ETV Bharat / state

ಮುಗೂರು ಏತ‌ನೀರಾವರಿ ಯೋಜನೆಗೆ ಸಿಎಂ ಬಿಎಸ್​ವೈರಿಂದ ಚಾಲನೆ - ಮುಗೂರು ಏತ‌ನೀರಾವರಿ ಯೋಜನೆ ಸಿಎಂ ಬಿಎಸ್​ವೈರಿಂದ ಚಾಲನೆ,

ಇಂದು ಮಹತ್ವಕಾಕ್ಷಿಯ ಮುಗೂರು ಏತ‌ನೀರಾವರಿ ಯೋಜನೆಗೆ ಸಿಎಂ ಬಿಎಸ್ ವೈ ಚಾಲನೆ ನೀಡಲಿದ್ದಾರೆ.

muguru Lift irrigation project, launches muguru Lift irrigation project, CM BSY launches muguru Lift irrigation project, muguru Lift irrigation project news, ಮುಗೂರು ಏತ‌ನೀರಾವರಿ ಯೋಜನೆ, ಮುಗೂರು ಏತ‌ನೀರಾವರಿ ಯೋಜನೆಗೆ ಚಾಲನೆ, ಮುಗೂರು ಏತ‌ನೀರಾವರಿ ಯೋಜನೆ ಸಿಎಂ ಬಿಎಸ್​ವೈರಿಂದ ಚಾಲನೆ, ಮುಗೂರು ಏತ‌ನೀರಾವರಿ ಯೋಜನೆ ಸುದ್ದಿ,
ಮುಗೂರು ಏತ‌ನೀರಾವರಿ ಯೋಜನೆಗೆ ಸಿಎಂ ಬಿಎಸ್​ವೈರಿಂದ ಚಾಲನೆ
author img

By

Published : Feb 28, 2021, 5:29 AM IST

ಶಿವಮೊಗ್ಗ: ಇಂದು ಮಹತ್ವಕಾಕ್ಷಿಯ ಮುಗೂರು ಏತ‌ನೀರಾವರಿ ಯೋಜನೆಯನ್ನು ಸಿಎಂ ಯಡಿಯೂರಪ್ಪ ಉದ್ಘಾಟಿಸಲಿದ್ದಾರೆ.

ಮುಗೂರು ಏತ‌ನೀರಾವರಿ ಯೋಜನೆಗೆ ಸಿಎಂ ಬಿಎಸ್​ವೈರಿಂದ ಚಾಲನೆ

ಸೊರಬ ತಾಲೂಕು ಒಂದು ರೀತಿಯಲ್ಲಿ ಅಕಾಲಿಕ ಬರಗಾಲಕ್ಕೆ ಒಳಗಾಗುತ್ತದೆ. ಸೊರಬದಲ್ಲಿ ರಾಜ್ಯದಲ್ಲಿಯೇ ಅತಿ ಹೆಚ್ಚು ಕೆರೆಗಳನ್ನು ಹೊಂದಿರುವ ತಾಲೂಕು. ಆದರೆ ಸೊರಬ‌ ತಾಲೂಕಿನಲ್ಲಿ ನೀರಿನ ಅಭಾವ ಉಂಟಾಗಿ ಜನತೆ ಸಂಕಟ ಪಡುವಂತೆ ಆಗಿದೆ. ಇದಕ್ಕಾಗಿಯೇ ಸೊರಬ ತಾಲೂಕಿನ ಮುಗೂರು ಗ್ರಾಮದಲ್ಲಿ ಏತ ನೀರಾವರಿ ಯೋಜನೆಯನ್ನು ಇಂದು ಬಿ.ಎಸ್.ಯಡಿಯೂರಪ್ಪ ಚಾಲನೆ ನೀಡಲಿದ್ದಾರೆ.

ಕೊಟ್ಟ ಮಾತು ಉಳಿಸಿಕೊಂಡ ಸಿಎಂ ಬಿಎಸ್​ವೈ...

ಕಳೆದ ವಿಧಾನಸಭಾ ಚುನಾವಣೆಯಲ್ಲಿ ತಾಲೂಕಿಗೆ ನೀರಾವರಿ ಯೋಜನೆ ಕಲ್ಪಿಸುವ ಹೇಳಿಕೆ ನೀಡಿದ್ದ ಯಡಿಯೂರಪ್ಪ ತಾವು ಸಿಎಂ ಆಗಿ ಅಧಿಕಾರ ಸ್ವೀಕಾರ ಮಾಡುತ್ತಲೆ ಮೊದಲು ಏತಾ ನೀರಾವರಿ ಯೋಜನೆಗೆ ಅಸ್ತು ಅಂದ್ರು. ಅದರ ಫಲವೇ ಮುಗೂರು ಏತ ನೀರಾವರಿ ಯೋಜನೆ.

ಕೆರೆಗಳ ನೀರು ತುಂಬಿಸಲು ಕೋಟಿ ರೂ ಯೋಜನೆ...

ಸೊರಬ ತಾಲೂಕಿನಲ್ಲಿ ಹರಿಯುವ ವರದ ನದಿಯಿಂದ ನೀರನ್ನು ಮೇಲೆತ್ತಿ, ಮುಗೂರು ಕೆರೆಗೆ ನೀರು ತುಂಬಿಸಿ, ಇದರ ಮೂಲಕ ಸಣ್ಣ ನೀರಾವರಿಯ ಹಾಗೂ ಜಿಲ್ಲಾ ಪಂಚಾಯತ್ ಕೆರೆಯನ್ನು ತುಂಬುಸುವ ಯೋಜನೆ ಇದಾಗಿದೆ. ಈ ಯೋಜನೆಗೆ 0.328 ಟಿಎಂಸಿ ನೀರನ್ನು ಬಳಸಿಕೊಳ್ಳಲಾಗುತ್ತದೆ.

ನೀರನ್ನು 43 ಮೀಟರ್ ಮೇಲೆತ್ತಿ 5.78 ಕಿ.ಮೀ ನೀರನ್ನು ರೈಸಿಂಗ್ ಮೈನ್​ನಿಂದ ತರಲಾಗುತ್ತದೆ. ಇದಕ್ಕೆ ಒಟ್ಟು 3 ಪಂಪ್ ಗಳನ್ನು ಬಳಸಲಾಗುತ್ತದೆ. ಇಲ್ಲಿ ಜುಲೈ ನಿಂದ ಸೆಪ್ಟೆಂಬರ್​ವರೆಗೆ ನೀರನ್ನು ಮೇಲೆತ್ತಿ ಹರಿಸಲಾಗುವುದು.

ಏತ ನೀರಾವರಿ ಯೋಜನೆಯ ವ್ಯಾಪ್ತಿಗೆ 31 ಗ್ರಾಮಗಳ ಅನುಕೂಲ ಪಡೆಯಲಿದೆ. ಈ ಯೋಜನೆಯು ನೀರಾವರಿ ನಿಗಮಕ್ಕೆ ಒಳಪಟ್ಟು ಕಾರ್ಯ ಮಾಡುತ್ತದೆ.

ಇಂದು ಉದ್ಘಾಟನ ಕಾರ್ಯಕ್ರಮಕ್ಕೆ ಜಲ ಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳೆ, ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ, ಶಾಸಕ ಕುಮಾರ ಬಂಗಾರಪ್ಪ ಸೇರಿ ಅಧಿಕಾರಿಗಳು ಭಾಗಿಯಾಗಲಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.