'ಬಿಗ್ ಬಾಸ್ ಕನ್ನಡ ಸೀಸನ್ 11'ರ ಫಿನಾಲೆಗೆ ದಿನಗಣನೆ ಆರಂಭವಾಗಿದೆ. ಸುದೀಪ್ ನಿರೂಪಣೆಯಲ್ಲಿ ಮೂಡಿಬರುತ್ತಿರುವ ಕೊನೆಯ ಸೀಸನ್ ಇದಾಗಿದ್ದು, ವಿಜೇತರು ಯಾರು ಎಂಬ ಕುತೂಹಲ ದೊಡ್ಡ ಮಟ್ಟದಲ್ಲೇ ಇದೆ. ಸ್ಪರ್ಧಿಗಳ ಜೊತೆಗೆ ಕನ್ನಡಿಗರಿಗೂ ವಿಜೇತ ಸ್ಥಾನದ ಮೇಲೆ ಸಾಕಷ್ಟು ನಿರೀಕ್ಷೆಗಳಿದ್ದು, ಉಳಿದುಕೊಂಡಿರುವ ಬೆರಳೆಣಿಕೆ ದಿನಗಳಲ್ಲಿನ ಅವರ ಆಟ ಮಹತ್ವದ್ದಾಗಿದೆ. ಕಳೆದ ಸಂಚಿಕೆಯಲ್ಲಿ ಚೈತ್ರಾ ಕುಂದಾಪುರ ಅವರು ಎಲಿಮಿನೇಟ್ ಆಗಿದ್ದಾರೆ. ಈಗಾಗಲೇ ಟೆನ್ಷನ್ನಲ್ಲಿರೋ ಬಾಕಿ ಸ್ಪರ್ಧಿಗಳಿಗೆ ಬಿಗ್ ಬಾಸ್ ಮತ್ತೊಂದು ಸುದ್ದಿ ನೀಡಿ, ಕಾವಿನ ವಾತಾವರಣವನ್ನು ಮತ್ತಷ್ಟು ಬಿಸಿಗೊಳಿಸಿದ್ದಾರೆ.
ಹೌದು, 'ಸೆಮಿ-ಫಿನಾಲೆಯಲ್ಲಿ ಮಣ್ಣು ಮುಕ್ಕಿಸೋಕೆ ಸ್ಕೆಚ್ ರೆಡಿ!' ಬಿಗ್ ಬಾಸ್ ಕನ್ನಡ ಸೀಸನ್ 11, ಸೋಮ-ಶುಕ್ರ ರಾತ್ರಿ 9:30ಕ್ಕೆ ಪ್ರಸಾರ ಎಂಬ ಕ್ಯಾಪ್ಷನ್ನಡಿ ಪ್ರೋಮೋ ಅನಾವರಣಗೊಂಡಿದೆ. ಇದರಲ್ಲಿ ಬಿಗ್ ಬಾಸ್ ಮಹತ್ವದ ಘೋಷಣೆ ಮಾಡಿದ್ದಾರೆ. ಈ ವಾರ ಮಿಡ್ ವೀಕ್ ಎಲಿಮಿನೇಷನ್ ಇರಲಿದೆ. ಟಾಸ್ಕ್ ಗೆಲ್ಲುವ ಸ್ಪರ್ಧಿ ಎಲಿಮಿನೇಷನ್ ತೂಗುಗತ್ತಿಯಿಂದ ಪಾರಾಗಲಿದ್ದಾರೆ. ಇಲ್ಲಿ ಆಟಕ್ಕಾಗಿ ಕೈಜೋಡಿಸಿದ ಭವ್ಯಾ ಮತ್ತು ಮೋಕ್ಷಿತಾ ವಿರುದ್ಧ ರಜತ್ ಕಿಶನ್ ಮತ್ತು ತ್ರಿವಿಕ್ರಮ್ ಅಸಮಧಾನಗೊಂಡಿರೋದನ್ನು ಕಾಣಬಹುದು.
