ETV Bharat / state

ವಿಧಾನಸಭಾ ಚುನಾವಣೆಯಲ್ಲಿ 140 ರಿಂದ 150 ಸ್ಥಾನ ಗೆಲ್ಲುತ್ತೇವೆ: ಬಿಎಸ್​ವೈ ವಿಶ್ವಾಸ

ಶಿಕಾರಿಪುರದಲ್ಲಿ‌ ಬಿಜೆಪಿ ಬೂತ್ ವಿಜಯ ಅಭಿಯಾನ - ಮಾಜಿ ಮುಖ್ಯಮಂತ್ರಿ ಬಿಎಸ್​ವೈ ಚಾಲನೆ

BSY Inaugurates BJP Booth Vijaya Campaign
ಬಿಜೆಪಿ ಬೂತ್ ವಿಜಯ ಅಭಿಯಾನಕ್ಕೆ ಚಾಲನೆ
author img

By

Published : Jan 7, 2023, 4:10 PM IST

ವಿಧಾನಸಭಾ ಚುನಾವಣೆಯಲ್ಲಿ 140 ರಿಂದ 150 ಸ್ಥಾನ ಗೆಲ್ಲುತ್ತೇವೆ: ಬಿಎಸ್​ವೈ ವಿಶ್ವಾಸ

ಶಿವಮೊಗ್ಗ: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ 140 ರಿಂದ 150 ಸ್ಥಾನ ಗೆಲ್ಲುವುದನ್ನು ತಡೆಯಲು ಯಾರಿಂದಲೂ ಸಾಧ್ಯ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹೇಳಿದರು. ಶಿಕಾರಿಪುರದಲ್ಲಿ‌ ಬಿಜೆಪಿ ಬೂತ್ ವಿಜಯ ಅಭಿಯಾನಕ್ಕೆ ಚಾಲನೆ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೂರ್ಯ ಚಂದ್ರರಿರುವುದು ಎಷ್ಟು ಸತ್ಯವೋ ಅಷ್ಟೇ ಸತ್ಯ ಮುಂಬರುವ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿ ದೊಡ್ಡ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಮಾಜಿ ಸಿಎಂ ವಿಶ್ವಾಸ ವ್ಯಕ್ತಪಡಿಸಿದರು.

ಯಾರೋ ನಾನೇ ಮುಖ್ಯಮಂತ್ರಿ, ನಾನೇ ಮುಖ್ಯಮಂತ್ರಿ ಅಂತ ಬಡದಾಡುತ್ತಿದ್ದಾರೋ ಕಾಂಗ್ರೆಸ್ ನಲ್ಲಿ ಅದು ಕೇವಲ ತಿರುಕನ ಕನಸಾಗುತ್ತೆ ಹೊರತು ಅದು ಯಾವುದೇ ಕಾರಣಕ್ಕೂ ಸಾಧ್ಯ ಇಲ್ಲ ಅನ್ನೋದು ಅವರಿಗೂ ಸಹ ಮನವರಿಕೆ ಆಗಿದೆ ಎಂದರು. ಪ್ರಧಾನಿ ನರೇಂದ್ರ ಮೋದಿಯವರಂತವರ ನಾಯಕತ್ವ ನಮಗಿರಬೇಕಾದರೇ ಈ ಚುನಾವಣೆಯಲ್ಲಿ ಜಯಭೇರಿ ಪಡೆಯುವುದರಲ್ಲಿ ಯಾವುದೇ ಅನುಮಾನ ಇಲ್ಲ. ಎಲ್ಲ ಕಾರ್ಯಕರ್ತರು ಬೂತ್ ಬಲ ಪಡಿಸಿ ಮತದಾರರನ್ನು ಮನವಲಿಸಿ ಮತಗಟ್ಟೆಗೆ ಕರೆದುಕೊಂಡು ಬಂದು ಮತದಾನ ಮಾಡಿಸಬೇಕಿದೆ ಎಂದರು. ನಾವು ಈ ಭಾರೀ ಜಯಭೇರಿ ಬಾರಿಸಲಿದ್ದೇವೆ ಅನ್ನೋದು ಕಾಂಗ್ರೆಸ್ ನವರಿಗೂ ಸಹ ಮನವರಿಕೆ ಆಗಿದೆ. ಹಾಗಾಗಿ ಎಲ್ಲರ ಸಹಕಾರ ಬೇಕು ಎಂದು ಯಡಿಯೂರಪ್ಪ ಮನವಿ ಮಾಡಿದರು.

