಕೀಯ ನಡೆಸಿಕೊಂಡು ಬಂದವನು. ನಮ್ಮ ಜಿಲ್ಲೆಯಲ್ಲಿ ಯಡಿಯೂರಪ್ಪ ,ಈಶ್ಚರಪ್ಪನವರ ಜೊತೆ ರಾಜಕೀಯದಲ್ಲಿ ಬೆಳೆದು ಬಂದವನು. ಈ ಹಿರಿತನವೇ ತನಗೆ ಹಿನ್ನಡೆಯಂಟು ಮಾಡಿದೆ ಎಂಬ ಬೇಸರ ವ್ಯಕ್ತಪಡಿಸಿದರು. ನಾನು ಪಕ್ಷದ ಶಿಸ್ತಿನ ಸಿಪಾಯಿ, ನಾನು ಈಶ್ವರಪ್ಪ ಹಾಗೂ ಸಿಎಂ ಜೊತೆ ಬೆಳೆದು ಬಂದವನು, ಅವರೆ ತಿಳಿದು ಕೊಡಬೇಕು ಎಂದರು. ಇನ್ನೂ ನಮ್ಮ ಪಕ್ಷದ ನಾಯಕರು ಇನ್ನೂ ಅವಕಾಶವಿದೆ ತಾಳ್ಮೆಯಿಂದ ಕಾಯುವಂತೆ ಹೇಳಿದ್ದಾರೆ. ನಾನು ಪಕ್ಷಕ್ಕೆ ಯಾವುದೇ ಡ್ಯಾಮೇಜ್ ಮಾಡಲು ಬಯಸುವುದಿಲ್ಲ ಎಂದರು.‌

Conclusion:ನಾನು ಪಕ್ಷ ಹೇಳಿದಂತೆ ಕೇಳುತ್ತೆನೆ. ನಾನು ಪಕ್ಷದ ನಾಯಕರ ಮಾತನ್ನು ಪಾಲಿಸುತ್ತೆನೆ. ನನ್ನನ್ನು ಪಕ್ಷ ಗುರುತಿಸದೆ ಇರುವುದು ನನಗೆ ಬೇಸರ ತಂದಿದೆ. ನಾನು ಹಿಂದೆ ನಿಗಮದ ಅಧ್ಯಕ್ಷನಾದವನು ಈಗ ನನಗೆ ಆ ಬಗ್ಗ ಯಾವುದೇ ಆಸಕ್ತಿ ಇಲ್ಲ ಎಂದರು.

ಬೈಟ್: ಆರಗ ಜ್ಞಾನೇಂದ್ರ.‌ ತೀರ್ಥಹಳ್ಳಿ‌ ಶಾಸಕ.

ಕಿರಣ್ ಕುಮಾರ್. ಶಿವಮೊಗ್ಗ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.