ETV Bharat / state

ಈ ಬಾರಿ ಕುಮಾರಸ್ವಾಮಿ ನೇತೃತ್ವದ ಸರ್ಕಾರ ರಚನೆಯಾಗುತ್ತದೆ: ಆಯನೂರು ಮಂಜುನಾಥ್ - etv bharat kannada

ಸ್ವಂತ ಕಾಲ ಮೇಲೆ ಅಲ್ಲದೇ ಹೋದರು, ಜೆಡಿಎಸ್ ನೇತೃತ್ವದಿಂದಲೇ ಸರ್ಕಾರ ರಚನೆಯಾಗುತ್ತದೆ ಎಂಬ ನಂಬಿಕೆ ಜನರಲ್ಲಿದೆ ಎಂದು ಆಯನೂರು ಮಂಜುನಾಥ್ ಹೇಳಿದರು.

ayanur-manjunath-reaction-on-election
ಜೆಡಿಎಸ್ ಅಭ್ಯರ್ಥಿ ಆಯನೂರು ಮಂಜುನಾಥ್
author img

By

Published : Apr 26, 2023, 3:55 PM IST

ಜೆಡಿಎಸ್ ಅಭ್ಯರ್ಥಿ ಆಯನೂರು ಮಂಜುನಾಥ್

ಶಿವಮೊಗ್ಗ: ಎರಡು ಪಕ್ಷಗಳ ರಾಷ್ಟ್ರೀಯ ನಾಯಕರುಗಳು ಬಂದಾಗ ರಾಜ್ಯದಲ್ಲಿ ಹೇಗೆ ಜನ ಸೇರ್ತಾರೂ ಹಾಗೆ ಒಂಟಿ ಸಲಗದಂತೆ ಕುಮಾರಸ್ವಾಮಿ ಬಂದಾಗಲೂ ಅಷ್ಟೇ ಜನ ಸೇರ್ತಾರೆ ಎಂದು ಶಿವಮೊಗ್ಗ ನಗರದ ಜೆಡಿಎಸ್ ಅಭ್ಯರ್ಥಿ ಆಯನೂರು ಮಂಜುನಾಥ್ ಹೇಳಿದರು. ಇಂದು ಶಿವಮೊಗ್ಗದ ನವಲೆ ಬಡಾವಣೆಯ ಆಂಜನೇಯ ದೇವಾಲಯದಲ್ಲಿ ಪೂಜೆ ಸಲ್ಲಿಸಿ ತಮ್ಮ ಚುನಾವಣಾ ಪ್ರಚಾರ ಪ್ರಾರಂಭಿಸಿ ಅವರು ಮಾತನಾಡಿದರು.

ಜನರ ಪ್ರತಿಕ್ರಿಯೆ ಮತ್ತಷ್ಟು ಧೈರ್ಯ ಹಾಗೂ ಉತ್ಸಾಹವನ್ನು ತುಂಬಿದೆ. ಇಂದಿನಿಂದ ಪ್ರಚಾರ ಪ್ರಾರಂಭ ಮಾಡಿ ಕೊನೆಯವರೆಗೂ ಇದೇ ವೇಗವನ್ನು ಉಳಿಸಿಕೊಂಡು ಗೆಲುವಿನ ದಡವನ್ನು ಸೇರುತ್ತೇವೆ ಎಂಬ ಭರವಸೆ ಇದೆ. ವಿರೋಧ ಪಕ್ಷದವರ ರಸ್ತೆಯ ಮೇಲೆ ನೀರು ಹರಿಯುತ್ತಿದ್ದರೆ, ನಮ್ಮದು ಚಾಪೆ ಕೆಳಗೆ ನೀರು ಹರಿಯುತ್ತಿದೆ. ವಿಶೇಷವಾಗಿ ಒಂದಿಷ್ಟು ಸಮುದಾಯವನ್ನು ಜೆಡಿಎಸ್​ನ ಅಧ್ಯಕ್ಷ ಹಿಡಿದಿಟ್ಟುಕೊಂಡಿದ್ದಾರೆ. ಇನ್ನೊಂದಿಷ್ಟನ್ನು ಪ್ರಸನ್ನ ಅವರು ಬುಡಮೇಲು ಮಾಡುತ್ತಿದ್ದಾರೆ. ಬದಲಾವಣೆ ಬಯಸುವಂತಹ ವಾತಾವರಣ ಜನರಲ್ಲಿ‌ ಇರುವುದರಿಂದ ನಾವು ನಮ್ಮ ತಂತ್ರಗಾರಿಕೆಯನ್ನು ಬಿಟ್ಟು‌ಕೊಟ್ಟರೆ ಎದುರಾಳಿಗಳಿಗೆ ನಮ್ಮ ಗುಟ್ಟನ್ನು ಬಿಟ್ಟು‌ಕೊಟ್ಟಂತೆ ಆಗುತ್ತದೆ ಎಂದರು.