ಎರಡ್ಮೂರು ದಿನದಲ್ಲಿ ಸಚಿವ ಸಂಪುಟ ವಿಸ್ತರಣೆ: ಮುಂದಿನ ಎರಡ್ಮೂರು ದಿನದಲ್ಲಿ ಸಂಪುಟ ವಿಸ್ತರಣೆ ಕುರಿತು ಕೇಂದ್ರದಲ್ಲಿ ತೀರ್ಮಾನ ತೆಗೆದುಕೊಳ್ಳಲಿದ್ದಾರೆ. ಯಾರನ್ನು ತೆಗೆದುಕೊಳ್ಳಬೇಕು ಎನ್ನುವುದು ಪ್ರಧಾನಿ, ಕೇಂದ್ರದ ನಾಯಕರಿಗೆ ಬಿಟ್ಟಿದ್ದು ಎಂದು ಬಿಎಸ್​​ವೈ ಹೇಳಿದರು.

ಸಿದ್ದರಾಮಯ್ಯ ನಿಂತಿರುವ ನೆಲವೇ ಕುಸಿಯುತ್ತಿದೆ: ಸಿದ್ದರಾಮಯ್ಯನವರಿಗೆ ತಾವು ನಿಂತಿರುವ ನೆಲವೇ ಕುಸಿಯುತ್ತಿದೆ ಎನ್ನುವ ಅರಿವಿಲ್ಲದೇ ಬಹಳ ಹಗುರವಾಗಿ ಮುಖ್ಯಮಂತ್ರಿಗಳ ಬಗ್ಗೆ, ಆರ್ ಎಸ್ಎಸ್ ಬಗ್ಗೆ ಮಾತನಾಡುವ ಅಭ್ಯಾಸವಾಗಿದೆ. ಇದಕ್ಕೆ ತಕ್ಕಪಾಠವನ್ನು ರಾಜ್ಯದ ಜನ ಕಲಿಸುತ್ತಾರೆ ಎಂದರು.

ಮತ್ತೆ ಅಧಿಕಾರಕ್ಕೆ ಬರಲಿದ್ದೇವೆ: ಮುಂದೆ ಬರುವ ವಿಧಾನಸಭೆ ಚುನಾವಣೆಯಲ್ಲಿ 150 ಸೀಟು ಗೆದ್ದು, ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ. ಬಿಜೆಪಿ ಅಧಿಕಾರಕ್ಕೇರುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ. ಇತ್ತೀಚೆಗೆ ನಗರದ ಅರಮನೆ ಮೈದಾನದಲ್ಲಿ ನಡೆದ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ನೇತೃತ್ವದಲ್ಲಿ ರಾಜ್ಯದಲ್ಲಿ ನಿಶ್ಚಿತವಾಗಿ ಗುರಿಯನ್ನು ತಲುಪಿ, ಮತ್ತೆ ಅಧಿಕಾರಕ್ಕೆ ಬರಲಿದ್ದೇವೆ. ಯಾವುದೇ ಶಕ್ತಿ ಕೂಡ ನಾವು ಅಧಿಕಾರಕ್ಕೆ ಬರೋದನ್ನ ತಡೆಲು ಸಾಧ್ಯವಿಲ್ಲ ಅಂತ ನಾವೆಲ್ಲ ಮನವರಿಕೆ ಮಾಡಿಕೊಡಬೇಕಿದೆ ಎಂದು ಹೇಳಿದ್ದರು.

