ಶಿವಮೊಗ್ಗ: ಸಾರ್ವಕರ್ ಫ್ಲೆಕ್ಸ್ ವಿಚಾರದಲ್ಲಿ ಶಿವಮೊಗ್ಗದಲ್ಲಿ ಉಂಟಾಗಿದ್ದ ಪರಿಸ್ಥಿತಿಯಿಂದ ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆಯ ಎಡಿಜಿಪಿ ಅಲೋಕ್ ಕುಮಾರ್ ಶಿವಮೊಗ್ಗಕ್ಕೆ ಭೇಟಿ ನೀಡಿದ್ದರು. ಈ ವೇಳೆ, ಸಂಸ್ಕೃತ ಗ್ರಾಮ ಮತ್ತೂರಿಗೂ ಭೇಟಿ ನೀಡಿದ್ದಾರೆ. ಇಲ್ಲಿನ ಗ್ರಾಮಸ್ಥರ ಜೊತೆ ಸಂಸ್ಕೃತದಲ್ಲಿಯೇ ಮಾತನಾಡಿದ್ದು, ಆ ವಿಡಿಯೋವನ್ನು ಅಲೋಕ್ ಕುಮಾರ್ ಅವರು ತಮ್ಮ ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ.
ಶಿವಮೊಗ್ಗ ನಗರದಿಂದ 10 ಕಿಮೀ ದೂರವಿರುವ ಮತ್ತೂರು ಗ್ರಾಮಕ್ಕೆ ಅನಿರೀಕ್ಷಿತ ಭೇಟಿ ನೀಡಿದ್ದಾರೆ. ಗ್ರಾಮದಲ್ಲಿ ಸಿಕ್ಕವರ ಜೊತೆ ಸಂಸ್ಕೃತದಲ್ಲಿಯೇ ಮಾತನಾಡಿದ್ದಾರೆ. ಇದು ಒಂದು ರೀತಿ ಸಹಜ ಸಂಭಾಷಣೆ ಎಂಬುವಂತೆ ಇದೆ.
ಈ ವಿಚಾರವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಪೊಸ್ಟ್ ಮಾಡಿದ್ದಾರೆ. 'ಸಂಸ್ಕೃತ ಒಂದು ಶಾಸ್ತ್ರೀಯ ಭಾಷೆ, ಅದರ ದನಿಯೇ ಕಿವಿಗೆ ಸಂಗೀತವಿದ್ದಂತೆ, ಈ ನಿಟ್ಟಿನಲ್ಲಿ ಮತ್ತೂರಿಗೆ ಭೇಟಿ ನೀಡಿ ಅಲ್ಲಿನವರ ಜೊತೆ ಒಂದಿಷ್ಟು ಮಾತುಕತೆ ನಡೆಸಿದೆ. ಎಲ್ಲ ಶಾಸ್ತ್ರೀಯ ಭಾಷೆಗಳನ್ನು ರಕ್ಷಿಸುವ ಹಾಗೂ ಪ್ರೋತ್ಸಾಹಿಸುವ ಅಗತ್ಯತೆ ಇದೆ' ಎಂದು ಅಲೊಕ್ ಕುಮಾರ್ ಬರೆದುಕೊಂಡಿದ್ದಾರೆ.
ಇದನ್ನೂ ಓದಿ : ಸರಣಿ ಹತ್ಯೆ; ಸಂಘಟನೆಗಳ ಪಾತ್ರವಿದ್ದರೆ ಚಾರ್ಜ್ ಶೀಟ್ನಲ್ಲಿ ಅದನ್ನೂ ದಾಖಲಿಸುತ್ತೇವೆ: ಡಿಜಿಪಿ ಸೂದ್
-
During my Shivamogga stay visited Mattur village, known as “ Sanskrit village of India” .
— alok kumar (@alokkumar6994) August 18, 2022 " class="align-text-top noRightClick twitterSection" data="
Sanskrit is a classical language and sounds music to the ears.
Had brief interaction in Sanskrit with the villagers.
All Classical languages needs to be preserved & promoted pic.twitter.com/9eOorLJRfA
">During my Shivamogga stay visited Mattur village, known as “ Sanskrit village of India” .
— alok kumar (@alokkumar6994) August 18, 2022
Sanskrit is a classical language and sounds music to the ears.
Had brief interaction in Sanskrit with the villagers.
All Classical languages needs to be preserved & promoted pic.twitter.com/9eOorLJRfADuring my Shivamogga stay visited Mattur village, known as “ Sanskrit village of India” .