ಒಂದು ಹಂತದಲ್ಲಿ ಇಬ್ಬರು ಅಭ್ಯರ್ಥಿಗಳು ಸಮವಾಗಿದ್ದೇವೆ. ಇನ್ನೆರಡು ದಿನಗಳಲ್ಲಿ ಇಬ್ಬರನ್ನು ದಾಟಿ ಮುಂದೆ ಹೋಗುತ್ತೇವೆ ಎಂದರು. ರಾಷ್ಟ್ರೀಯ ಪಕ್ಷಗಳಿಂದ ಕಾರ್ಯಕರ್ತರು ಬಂದು ಸೇರ್ಪಡೆಯಾಗುತ್ತಾರೆ. ಎರಡು ರಾಷ್ಟ್ರೀಯ ಪಕ್ಷದ ಅಭ್ಯರ್ಥಿಗಳ ಕುರಿತು ಜನ ನಿರಾಸೆಯನ್ನು ಹೊಂದಿದ್ದಾರೆ. ಅವರ ಸ್ವಭಾವ ಹಾಗೂ ಹಿನ್ನೆಲೆಯನ್ನು ಅರ್ಥ ಮಾಡಿಕೊಂಡಿದ್ದಾರೆ. ಹಾಗಾಗಿ ಜೆಡಿಎಸ್​ಗೆ ಖಚಿತವಾಗಿ ಮತ ನೀಡುತ್ತಾರೆ. ಅತಿ ಹೆಚ್ಚು ಸ್ಥಾನಗಳನ್ನು ಜೆಡಿಎಸ್​ ಗಳಿಸುತ್ತದೆ. ಸ್ವಂತ ಕಾಲ ಮೇಲೆ ಅಲ್ಲದೇ ಹೋದರು ಜೆಡಿಎಸ್ ನೇತೃತ್ವದಲ್ಲೇ ಸರ್ಕಾರ ರಚನೆಯಾಗುತ್ತದೆ ಎಂಬ ನಂಬಿಕೆ ಜನರಲ್ಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಅಂತಿಮವಾಗಿ ಕುಮಾರಸ್ವಾಮಿ ನೇತೃತ್ವದ ಸರ್ಕಾರ ರಚನೆಯಾಗುತ್ತದೆ ಎಂಬ ವಿಶ್ವಾಸ ಜನರಲ್ಲಿ ಮೂಡಿದೆ. ಇಲ್ಲೂ ಸಹ ಅದೇ ರೀತಿ ನಡೆಯುತ್ತದೆ. 1 ನೇ ತಾರೀಖಿನಷ್ಟೂತ್ತಿಗೆ ಈಗ ಇರುವ ಸ್ಥಿತಿ ಬದಲಾಗುತ್ತದೆ‌. 10ನೇ ತಾರೀಖಿನಷ್ಟೂತ್ತಿಗೆ ಸಂಪೂರ್ಣವಾಗಿ ಜನರ ಒಲವು ನಮ್ಮ‌ ಪರವಾಗಿ ಬರುತ್ತದೆ. 13ನೇ ತಾರೀಖು ಫಲಿತಾಂಶ ನಮ್ಮ ಪರವಾಗಿಯೇ ಬರುತ್ತದೆ. ಈಗ ನನಗೆ ಇಬ್ಬರು ಎದುರಾಳಿಗಳಿದ್ದಾರೆ, ಇನ್ನು ಸ್ವಲ್ಪ ದಿನದಲ್ಲಿ ಒಬ್ಬರಾಗುತ್ತಾರೆ ಎಂದರು.

