ಶಿವಮೊಗ್ಗ: ಕೊರೊನಾ ಲಾಕ್ಡೌನ್ ಹಿನ್ನೆಲೆಯಲ್ಲಿ ಮದ್ಯ ನಿಷೇಧ ಮಾಡಿರುವುದು ಶ್ಲಾಘನೀಯವಾಗಿದೆ. ಲಾಕ್ಡೌನ್ ನಂತರವೂ ಮದ್ಯಪಾನ ಮಾರಾಟವನ್ನು ಮುಂದುವರಿಸದೇ ಶಾಶ್ವತವಾಗಿ ನಮ್ಮ ರಾಜ್ಯದಲ್ಲಿ ನಿಷೇಧ ಮಾಡಬೇಕು ಎಂದು ರಾಜ್ಯ ರೈತ ಸಂಘ ಇಂದು ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದೆ.
ಲಾಕ್ಡೌನ್ ಘೋಷಣೆ ಮಾಡಿದ ಒಂದು ತಿಂಗಳಿನಿಂದ ಮದ್ಯಪಾನದ ಮಾರಾಟ ಸ್ಥಗಿತಗೊಂಡಿದೆ. ಇದರಿಂದಾಗಿ ಮದ್ಯವ್ಯಸನಿಗಳು ಹಂತಹಂತವಾಗಿ ಕುಡಿಯುವುದನ್ನು ಬಿಡುತ್ತಿದ್ದಾರೆ. ಇದೇ ರೀತಿ ಮುಂದುವರೆಸಿದರೆ, ಮದ್ಯವ್ಯಸನಿಗಳಿಗು ಹಾಗೂ ಸಮಾಜಕ್ಕೆ ಒಳಿತಾಗಲಿದೆ ಎಂದು ರಾಜ್ಯ ರೈತ ಸಂಘದ ಉಪಾಧ್ಯಕ್ಷ ಹಿಟ್ಟೂರು ರಾಜು ಅಭಿಪ್ರಾಯಪಟ್ಟಿದ್ದಾರೆ.
ಗ್ರಾಮೀಣ ಪ್ರದೇಶಗಳಲ್ಲಿ ಮದ್ಯಪಾನ ಮಾಡುತ್ತಿದ್ದವರು ಇದೀಗ ಅದೇ ಹಣದಲ್ಲಿ ಮನೆಗೆ ದಿನಸಿ, ಹಣ್ಣು ತೆಗೆದುಕೊಂಡು ಹೋಗುತ್ತಿದ್ದಾರೆ. ಅವರ ಜೇಬಲ್ಲಿ ಹಣ ಉಳಿಯುವಂತೆ ಆಗಿದೆ. ಈ ಎಲ್ಲ ಕಾರಣಗಳಿಂದಾಗಿ ರಾಜ್ಯ ಸರ್ಕಾರ ಮದ್ಯಪಾನವನ್ನು ನಿಷೇಧಿಸುವುದು ಒಳಿತು ಎಂದು ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.