ETV Bharat / state

ಬಜರಂಗದಳಕ್ಕಾಗಿ ಕೆಲಸ ಮಾಡ್ತಿಯಾ ಎಂದು ಕೊಲೆ ಬೆದರಿಕೆ: ಮೂವರ ಬಂಧನ..

ಶಿವಮೊಗ್ಗದ ನ್ಯೂ ಮಂಡ್ಲಿಯ ರೈಸ್ ಮಿಲ್ ಬಳಿ ಭರತ್ ಎಂಬಾತನ ಸ್ನೇಹಿತನನ್ನು ತಡೆದ ನಾಲ್ವರು ಯುವಕರು 'ನಿನ್ನ ಸ್ನೇಹಿತ ಭಜರಂಗದಳದಲ್ಲಿ ಕೆಲಸ ಮಾಡುತ್ತಿದ್ದಾನೆ ಅಲ್ವಾ?. ಅವನನ್ನು ಬಿಡಲ್ಲ. ರಾತ್ರಿ ಎಷ್ಟು ಹೊತ್ತು ಆದ್ರೂ ಬಿಡದೇ ಹೊಡೆಯುತ್ತೇವೆ' ಎಂದು ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.

ದೊಡ್ಡಪೇಟೆ ಪೊಲೀಸ್ ಠಾಣೆ
ದೊಡ್ಡಪೇಟೆ ಪೊಲೀಸ್ ಠಾಣೆ
author img

By

Published : Apr 25, 2022, 5:23 PM IST

ಶಿವಮೊಗ್ಗ: ಬಜರಂಗದಳದ ಕಾರ್ಯಕರ್ತನಿಗೆ ಜೀವ ಬೆದರಿಕೆ ಹಾಕಿದ ಆರೋಪದಡಿ ಮೂವರನ್ನು ಬಂಧಿಸಿರುವ ಘಟನೆ ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ನ್ಯೂ ಮಂಡ್ಲಿಯಲ್ಲಿ ನಡೆದಿದೆ. ಭರತ ಎಂಬಾತನ ಸ್ನೇಹಿತನಿಗೆ ನ್ಯೂ ಮಂಡ್ಲಿಯ ರೈಸ್ ಮಿಲ್ ಬಳಿ ತಡೆದ ನಾಲ್ವರು ಯುವಕರು ಲಾಂಗ್, ಮಚ್ಚು, ಚಾಕು ತೋರಿಸಿ ನಿನ್ನ ಸ್ನೇಹಿತನಿಗೆ ಹೇಳು ಅವನು ಬಜರಂಗದಳದಲ್ಲಿ ಕೆಲಸ ಮಾಡ್ತಾನೆ ಅಲ್ವಾ, ಅವನಿಗೆ ಬಿಡಲ್ಲ, ರಾತ್ರಿ ಎಷ್ಟು ಹೊತ್ತು ಆದ್ರೂ ಬಿಡಲ್ಲ. ಹೊಡೆಯುತ್ತೇವೆ ಅಂತ ಆವಾಜ್ ಹಾಕಿ ಕಳುಹಿಸಿದ್ದಾರೆ.

ಈ ವಿಚಾರವನ್ನು ಭರತನ ಸ್ನೇಹಿತ ಭರತನಿಗೆ ತಿಳಿಸಿದ್ದಾನೆ. ಇದರಿಂದ ಭರತ್ ದೊಡ್ಡ ಪೇಟೆ ಪೊಲೀಸ್ ಠಾಣೆಗೆ ಬಂದು ನಾಲ್ವರು ನನ್ನ ಕೊಲೆಗೆ ಸಂಚು‌ ರೂಪಿಸಿದ್ದಾರೆ. ಇದರಿಂದ ನನಗೆ ರಕ್ಷಣೆ ನೀಡಿ ಎಂದು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾನೆ. ತನಿಖೆ ನಡೆಸಿದ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಆದರೆ, ಓರ್ವ ಪರಾರಿಯಾಗಿದ್ದಾನೆ. ಆತನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಓದಿ: ನೈಸ್​ಗೆ ಹೆಚ್ಚುವರಿಯಾಗಿ ನೀಡಿರುವ 543 ಎಕರೆ ಭೂಮಿ ವಾಪಸ್‌: ಸಚಿವ ಎಸ್. ಟಿ. ಸೋಮಶೇಖರ್

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.