ಇದನ್ನೂ ಓದಿ: 'ಜೊತೆಯಾಗಿ, ಹಿತವಾಗಿ..': ನಟಿ ಹರಿಪ್ರಿಯಾ ಬೇಬಿಬಂಪ್ ಫೋಟೋಶೂಟ್
ಪ್ರೋಮೋದಲ್ಲಿ, ಈ ಮನೆಯಲ್ಲಿ ಒಬ್ಬರು ನಡು ವಾರದಲ್ಲೇ ಹೊರ ಹೋಗೋ ಸಾಧ್ಯತೆ ಖಚಿತ. ವಾರದ ಟಾಸ್ಕ್ ಗೆಲ್ಲುವ ಓರ್ವ ಸದಸ್ಯ ಮಿಡ್ ವೀಕ್ ಎಲಿಮಿನೇಷನ್ನಿಂದ ಪಾರಾಗುತ್ತಾರೆ ಎಂದು ಬಿಗ್ ಬಾಸ್ ತಿಳಿಸಿದ್ದಾರೆ. ಒಂದೆಡೆ ಕುಳಿತ ಮೋಕ್ಷಿತಾ ಮತ್ತು ಭವ್ಯಾ, ಏನ್ ಮಾಡೋಣ ಎಂದು ಚರ್ಚಿಸಿ ರಜತ್ ಹೆಸರು ತೆಗೆದುಕೊಂಡಿದ್ದಾರೆ. ಹೆಚ್ಚು ಮರದ ತುಂಡುಗಳನ್ನು ನೆಟ್ನೊಳಗೆ ಹಾಕಬೇಕು. ಯಾರ ಭಾವಚಿತ್ರದ ನೆಟ್ನಲ್ಲಿ ಹೆಚ್ಚು ಮರದ ತುಂಡುಗಳಿವೆಯೋ ಅವರು ಟಾಸ್ಕ್ನಿಂದ ಹೊರ ಉಳಿಯುತ್ತಾರೆಂದು ಬಿಗ್ ಬಾಸ್ ಟಾಸ್ಕ್ ನಿಯಮಗಳನ್ನು ತಿಳಿಸಿದ್ದಾರೆ. ಅದರಂತೆ, ಭವ್ಯಾ ಮತ್ತು ಮೋಕ್ಷಿತಾ ಅವರು ರಜತ್ ಅವರ ಬುಟ್ಟಿಗೆ ಹೆಚ್ಚಿನ ಮರದ ತುಂಡುಗಳನ್ನು ಹಾಕಿದ್ದಾರೆ.
ಇದನ್ನೂ ಓದಿ: 'ನನ್ನ ಸಮುದ್ರ ನೀವು, ಶೀಘ್ರವೇ ವಾಪಸ್ಸಾಗಲಿದ್ದೇನೆ': ಅಭಿಮಾನಿಗಳಿಗೆ ಸಿಕ್ತು ಶಿವಣ್ಣನ ಸಂದೇಶ; ಫೋಟೋ ವಿಡಿಯೋಗಳು ವೈರಲ್
ಆಟದ ನಂತರ, ನೀವಿಬ್ಬರು ಮಾತನಾಡಿಕೊಂಡಿದ್ದೀರೆಂದು ನನಗೆ ಚೆನ್ನಾಗಿ ಗೊತ್ತಿದೆ ಎಂದು ರಜತ್ ತಿಳಿಸಿದ್ದಾರೆ. ಇದನ್ನು ನಿನ್ನಿಂದ ನಿರೀಕ್ಷಿಸಿರಲಿಲ್ಲ. ನಂತರ, ತ್ರಿವಿಕ್ರಮ್ ಮಾತನಾಡಿ ಟಕೆಟ್ ಟು ಫಿನಾಲೆಗೆ ಹೋಗ್ಬಾರ್ದು ಅಂತಾ ಭವ್ಯಾ ಹೆಸರು ತೆಗೆದುಕೊಂಡಿದ್ರಿ, ನಾಮಿನೇಷನ್ನಿಂದ ಉಳಿಬೇಕು ಅಂತಾ ಭವ್ಯಾ ಜೊತೆ ಸೇರ್ಕೊಂಡ್ ಆಡ್ತೀರ ಎಂದು ಅಸಮಾಧಾನ ಹೊರಹಾಕಿದ್ದಾರೆ. ನೀಯತ್ತಾಗೆ ಆಡಿದ್ದು ನಾವು ಅಂತಾ ಮೋಕ್ಷಿತಾ ತಿಳಿಸಿದ್ದು, ಸಮರ್ಥನೆ ಬೇಡ, ನಿನ್ ಮನ್ಸಿಗೆ ಗೊತ್ತು ಸಾಕು ಎಂದು ರಜತ್ ತಿಳಿಸಿದ್ದಾರೆ.