ಶಿವಮೊಗ್ಗ : ಫಿಶ್ ಫೀಡಿಂಗ್ ಫುಡ್ ತಯಾರಿಕಾ ಘಟಕದಲ್ಲಿ ಅಕ್ರಮವಾಗಿ ದನ - ಕರುಗಳನ್ನು ತಂದು ಅದರಿಂದ ಆಹಾರ ತಯಾರಿಸುತ್ತಿದ್ದ ಆರೋಪ ಕೇಳಿ ಬಂದ ಹಿನ್ನೆಲೆ ಬಜರಂಗ ದಳದವರು ಸ್ಥಳೀಯ ಪೊಲೀಸರ ನೆರವಿನಿಂದ ದಾಳಿ ನಡೆಸಿರುವ ಘಟನೆ ಭದ್ರಾವತಿ ತಾಲೂಕು ಮಾಚೇನಹಳ್ಳಿ ಕೈಗಾರಿಕಾ ವಸಾಹತು ಪ್ರದೇಶದಲ್ಲಿ ನಡೆದಿದೆ.
ಮಾಚೇನಹಳ್ಳಿಯಲ್ಲಿರುವ ಫುಡ್ ತಯಾರಿಕಾ ಘಟಕದಲ್ಲಿ ಕಮಲೇಶ್ ಹಾಗೂ ಇತರರು ಅಕ್ರಮವಾಗಿ ಮೃತ ಜಾನುವಾರುಗಳನ್ನು ತಂದು, ಮಷಿನ್ನಲ್ಲಿ ಹಾಕಿ ಫೀಡಿಂಗ್ ಫುಡ್ ತಯಾರು ಮಾಡುತ್ತಿದ್ದರು ಎಂಬ ಆರೋಪ ಕೇಳಿ ಬಂದಿತ್ತು. ಅಷ್ಟೇ ಅಲ್ಲದೆ, ಈ ಪ್ರದೇಶದಲ್ಲಿ ಸಾಕಷ್ಟು ರ್ದುವಾಸನೆ ಕೂಡ ಬರುತ್ತಿದ್ದು, ಈ ಬಗ್ಗೆ ಸ್ಥಳೀಯರು ಪೊಲೀಸರಿಗೆ ಅನೇಕ ಬಾರಿ ದೂರು ನೀಡಿದ್ದರು. ಇದೀಗ, ಭದ್ರಾವತಿಯ ಬಜರಂಗದಳದವರು ಪೊಲೀಸರ ನೆರವಿನಿಂದ ದಾಳಿ ನಡೆಸಿದ್ದು, ಈ ವೇಳೆ, ಆಹಾರ ತಯಾರಿಕೆ ಘಟಕದಲ್ಲಿ ಜಾನುವಾರುಗಳನ್ನು ಅಕ್ರಮವಾಗಿ ತಂದು ಆಹಾರ ತಯಾರು ಮಾಡುತ್ತಿರುವುದು ಬೆಳಕಿಗೆ ಬಂದಿದೆ.
ತುಂಗಾ ನಗರ ಪೊಲೀಸ್ ಠಾಣೆಯ ಪಿಎಸ್ಐ ಕುಮಾರ ಕರಗುಂದ ನೇತೃತ್ವದಲ್ಲಿ ದಾಳಿ ನಡೆಸಲಾಗಿದ್ದು, ಫುಡ್ ಯೂನಿಟ್ ನಡೆಸುತ್ತಿದ್ದ ಕಮಲೇಶ್, ಜಾಗದ ಮಾಲೀಕ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಜೊತೆಗೆ, ಆರೋಪಿ ಕಮಲೇಶ್ನನ್ನು ಪೊಲೀಸರು ಬಂಧಿಸಿದ್ದಾರೆ.
ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸ್ಥಳೀಯರಾದ ರಂಗರಾಜ್, ಫುಡ್ ತಯಾರಿಕಾ ಘಟಕದಿಂದ ನಮಗೆ ಸಾಕಷ್ಟು ವಾಸನೆ ಬರುತ್ತಿತ್ತು. ಈ ಕುರಿತು ಅನೇಕ ಬಾರಿ ದೂರು ನೀಡಿದ್ದೆವು, ಈಗ ಬಜರಂಗದಳದವರು ಪೊಲೀಸರ ಸಹಾಯದಿಂದ ದಾಳಿ ನಡೆಸಿದ್ದಾರೆ ಎಂದರು.