ಜನರ ಕಲ್ಯಾಣಕ್ಕಾಗಿ ಅನೇಕ ಯೋಜನೆ: ಮೋದಿ ಕಾರ್ಯಕ್ರಮ, ಕೇಂದ್ರ ಹಾಗೂ ರಾಜ್ಯ ಸರ್ಕಾರದಲ್ಲಿ ಕಳೆದ ಮೂರು ವರ್ಷದಲ್ಲಿ ಕೊಟ್ಟ ಕಾರ್ಯಕ್ರಮ. ಇದನ್ನೆಲ್ಲಾ ಕಾರ್ಯಕರ್ತರು ಅರ್ಥ ಮಾಡಿಕೊಂಡು ಮನೆ ಮನೆಗೆ ತಲುಪಿಸಬೇಕು. ಕೇಂದ್ರ ಹಾಗೂ ರಾಜ್ಯದ ಯೋಜನೆ ಅರ್ಥ ಮಾಡಿಕೊಂಡು ಜನರಿಗೆ ತಲುಪಿಸೋ ಕೆಲಸ ಮಾಡಬೇಕಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಜನರ ಕಲ್ಯಾಣಕ್ಕಾಗಿ ಅನೇಕ ಯೋಜನೆ ರೂಪಿಸೋ ಮೂಲಕ ಸುಧಾರಣೆ ಮಾಡುವಲ್ಲಿ ಯಶಸ್ವಿಯಾಗಿದ್ದೇವೆ.

ರಾಜ್ಯದ ಮೂಲೆ ಮೂಲೆಗಳಲ್ಲಿ ಅನೇಕ ವರ್ಷದಲ್ಲಿ ಮನೆಗಳಿಗೆ ವಿದ್ಯುತ್ ಇರಲಿಲ್ಲ. ಅಲ್ಲಿ ವಿದ್ಯುತ್ ಕೊಡುವ ಕೆಲಸ ಮಾಡಿದ್ದೇವೆ. ರಾಜ್ಯದಲ್ಲಿ ಅನೇಕ ಅಭಿವೃದ್ಧಿ ಕಾರ್ಯ ಮಾಡುವ ಮೂಲಕ ಜನರ ಮನೆ ತಲುಪಿದ್ದೇವೆ. ಪಿಎಂ ಕಿಸಾನ್ ಸಮ್ಮಾನ್ ಯೋಜನೆಯಡಿ ನೇರ ಬ್ಯಾಂಕ್ ಖಾತೆಗೆ ಹಣ ಹಾಕಲಾಗಿದೆ. ಹಿಂದೆಲ್ಲ ಮುಖಂಡರ ಕೈಬಿಸಿ ಮಾಡಿದರೆ ಮಾತ್ರ ಸೌಲಭ್ಯದ ಹಣ ಸಿಗುತ್ತಿತ್ತು.

ಆದರೆ, ಪಿಎಂ ಕಾಳಜಿ ಕಾರಣದಿಂದ ಸವಲತ್ತು, ಇಂದು ಮಧ್ಯವರ್ತಿಗಳ ಪಾಲಾಗದೇ ಫಲಾನುಭವಿಗಳಿಗೆ ಸಿಗುವಂತಾಗಿದೆ‌. ಶುದ್ಧ ಕುಡಿಯುವ ನೀರು ಪೂರೈಕೆ ಮಾಡುತ್ತಿದ್ದು, ಮಧ್ಯಮ ವರ್ಗ, ಬಡವರಿಗೆ ಪಡಿತರ ತಲುಪಿಸಲಾಗುತ್ತಿದೆ. ಉಜ್ವಲ ಯೋಜನೆಯಡಿ ಅಡುಗೆ ಅನಿಲ ಸೇರಿ ಹಲವು ಯೋಜನೆ ಜನರಿಗೆ ತಲುಪಿಸಿದ್ದೇವೆ ಎಂದು ಬಿಎಸ್​ವೈ ಹೇಳಿದರು.

ಇದನ್ನೂ ಓದಿ: ಬಿಜೆಪಿ ಅಧಿಕಾರಕ್ಕೇರುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಬಿಎಸ್​ವೈ ವಿಶ್ವಾಸ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.