ETV Bharat / state

ಶಿವಮೊಗ್ಗ ಗ್ರಾಮಾಂತರ ಶಾಸಕ ಅಶೋಕ ನಾಯ್ಕಗೆ ಕೊರೊನಾ‌ ಪಾಸಿಟಿವ್! - mla tests positive for covid-19

ಶಿವಮೊಗ್ಗ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಈ ನಡುವೆ ಸ್ವಯಂ ತಪಾಸಣೆಗೆ ಒಳಗಾಗಿದ್ದ ಕಾಂಗ್ರೆಸ್​ನ ಮತ್ತೊಬ್ಬ​ ಶಾಸಕರಲ್ಲಿ ಸೋಂಕು ದೃಢಪಟ್ಟಿದ್ದು ಐಸೋಲೇಷನ್​ಗೆ ತೆರಳಿದ್ದಾರೆ.

Another congress mla tests positive for covid-19
ಶಿವಮೊಗ್ಗ ಗ್ರಾಮಾಂತರ ಶಾಸಕ ಅಶೋಕ ನಾಯ್ಕಗೆ ಕೊರೊನಾ‌ ಪಾಸಿಟಿವ್
author img

By

Published : Oct 5, 2020, 7:49 PM IST

ಶಿವಮೊಗ್ಗ: ಶಿವಮೊಗ್ಗ ಗ್ರಾಮಾಂತರ ಶಾಸಕ ಕೆ.ಬಿ.ಅಶೋಕ ನಾಯ್ಕ ಅವರಿಗೆ ಇಂದು ಕೊರೊನಾ ದೃಢಪಟ್ಟಿದೆ. ನಿನ್ನೆ ಅವರಲ್ಲಿ ಸಣ್ಣ ಜ್ವರ ಕಾಣಿಸಿಕೊಂಡಿತ್ತು. ಇದಾದ ನಂತರ ಸ್ವಯಂ ತಪಾಸಣೆಗೆ ಒಳಗಾಗಿದ್ದರು. ಇಂದು ಕೊರೊನಾ ಪಾಸಿಟಿವ್ ದೃಢವಾಗಿದೆ.

ಕೊರೊನಾ ಸೋಂಕು ಇರುವುದು ದೃಢವಾಗುತ್ತಿದ್ದಂತೆ ಶಾಸಕ ಅಶೋಕ ನಾಯ್ಕ ಅವರು ತಮ್ಮ ಮನೆಯಲ್ಲಿಯೇ ಐಸೋಲೇಷನ್​ಗೆ ಒಳಗಾಗಿದ್ದಾರೆ. ಇದಕ್ಕೂ ಮುನ್ನ ಅಶೋಕ ನಾಯ್ಕ ಕೊರೊನಾ ಪರೀಕ್ಷೆಗೆ ಒಳಗಾಗಿದ್ದಾಗ ನೆಗೆಟಿವ್ ಬಂದಿತ್ತು. ಇದೀಗ ಮತ್ತೆ ಪರೀಕ್ಷೆ ಮಾಡಿಸಿದ್ದರಿಂದ ಪಾಸಿಟಿವ್ ದೃಢವಾಗಿದೆ. ಎಲ್ಲರ ಆಶೀರ್ವಾದ ಮತ್ತು ಶುಭಾಶಯಗಳೊಂದಿಗೆ ತಾವು ಶೀಘ್ರದಲ್ಲೇ ಚೇತರಿಸಿಕೊಳ್ಳುವುದಾಗಿಯೂ ತಿಳಿಸಿರುವ ಶಾಸಕರು, ತಮ್ಮ ಜೊತೆ ನಾಲ್ಕೈದು ದಿನಗಳಿಂದ ಇದ್ದ ಪಕ್ಷದ ಕಾರ್ಯಕರ್ತರು ಹಾಗೂ ಹಿತೈಷಿಗಳು ಕೊರೊನಾ ಪರೀಕ್ಷೆಗೆ ಒಳಗಾಗುವಂತೆ ಮನವಿ ಮಾಡಿಕೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.