ಇದನ್ನೂ ಓದಿ : ಗಡಿಯಾಚೆಗೂ ಅಕ್ರಮವಾಗಿ ಗೋಸಾಗಾಟ.. ಪ್ರಕರಣದಲ್ಲಿ ಭಾಗಿಯಾಗಿದ್ದಾರಾ ಅಧಿಕಾರಿಗಳು?
ಜಾನುವಾರು ಕಳ್ಳಸಾಗಣೆ : ಇನ್ನು ಬಾಂಗ್ಲಾದೇಶಕ್ಕೆ ಜಾನುವಾರುಗಳನ್ನು ಕಳ್ಳಸಾಗಣೆ ಮಾಡಲು ಪ್ರಯತ್ನಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಗಡಿ ಭದ್ರತಾ ಪಡೆ (ಬಿಎಸ್ಎಫ್) ಸಿಬ್ಬಂದಿ ಗುಂಡಿಕ್ಕಿ ಕೊಲೆ ಮಾಡಿರುವ ಘಟನೆ ಅಸ್ಸೋಂ ದಕ್ಷಿಣ ಸಲ್ಮಾರಾ ಮಂಕಾಚಾರ್ ಜಿಲ್ಲೆಯಲ್ಲಿ ಕಳೆದ ಸೆಪ್ಟೆಂಬರ್ 22ರಂದು ನಡೆದಿತ್ತು. ಇಂಡೋ - ಬಾಂಗ್ಲಾದೇಶ ಗಡಿಯ ಖರುವಾಬಂಧಾ ಪೊಲೀಸ್ ಠಾಣೆ ವ್ಯಾಪ್ತಿಯ ಪ್ರದೇಶದಲ್ಲಿ ಘಟನೆ ನಡೆದಿತ್ತು. ಸಂಜೆ ವೇಳೆಗೆ ಜಾನುವಾರು ಕಳ್ಳಸಾಗಣೆದಾರರು ಆಕಳುಗಳ ತಲೆಗಳನ್ನು ಬಾಂಗ್ಲಾದೇಶಕ್ಕೆ ಕಳ್ಳಸಾಗಣೆ ಮಾಡಲು ಪ್ರಯತ್ನಿಸುತ್ತಿದ್ದರು. ಈ ಸಮಯದಲ್ಲಿ ಭದ್ರತಾ ಪಡೆಗಳು ಗುಂಡು ಹಾರಿಸಿವೆ.
ಇದನ್ನೂ ಓದಿ : ಉಳ್ಳಾಲ ; ಅಕ್ರಮವಾಗಿ ಗೋಣಿ ಚೀಲದಲ್ಲಿ ಕರು ಸಾಗಾಟ
ಇನ್ನು ಪ್ರತಿ ವರ್ಷ 2 ದಶಲಕ್ಷಕ್ಕೂ ಹೆಚ್ಚು ಜಾನುವಾರುಗಳನ್ನು ಭಾರತದಿಂದ ಬಾಂಗ್ಲಾದೇಶಕ್ಕೆ ಕಳ್ಳಸಾಗಣೆ ಮಾಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ. ಭಾರತ - ಬಾಂಗ್ಲಾದೇಶ ಗಡಿ ಹಲವಾರು ಕಡೆ ಮುಕ್ತವಾಗಿರುವುದರಿಂದ ಇದನ್ನು ತಡೆಗಟ್ಟಲು ಸಾಧ್ಯವಾಗುತ್ತಿಲ್ಲ. ಪಶ್ಚಿಮ ಬಂಗಾಳ ಕಡೆಗೆ ಬಾಂಗ್ಲಾದೇಶದೊಂದಿಗೆ 2,217 ಕಿ.ಮೀ ಗಡಿ ಇದೆ. ಇದರಲ್ಲಿ 579 ಕಿ.ಮೀ ಗಡಿಯಲ್ಲಿ ನದಿಗಳು ಮತ್ತು ದುರ್ಗಮ ಪ್ರದೇಶ ಇರುವುದರಿಂದ ಇಲ್ಲಿ ಬೇಲಿ ಅಳವಡಿಸಲು ಸಾಧ್ಯವಾಗಿಲ್ಲ.
ಇದನ್ನೂ ಓದಿ : ಜಾನುವಾರು ಕಳ್ಳಸಾಗಣೆ ; ಬಿಎಸ್ಎಫ್ ಗುಂಡಿಗೆ ಓರ್ವ ಬಲಿ