ETV Bharat / state

ಕಿವಿ ಹಿಂಡಿ ವಿದ್ಯೆ ಕಲಿಸೋ ಶಿಕ್ಷಕಿ ಮಕ್ಕಳ ಹೃದಯಕ್ಕೆ ಕಿವಿಯಾದಳು.. - Shimoga news

ಹೆತ್ತವಳು ಮಾತ್ರ ತಾಯಿಯಲ್ಲ, ಮಕ್ಕಳ ಕಷ್ಟಕ್ಕೆ ನೆರವಾಗುವ ಪ್ರತಿಯೊಬ್ಬರೂ ಕೂಡಾ ತಾಯಂದಿರೇ. ಇಲ್ಲೊಬ್ಬ ಶಿಕ್ಷಕಿ ಮಕ್ಕಳ ಕಷ್ಟಕ್ಕೆ ಮರುಗುತ್ತಿದ್ದಾರೆ. ಬರೇ ಮರುಗಲಿಲ್ಲ. ಈವರೆಗೂ 383 ಮಕ್ಕಳಿಗೆ ಹೃದಯದ ಆಪರೇಷನ್​ ಮಾಡಿಸಿ, ಪ್ರಾಣ ಉಳಿಸಿದ್ದಾರೆ. ಹಾಗಾದ್ರೆ, ಆ ಮಹಾತಾಯಿ ಯಾರು? ಬನ್ನಿ ನೋಡೋಣ

Anitha teacher
ಅನಿತಾ ಮೇರಿ
author img

By

Published : May 10, 2020, 12:42 PM IST

ಶಿವಮೊಗ್ಗ: ಇವರ ಹೆಸರು ಅನಿತಾ ಮೇರಿ. ಶಿವಮೊಗ್ಗದ ಭದ್ರಾವತಿಯ ದೊಣಬಘಟ್ಟ ಸರ್ಕಾರಿ‌ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡ್ತಾರೆ. ಮಕ್ಕಳನ್ನು ತಿದ್ದಿ ಬುದ್ಧಿ ಹೇಳೋದು ಮಾತ್ರವಲ್ಲ; ಮಕ್ಕಳ ಕಷ್ಟಕ್ಕೆ ಮರುಗುವ ದೊಡ್ಡ ಗುಣ ಇವರದ್ದು. ಹೌದು, ಸುಮಾರು 383 ಮಕ್ಕಳ ಮಾರಕವಾಗಿದ್ದ ಹೃದಯಸಂಬಂಧಿ ಕಾಯಿಲೆಗೆ ಚಿಕಿತ್ಸೆ ನೀಡಿ, ಮಕ್ಕಳನ್ನು ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ ಈ ಮಹಾತಾಯಿ. ಚಿಕ್ಕ ವಯಸ್ಸಿನಲ್ಲಿ ಅನಾರೋಗ್ಯಕ್ಕೆ ತುತ್ತಾಗಿದ್ದ ತಂಗಿಯ ಚಿಕಿತ್ಸೆಗೆ ಹಣವಿಲ್ಲದೇ ಆಕೆ ತೀರಿಕೊಂಡಿದ್ದರು. ಈ ಕಹಿ ಘಟನೆ ಇವರ ಮನಸ್ಸು ಬದಲಿಸಿದೆ. ಒಡಹುಟ್ಟಿದ ಸಹೋದರಿಯನ್ನು ಕಳೆದುಕೊಂಡ ಇವರು ಬಡಮಕ್ಕಳ ಆರೋಗ್ಯದ ಕಡೆ ಗಮನ ಹರಿಸೋಕೆ ಶುರು ಮಾಡಿದ್ದಾರೆ.

ಹೃದಯ ಸಂಬಂಧಿ ಕಾಯಿಲೆ ಮಕ್ಕಳಿಗೆ ಪುನರ್ಜನ್ಮ ನೀಡಿ ತಾಯಿಯಾದ ಅನಿತಾ ಮೇರಿ

ರಾಷ್ಟ್ರೀಯ ಸ್ವಾಸ್ಥ್ಯ ಬಿಮಾ ಯೋಜನೆಯಡಿ ರಾಜ್ಯದ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಮಕ್ಕಳಿಗೆ ಆಪರೇಷನ್​ ಮಾಡಿಸಲಾಗುತ್ತಿದೆ. ಮಾಹಿತಿಯ ಕೊರತೆಯೋ ಅಥವಾ ಭರವಸೆಯೋ ಕೊರತೆಯೋ? ಚಿಕಿತ್ಸೆ ಕೊಡಿಸೋದ್ರಿಂದ ದೂರ ಉಳಿಯೋ ಫೋಷಕರಿಗೆ ಮಾರ್ಗದರ್ಶನ ಮಾಡೋದಲ್ಲದೇ, ತಾವೇ ಮುಂದೆ ನಿಂತು ಆಪರೇಷನ್​ ಮಾಡಿಸ್ತಾರೆ ಅನಿತಾ ಮೇರಿ. ಇದಕ್ಕಾಗಿ ಇವರು ಬಡವರಿಂದ ಒಂದೇ ಒಂದು ರೂಪಾಯಿ ಹಣವನ್ನೂ ಪಡೆಯೋದಿಲ್ಲ. ಎಲ್ಲ ಖರ್ಚುವೆಚ್ಚಗಳನ್ನೂ ತಾವೇ ನೋಡಿಕೊಳ್ತಾರೆ.

ಸಮಾಜ ಸೇವೆಯನ್ನು ಮುಂದುವರೆಸುವ ಇಚ್ಛೆ ಇರುವ ಇವರಿಗೆ ಟ್ರಸ್ಟೊಂದನ್ನು ಸ್ಥಾಪಿಸುವ ಇಚ್ಚೆಯಿದೆ. ಇದಕ್ಕೆ ಮನೆಯವರೂ ಕೂಡಾ ಸಂಪೂರ್ಣ ಬೆಂಬಲ ನೀಡ್ತಿದ್ದಾರೆ. ಕೊನೆಯುಸಿರು ಇರುವ ತನಕ ಸಮಾಜಸೇವೆ ಮಾಡ್ತೀನಿ ಅನ್ನೋ ಅನಿತಾ ಮೇರಿಯವರಂಥ ದೊಡ್ಡ ಮನಸ್ಸಿನ ಮಂದಿ ಸಮಾಜದಲ್ಲಿ ಮತ್ತಷ್ಟು ಹೆಚ್ಚಲಿ ಅನ್ನೋದು ಇಲ್ಲಿರುವ ಆಶಯ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.