ಮೋದಿ ಅಲೆ ವರ್ಕೌಟ್​ ಆಗುತ್ತೆ ಅನ್ನುವುದು ಲೋಕಸಭಾ ಚುನಾವಣೆಯಲ್ಲಿ. ಈಗ ಪ್ರಾದೇಶಿಕವಾಗಿ ಸಿಗುವಂತವರ ಮುಖವನ್ನು ನೋಡುತ್ತಾರೆ. ರಾಜ್ಯ ಮಟ್ಟದಲ್ಲಿ ಕುಮಾರಸ್ವಾಮಿಯವರು ಭರವಸೆಯನ್ನು ಮೂಡಿಸಿದ್ದಾರೆ. ಎರಡು ಪಕ್ಷಗಳ ರಾಷ್ಟ್ರೀಯ ನಾಯಕರುಗಳು ಬಂದಾಗ ರಾಜ್ಯದಲ್ಲಿ ಹೇಗೆ ಜನ ಸೇರ್ತಾರೂ, ಹಾಗೆ ಒಂಟಿ ಸಲಗದಂತೆ ಕುಮಾರಸ್ವಾಮಿ ಬಂದಾಗಲೂ ಅಷ್ಟೇ ಜನ ಸೇರ್ತಾರೆ ಎಂದು ಆಯನೂರು ಹೇಳಿದ್ರು.

ನಂತರ ಮಾತನಾಡಿದ ಜೆಡಿಎಸ್ ಮುಖಂಡ ಕೆ.ಬಿ. ಪ್ರಸನ್ನ ಕುಮಾರ್, ರಾಜರು ಯುದ್ಧಕ್ಕೆ ಹೊರಡುವಾಗ ಆಂಜನೇಯನಿಗೆ ಪೂಜೆ ಸಲ್ಲಿಸಿ ಹೂರಡುತ್ತಿದ್ದರು. ಅದೇ ರೀತಿ ನಾವು ಸಹ ಚುನಾವಣಾ ಯುದ್ಧಕ್ಕೆ ಹೊರಟಿದ್ದೀವಿ. ಆಯನೂರು ಮಂಜುನಾಥ್ ಯುದ್ಧದಲ್ಲಿ ಗೆಲ್ಲೋದು ಖಚಿತ. ಜೆಡಿಎಸ್ ಬಾವುಟ ಶಿವಮೊಗ್ಗ ನಗರದಲ್ಲಿ ಹಾರಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಕಾಂಗ್ರೆಸ್ ನಿಂದ ಸಾಕಷ್ಟು ಜನ ಜೆಡಿಎಸ್​ಗೆ ಬರ್ತಾರೆ ಎಂದರು. ಈ ವೇಳೆ ಜೆಡಿಎಸ್ ಜಿಲ್ಲಾಧ್ಯಕ್ಷ ಎಂ. ಶ್ರೀಕಾಂತ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

ಇದನ್ನೂ ಓದಿ: ಪ್ರಚಾರಕ್ಕೆ ಪ್ರಧಾನಿಯನ್ನಾದರೂ ಕರೆಸಿಕೊಳ್ಳಲಿ, ಅಮೆರಿಕ ಅಧ್ಯಕ್ಷರನ್ನಾದರೂ ಕರೆಸಿಕೊಳ್ಳಲಿ: ಆತಂಕ ಇಲ್ಲ ಎಂದ ಹೆಚ್​​​ಡಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.