ಶಿವಮೊಗ್ಗ: ಭಯೋತ್ಪಾದಕರ ಪರವಾಗಿ ಮಾತನಾಡುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ರನ್ನು ಪಕ್ಷದಿಂದ ಕಿತ್ತು ಹಾಕಿ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಒತ್ತಾಯ ಮಾಡಿದ್ದಾರೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಪಾಕಿಸ್ತಾನದ ಬಿಲಾವಾಲ್ ಭೂಟ್ಟೋ ಟೀಕಿಸಿರುವ ವಿಚಾರವಾಗಿ ಹಾಗೂ ಡಿ.ಕೆ.ಶಿವಕುಮಾರ್ ಕುಕ್ಕರ್ ಬಾಂಬ್ ಬ್ಲಾಸ್ಟ್ ವಿಚಾರವಾಗಿ ನೀಡಿದ್ದ ಹೇಳಿಕೆ ಖಂಡಿಸಿ ಜಿಲ್ಲಾ ಬಿಜೆಪಿ ಯುವ ಮೂರ್ಚಾದಿಂದ ನಡೆದ ಪ್ರತಿಭಟನೆಯಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಪ್ರಧಾನಿ ಮೋದಿ ಬಗ್ಗೆ ಹಗುರವಾಗಿ ಮಾತನಾಡಿದ ಪಾಕಿಸ್ತಾನದ ಬಿಲಾವಾಲ್ ಭೂಟ್ಟೋ ಪ್ರಪಂಚದ ಮುಂದೆ ಮೋದಿ ಅವರಿಗೆ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು.
ಬಳಿಕ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಕುಕ್ಕರ್ ಬ್ಲಾಸ್ಟ ಮಾಡಿದ ಉಗ್ರನ ಪರ ಮಾತನಾಡುತ್ತಾರೆ. ಕುಕ್ಕರ್ ಬ್ಲಾಸ್ಟ ಮಾಡಿದವನು ಭಯೋತ್ಪಾದಕ ಅಲ್ಲ ಎಂದು ಹೇಳುತ್ತಿದ್ದಾರೆ. ಆತನ ಮೇಲೆ ಅನೇಕ ಪ್ರಕರಣಗಳಿವೆ, ಆದರೂ ಆತನಿಗೆ ಶಿವಕುಮಾರ್ ಬೆಂಬಲವಾಗಿ ಮಾತನಾಡುವುದು ಎಷ್ಟು ಸರಿ. ಈ ಹಿಂದೆ ಕೇಂದ್ರ ಸರ್ಕಾರ ಪಿಎಫ್ಐ ಬ್ಯಾನ್ ಮಾಡಿದಾಗ ಸಹ ಇದೇ ರೀತಿಯ ಹೇಳಿಕೆಯನ್ನ ಅವರು ನೀಡಿದ್ದರು ಎಂದರು.
ಡಿ.19 ರಂದು ಬೆಳಗಾವಿಯಲ್ಲಿ ಕಾಂಗ್ರೆಸ್ ಪಕ್ಷದ ಶಾಸಕಾಂಗ ಸಭೆ ನಡೆಯಲಿದ್ದು, ಅಲ್ಲಿ ಡಿ.ಕೆ.ಶಿವಕುಮಾರ್ ಅವರನ್ನು ಪಕ್ಷದಿಂದ ಹೊರಹಾಕುವ ನಿರ್ಣಯ ಮಾಡಬೇಕು ಎಂದು ಎಐಸಿಸಿ ಅಧ್ಯಕ್ಷ ಖರ್ಗೆ ಅವರಿಗೆ ಮನವಿ ಮಾಡಿದರು. ಖರ್ಗೆ ಅವರು ಡಿಕೆಶಿ ಹಾಗೂ ನಲಪಾಡ್ರನ್ನು ಪಕ್ಷದಲ್ಲಿಯೇ ಉಳಿಸಿಕೊಂಡ್ರೆ ಕಾಂಗ್ರೆಸ್ ಪಕ್ಷ ದೇಶದ್ರೋಹಿ ಪಕ್ಷವಾಗುತ್ತದೆ. ಪಿಎಫ್ಐ ರೀತಿ ಕಾಂಗ್ರೆಸ್ ಪಕ್ಷ ಸಹ ಬ್ಯಾನ್ ಮಾಡುವ ಸ್ಥಿತಿ ಅದಷ್ಟು ಬೇಗ ಬರುತ್ತದೆ ಎಂದರು.
ಇದನ್ನೂ ಓದಿ: ಪಕ್ಷ ಬೆಳೆಸಿದವರನ್ನೇ ಹೊರ ಹಾಕುವುದು ಬಿಜೆಪಿ ಸಂಸ್ಕೃತಿ : ಶಿವರಾಜ ತಂಗಡಗಿ